ದೊಡ್ಡಬಳ್ಳಾಪುರ: ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ತಾಲೂಕು ಮತ್ತು ನಗರದ ಹಲವು ಶಿವಾಲಯಗಳಲ್ಲಿ ವಿಶೇಷಾಲಂಕಾರ ಪೂಜೆ, ಶಿವಾರಾಧನೆ, ಜಾಗರಣೆ ಅಂಗವಾಗಿ ಭಜನೆ, ಸಂಗೀತ ಕಚೇರಿ, ಪೌರಾಣಿಕ ನಾಟಕ ಪ್ರದರ್ಶನಗಳು ಶುಕ್ರವಾರ ನಡೆಯಿತು.
ನಗರದ ಶ್ರೀನಗರೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾಲಂಕಾರಗಳು ನಡೆಯಿತು. ಚೌಕದ ಸರ್ಕಲ್‌ನಿಂದ ಹಳೇ ಪೊಲೀಸ್ ಸ್ಟೇಷನ್ ಸಮೀಪದವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಬಾಲಶಿವನ ವಿವಿಧ ಭಾವಭಂಗಿಯ ಆಕರ್ಷಕ ಬೃಹತ್ ಚಿತ್ರಪಟಗಳನ್ನು ಪ್ರತಿಷ್ಠಾಪಿಸಿ ಅಲಂಕರಿಸಲಾಗಿತ್ತು. ಬೃಹತ್ ಅಲಂಕೃತ ಆನೆಗಳು, ಸಿಂಹ ಹಾಗೂ ಗಣಪತಿಯ ವಿವಿಧ ವಾದ್ಯಗಳನ್ನು ನುಡಿಸುತ್ತಿರುವ ಗಣಪತಿ ಮೂರ್ತಿಗಳನ್ನು ಅಲಂಕರಿಸಲಾಗಿತ್ತು.
ಸಹಸ್ರಾರು ದ್ರಾಕ್ಷಿಗೊಂಚಲು:ದೇಗುಲದ ಮುಂಭಾಗವನ್ನು ಗುಲಾಬಿ ಹೂಗಳಿಂದ ಅಲಂಕರಿಸಲಾಗಿತ್ತು. ಮುಂಭಾಗದಲ್ಲಿ 25 ಅಡಿ ಎತ್ತರದ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ದೇವಾಲಯದ ಮೂಲ ವಿಗ್ರಹವಾದ ನಗರೇಶ್ವರ ಸ್ವಾಮಿ, ಪಾರ್ವತಾ ದೇವಿಗೆ, ಮಹಾಗಣಪತಿ ವಿಗ್ರಹಗಳಿಗೂ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ದೇಗುಲ ಆವರಣದಲ್ಲಿ ಭಕ್ತಾದಿಗಳು ಅಕ್ಕಿ ಆರತಿಗಳನ್ನು ಬೆಳಗಿ ಸಂಭ್ರಮಿಸಿದರು.
ಇತಿಹಾಸ ಪ್ರಸಿದ್ಧ ಶ್ರೀಸ್ವಯಂಭೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. 10 ಶತಮಾನಗಳಷ್ಟು ಹಳೆಯದಾದ ದೇಗುಲದಲ್ಲಿರುವ ಉದ್ಭವ ಲಿಂಗಕ್ಕೆ ಅಭಿಷೇಕ, ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ಉದ್ಭವ ಲಿಂಗದ ದರ್ಶನ ಪಡೆದರು.
ತಾಲೂಕಿನ ಹುಲುಕುಡಿ ಬೆಟ್ಟದಲ್ಲಿನ ವೀರಭದ್ರೇಶ್ವರ-ಭದ್ರಕಾಳಮ್ಮ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಗುಹಾ ದೇವಾಲಯದಲ್ಲಿರುವ ಶ್ರೀಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ತೋಪನಯ್ಯ ಸನ್ನಿಧಿಯಲ್ಲಿ ಶಿವರಾತ್ರಿ:
ವಿವಿಧ ದೇವಾಲಯಗಳಲ್ಲಿ ಸಂಭ್ರಮ:
8ಕೆಡಿಬಿಪಿ2- ನಗರೇಶ್ವರ ಸ್ವಾಮಿದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಪುಷ್ಪಾಲಂಕಾರ.
8ಕೆಡಿಬಿಪಿ4- ನಗರೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಬೃಹತ್ ಶಿವ ಮೂರ್ತಿ ಪ್ರತಿಷ್ಠಾಪಿಸಿ ಹೂವಿನ ಅಲಂಕಾರ ಮಾಡಲಾಗಿತ್ತು. 8ಕೆಡಿಬಿಪಿ5- ನಗರೇಶ್ವರ ದೇವಾಲಯದಲ್ಲಿ ದ್ರಾಕ್ಷಿ ಗೊಂಚಲುಗಳ ಆಕರ್ಷಕ ಅಲಂಕಾರ.
8ಕೆಡಿಬಿಪಿ6- ಘಾಟಿ ಸುಬ್ರಹ್ಮಣ್ಯದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.--
8ಕೆಡಿಬಿಪಿ7- ದೊಡ್ಡಬಳ್ಳಾಪುರದ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ.