ಚನ್ನಗಿರಿ ತಾಲೂಕಲ್ಲಿ ಮಹಾಶಿವರಾತ್ರಿ ಪೂಜಾ ಸಂಭ್ರಮ

KannadaprabhaNewsNetwork |  
Published : Feb 27, 2025, 12:30 AM IST
ಪಟ್ಟಣದ ಗಣಪತಿ ಹೊಂಡದ ಮುಂಭಾಗದಲ್ಲಿರುವ ಶ್ರೀ ಭವಾನಿ ಶಂಕರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ನಿಮಿತ್ತವಾಗಿ ದೇವರಿಗೆ ವಿಷೇಶ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು | Kannada Prabha

ಸಾರಾಂಶ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬುಧವಾರ ಮಹಾಶಿವರಾತ್ರಿ ಹಬ್ಬವನ್ನು ಜನರು ಸಡಗರ, ಸಂಭ್ರಮಗಳಿಂದ ಆಚರಿಸಿದರು.

- ದೇವಾಲಯಗಳಲ್ಲಿ ಅಭಿಷೇಕ, ಹೂವಿನ ಅಲಂಕಾರ, ಭಜನೆ, ವಿಶೇಷ ಪೂಜೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬುಧವಾರ ಮಹಾಶಿವರಾತ್ರಿ ಹಬ್ಬವನ್ನು ಜನರು ಸಡಗರ, ಸಂಭ್ರಮಗಳಿಂದ ಆಚರಿಸಿದರು.

ಬೆಳಗ್ಗೆಯಿಂದಲೇ ಪಟ್ಟಣದ ಶ್ರೀ ಭವಾನಿ ಶಂಕರ ಮಂದಿರ, ಇತಿಹಾಸ ಪ್ರಸಿದ್ದ ಶ್ರೀ ಕಲ್ಲುಮಠದ ಶ್ರೀ ಈಶ್ವರ ದೇವಾಲಯ, ಶ್ರೀ ಬಸವೇಶ್ವರ ದೇವಾಲಯ, ಶ್ರೀ ಗುಳ್ಳಮ್ಮ ದೇವಾಲಯ, ಶ್ರೀ ಕುಕ್ಕುವಾಡೇಶ್ವರಿ ದೇವಾಲಯ, ಶ್ರೀ ದುರ್ಗಾಂಬಿಕಾ ದೇವಾಲಯ, ಶ್ರೀ ಅಂತರಘಟ್ಟಮ್ಮ ದೇವಾಲಯ, ಶ್ರೀ ಬೀರಲಿಂಗೇಶ್ವರ ದೇವಾಲಯ, ಕೋಟೆಯ ಶ್ರೀ ಬೇಟೆ ರಂಗನಾಥ ದೇವಾಲಯ, ಶ್ರೀ ಮೌದ್ಗಲ್ ಆಂಜನೇಯ ಸ್ವಾಮಿ ದೇವಾಲಯ, ಹಿರೇಮಠದ ಶ್ರೀ ವೀರಭದ್ರೇಶ್ವರ ದೇವಾಲಯ, ಶ್ರೀ ಕೆರೆ ಏರಿ ಚೌಡೇಶ್ವರಿ ದೇವಾಲಯ, ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯ, ಕೊಪ್ಪದ ಶ್ರೀ ಪಿಳ್ಳಮ್ಮ ದೇವಾಲಯ, ಮೈಲಾರಲಿಂಗೇಶ್ವರ ದೇವಾಲಯಗಳಲ್ಲಿ ಅಭಿಷೇಕ, ವಿಶೇಷ ಪೂಜೆ, ಹೂವಿನ ಅಲಂಕಾರಗಳ ನೆರವೇರಿಸಿ ನಮಿಸಲಾಯಿತು.

ಭಕ್ತರು ದೇವಾಲಯಗಳಿಗೆ ಹೋಗಿ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ರಾತ್ರಿ ದೇವಾಲಯಗಳಲ್ಲಿ ಶಿವಸ್ಮರಣೆಯ ದೇವರ ನಾಮಗಳ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ಭಕ್ತರು ಶಿವಸ್ಮರಣೆಯಲ್ಲಿ ತಲ್ಲೀನರಾದರು.

ಶಿವರಾತ್ರಿ ಹಬ್ಬದಲ್ಲಿ ಫಲಹಾರವಾಗಿ ಸ್ವೀಕರಿಸುವಂತಹ ಕಲ್ಲಂಗಡಿ, ಬಾಳೆ ಇನ್ನಿತರೆ ಹಣ್ಣು ಮತ್ತು ಹೂವುಗಳ ಬೆಲೆಯಲ್ಲಿ ಏರಿಕೆಯಾಗಿದ್ದರೂ ಜನರು ಹಬ್ಬದ ಸಂಭ್ರಮಕ್ಕಾಗಿ ಯಾವುದೇ ಅಳುಕಿಲ್ಲದೇ ಖರೀದಿಯಲ್ಲಿ ತೊಡಗಿದ್ದರು. ಒಟ್ಟಾರೆ ತಾಲೂಕಿನಲ್ಲಿ ಮಹಾಶಿವರಾತ್ರಿಯನ್ನು ಜನತೆ ಸಂಭ್ರಮದಿಂದ ಆಚರಿಸಿದರು.

- - - -26ಕೆಸಿಎನ್ಜಿ5.ಜೆಪಿಜಿ:

ಚನ್ನಗಿರಿ ಪಟ್ಟಣದ ಗಣಪತಿ ಹೊಂಡದ ಮುಂಭಾಗದ ಶ್ರೀ ಭವಾನಿ ಶಂಕರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ನಿಮಿತ್ತವಾಗಿ ದೇವರಿಗೆ ವಿಷೇಶ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು.

-26ಕೆಸಿಎನ್ಜಿ6.ಜೆಪಿಜಿ: ದೇವರ ದರ್ಶನ ಪಡೆದು ಹೊರಬರುತ್ತೀರುವ ಭಕ್ತರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ