ಕನ್ನಡಪ್ರಭ ವಾರ್ತೆ ಹನೂರು
ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಹಾಗೂ ಮೆಂದರೆ ಗ್ರಾಮದ ನಿವಾಸಿಗಳಿಗೆ ಮತದಾನ ವೇಳೆ ನಡೆದ ಘರ್ಷಣೆಯ ಬಗ್ಗೆ ಅವರು ಮಾತನಾಡಿದರು. ಏ.26ರಂದು ಇಂಡಿಗನತ್ತ ಗ್ರಾಮದಲ್ಲಿ ಮತದಾನ ವೇಳೆ ನಡೆದ ಘರ್ಷಣೆ ಹಾಗೂ ಮತಗಟ್ಟೆ ಧ್ವಂಸ ಮಾಡಿದ ಘಟನೆಯಿಂದ ಗ್ರಾಮದಲ್ಲಿ ನಿವಾಸಿಗಳ ಮೇಲೆ ಮೂರು ಪ್ರಕರಣಗಳು ದಾಖಲಾಗಿವೆ. ಈ ವಿಚಾರವಾಗಿ ಪೊಲೀಸರು ಹೆಂಗಸರು ಮಕ್ಕಳು ಎನ್ನದೆ ಘಟನೆಗೆ ಕಾರಣರಾದವರನ್ನು ಬಂಧಿಸಲಿ, ಸಂಬಂಧ ಇಲ್ಲದವರನ್ನು ವಶಕ್ಕೆ ಪಡೆದು ಜೈಲಿಗೆ ಕಳಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದರು.
ಘಟನೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಾರಣರಾಗಿದ್ದು, ಅನಾದಿಕಾಲದಿಂದಲೂ ಈ ಭಾಗದ ಮಲೆ ಮಾದೇಶ್ವರ ರನ್ನು ಪೂಜೆ ಮಾಡುವ ಮಕ್ಕಳಿಂದೆ ಬಿಂಬಿಸುವ ಕಾಡಿನ ಮಕ್ಕಳ ನಡುವೆ ವಿಷದ ಬೀಜ ಬಿತ್ತಿ ಎರಡು ಗ್ರಾಮಗಳ ನಡುವೆ ಘರ್ಷಣೆ ನಡೆಯಲು ಕಾರಣರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಮಧ್ಯಪ್ರವೇಶಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಈ ಘಟನೆಯಿಂದ ಇಂಡಿಗನತ್ತ ಗ್ರಾಮದಲ್ಲಿ ಬಂಧನ ಭೀತಿಯಿಂದ ಇಡೀ ಗ್ರಾಮವೇ ಖಾಲಿ ಖಾಲಿ ಮನೆಗಳ ಬೀಗ ಜಡಿದು ತಲೆಮೆರೆಸಿಕೊಂಡಿದ್ದಾರೆ. ಅಲ್ಲಿರುವ ಹೆಂಗಸರು ಮಕ್ಕಳನ್ನು ನಿಮ್ಮ ತಂದೆ ತಾಯಿ, ಕುಟುಂಬದವರು ಎಲ್ಲಿದ್ದಾರೆ ಎಂದು ಹೆದರಿಸುತಿದ್ದಾರೆ ಎಂದು ಆರೋಪಿಸಿದರು.ಮೂಲಭೂತ ಸೌಲಭ್ಯ ಕಲ್ಪಿಸಿ:
ಇಂಡಿಗನತ್ತ, ಮೆಂದರೆ ಹಾಗೂ ವಿವಿಧ ಗ್ರಾಮಗಳಲ್ಲಿ ಅವಿದ್ಯಾವಂತ ನಿರುದ್ಯೋಗಿಗಳೇ ತುಂಬಿರುವ ಗ್ರಾಮಗಳಿಗೆ ಅಧಿಕಾರಿಗಳೇ ಬೇಕಾಗಿರುವ ಸೌಲಭ್ಯ ನೀಡಲು ವಿಫಲರಾಗಿದ್ದಾರೆ. ಹೀಗಿರುವಾಗ ಗ್ರಾಮಸ್ಥರ ಮತ ನೀಡುವಂತೆ ಕೇಳಲು ನಿಮಗೆ ಏನು ಅಧಿಕಾರ ಇದೆ. ಗ್ರಾಮಸ್ಥರು ತಲತಲಾಂತರದಿಂದ ವಾಸ ಮಾಡುವ ಗ್ರಾಮಗಳಿಗೆ ಮೂಲ ಸೌಲಭ್ಯಗಳನ್ನು ಕೇಳುವುರದಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಮಹಾಸಭಾ ವತಿಯಿಂದ ಗ್ರಾಮಸ್ಥರಿಗೆ ಸಹಕಾರ: ಘಟನೆಯಲ್ಲಿ ನೊಂದವರಿಗೆ ಎರಡು ಗ್ರಾಮಗಳ ನಿವಾಸಿಗಳಿಗೆ ಸಂಪೂರ್ಣವಾಗಿ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಪ್ರಕರಣದಲ್ಲಿ ಸಿಲುಕಿರುವವರ ಬಗ್ಗೆ ಮಾಹಿತಿ ಪಡೆಯಲಾಗಿದೆ. ಜನಾಂಗೀಯ ಘರ್ಷಣೆಗೆ ಕಾರಣರಾದವರನ್ನು ಸರ್ಕಾರ ನ್ಯಾಯಾಂಗ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.