ಗಂಗಾವತಿ: ಮಹರ್ಷಿ ವಾಲ್ಮೀಕಿ ಜಗತ್ತಿನ ಕಾವ್ಯಾಧಿಪತಿಯಾಗಿದ್ದಾರೆ ಎಂದು ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಕರಿಗೂಳಿ ಹೇಳಿದರು.
ಮಹರ್ಷಿ ವಾಲ್ಮೀಕಿ ಕಾವ್ಯದ ಮೂಲಕ ಆದರ್ಶ ಸಮಾಜಕ್ಕೆ ಬೇಕಾದ ನೈತಿಕ ಸಂದೇಶ ಸಾಗಿಸುವ ರೂವಾರಿಯಾಗಿದ್ದಾರೆ, ವಿಶ್ವದ ಸಾವಿರಾರು ವಿಧದ ರಾಮಾಯಣ ಕೃತಿಗಳಿಗೆ ಮೂಲ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ, ಪುರುಷೋತ್ತಮನನ್ನು ಪ್ರಪಂಚಕ್ಕೆ ತನ್ನ ಕಾವ್ಯದ ಮೂಲಕ ಪರಿಚಯಿಸಿದ ಕೀರ್ತಿ ಮಹರ್ಷಿಯವರಿಗೆ ಸಲ್ಲುತ್ತದೆ ಎಂದರು.
ಸಹಾಯಕ ಪ್ರಾಧ್ಯಾಪಕ ವಿರುಪಾಕ್ಷ ಮಹರ್ಷಿ ವಾಲ್ಮೀಕಿ ಕಟ್ಟಿಕೊಟ್ಟ ಮಹಾಕಾವ್ಯವು ರಾಮನ ಆದರ್ಶ ಹೇಳುವ ಮುಖಾಂತರ ನಮಗೆ ಪ್ರಜಾತಾಂತ್ರಿಕ ಮೌಲ್ಯ ತಿಳಿಸುತ್ತದೆ. ಆ ಪ್ರಜಾತಾಂತ್ರಿಕ ಮೌಲ್ಯ ಸಮಕಾಲೀನಗೊಳಿಸಿ ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ, ಹಾಗಾಗಿ ಅಂತಹ ಗುರುತರ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕ ಶಂಕ್ರಪ್ಪ ಎಂ,ಸರಫರಾಜ್ ಅಹ್ಮದ್, ವೀರೇಶ, ಐಕ್ಯೂಎಸಿ ಸಂಚಾಲಕ ರವಿಕುಮಾರ, ಡಾ.ಶಶಿಕುಮಾರ, ವೆಂಕಟರಾಜು, ದೇವರಾಜ ಹೊಸಮನಿ, ಜಬೀನಾ ಬೇಗಂ, ವಿನಾಯಕ, ಚಿನ್ನ ವರಪ್ರಸಾದ್, ಶಾಂತಿ ಶರಣ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.