ಮಹಾಶಿವರಾತ್ರಿ: ರಥೋತ್ಸವ, ಮೆರವಣಿಗೆ, ಅನ್ನಸಂತರ್ಪಣೆ

KannadaprabhaNewsNetwork |  
Published : Feb 17, 2026, 01:30 AM IST
16ಕೆಎಂಎನ್‌ಡಿ-12ಗಂಜಾಂನ ಹೊರವಲಯದಲ್ಲಿರುವ ದೊಡ್ಡ ಗೋಸಾಯಿಘಾಟ್‌ನಲ್ಲಿರುವ ಕಾಶಿ ವಿಶ್ವೇಶ್ವರಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. | Kannada Prabha

ಸಾರಾಂಶ

ಮಹಾಶಿವರಾತ್ರಿ ಅಂಗವಾಗಿ ಪಟ್ಟಣದ ಪುರಾತನ ಪ್ರಸಿದ್ಧ ಶ್ರೀಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಭಾನುವಾರ ರಾತ್ರಿಯಿಂದ ಬೆಳಗಿನವರೆಗೂ ನೂರೊಂದು ಲಿಂಗಕ್ಕೆ ಬಿಲ್ವ ಪತ್ರೆ ಹಾಕುವ ಕಾರ್ಯಕ್ರಮ ನಡೆಯಿತು. ಸಹಸ್ರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಸಾಲಿನಲ್ಲಿ ನಿಂತು ಸಾಲು ಲಿಂಗದ ಮೇಲೆ ಪತ್ರೆ ಹಾಕಿ ದೇವರ ಪ್ರಾರ್ಥನ ಕಾರ್ಯ ನಡೆಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶಿವರಾತ್ರಿಯ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಭಕ್ತರು ಜಾಗರಣೆ ನಡೆಸಿ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀಗಂಗಾಧರೇಶ್ವರನಿಗೆ ಪತ್ರೆ ಸಮರ್ಪಣೆ:

ಮಹಾಶಿವರಾತ್ರಿ ಅಂಗವಾಗಿ ಪಟ್ಟಣದ ಪುರಾತನ ಪ್ರಸಿದ್ಧ ಶ್ರೀಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಭಾನುವಾರ ರಾತ್ರಿಯಿಂದ ಬೆಳಗಿನವರೆಗೂ ನೂರೊಂದು ಲಿಂಗಕ್ಕೆ ಬಿಲ್ವ ಪತ್ರೆ ಹಾಕುವ ಕಾರ್ಯಕ್ರಮ ನಡೆಯಿತು. ಸಹಸ್ರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಸಾಲಿನಲ್ಲಿ ನಿಂತು ಸಾಲು ಲಿಂಗದ ಮೇಲೆ ಪತ್ರೆ ಹಾಕಿ ದೇವರ ಪ್ರಾರ್ಥನ ಕಾರ್ಯ ನಡೆಸಿದರು. ಸೋಮವಾರ ಬೆಳಿಗ್ಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಗಂಗಾಧರೇಶ್ವರ ಸ್ವಾಮಿಯನ್ನು ಮೆರವಣಿಗೆ ನಡೆಸಲಾಯಿತು. ಬಂದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಶ್ರೀಗೌತಮ ಕ್ಷೇತ್ರ:

ತಾಲೂಕಿನ ದೊಡ್ಡೇಗೌಡನ ಕೊಪ್ಪಲು ಗ್ರಾಮದ ಕಾವೇರಿ ನದಿ ನಡುಗಡ್ಡೆಯಲ್ಲಿರುವ ಶ್ರೀಗೌತಮ ಕ್ಷೇತ್ರದ ಶ್ರೀ ಕೃಷ್ಣ ಚಂದ್ರಮೌಳೇಶ್ವರ ಸ್ವಾಮಿಗೆ ಕ್ಷೇತ್ರದ ಪೀಠಾಧ್ಯಕ್ಷ ಗಜಾನನ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ಬೆಳಗ್ಗಿನಿಂದ ಸೋಮವಾರದ ಬೆಳಗ್ಗಿನ ವರೆಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಭಕ್ತರಿಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ, ಅನ್ನಸಂತರ್ಪಣೆ ಕಾರ್ಯ ನಡೆಯಿತು.

ಶ್ರೀಅಗಸ್ತೇಶ್ವರ ರಥೋತ್ಸವ:

ಶಿವರಾತ್ರಿಯ ಅಂಗವಾಗಿ ಸಮಿತಿ ವತಿಯಿಂದ ರಥದಲ್ಲಿ ಅಗಸ್ತೇಶ್ವರ ಸ್ವಾಮಿ ಉತ್ಸವ ಮೂರ್ತಿ ಕೂರಿಸಿ ಮೆರವಣಿಗೆ ನಡೆಸಲಾಯಿತು. ರಥವನ್ನು ದೇವಾಲಯದ ಸುತ್ತಲೂ ವಿಜ್ರಂಭಣೆಯಿಂದ ಮೆರವಣಿಗೆ ನಡೆಸಲಾಯಿತು. ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರ, ವಿದ್ಯುತ್ ದೀಪಗಳ ಅಲಂಕಾರದ ವಿಜ್ರಂಭಣೆ ನಡೆಯಿತು. ಗ್ರಾಮಸ್ಥರು ಸೇರಿದಂತೆ ವಿವಿಧ ಗ್ರಾಮಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ, ರಾತ್ರೀಯಿಡಿ ಜಾಗರಣೆ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗೆ ಮನ ರಂಜನೆಗಾಗಿ ದೇವಾಲಯದ ಆವರಣದಲ್ಲಿ ಗ್ರಾಮಸ್ಥರು ಆಯೋಜಿಸಿ ಅಭಿನಯಿಸಿ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶಿಸಿದರು. ದೇವರಿಗೆ ಮಹಾಮಂಗಳಾರತಿಯೊಂದಿಗೆ ಬೆಳಗಿನಲ್ಲಿ ಪೂಜೆ ಸಲ್ಲಿಸಿ ಬಂದ ಭಕ್ತರಿಗೆ ರಾತ್ರಿ ಪ್ರಸಾದ, ಬೆಳಗ್ಗೆ ಅನ್ನ ಸಂತರ್ಪಣೆ ಕಾರ್ಯ ನಡೆದವು.

ಶ್ರೀ ಕಾಶಿ ವಿಶ್ವನಾಥ ದೇವಾಲಯ:

ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಬಳಿಯ ಕಾವೇರಿ ನದಿ ತೀರದಲ್ಲಿರುವ ಶ್ರೀ ಕಾಶಿ ವಿಶ್ವನಾಥ ದೇವಾಲಯದಲ್ಲಿ ಭಕ್ತ ಸಾಗರ ಹರಿದು ಬಂದಿತ್ತು. ಕಾಶಿಗಿಂತಲೂ ಒಂದು ಗುಲಗಂಜಿ ತೂಕ ಹೆಚ್ಚು ಎಂಬ ಪ್ರತೀತಿಯೊಂದಿಗೆ ಶ್ರೀ ಕಾಶಿವಿಶ್ವನಾಥ ಎಂದೇ ಈ ಭಾಗದಲ್ಲಿ ಹೆಸರಾಗಿದೆ. ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದರ್ಶನ ಪಡೆದು ಪುನೀತರಾದರು. ಶ್ರೀ ಕಾಶಿ ವಿಶ್ವನಾಥ ಸ್ವಾಮಿಗೆ ವಿಶೇಷ ಅಲಂಕಾರ, ಹೋಮ ಹವನಾಧಿ ಕಾರ್ಯಗಳ ನಡೆಸಿ ದೇವರಿಗೆ ವಿಶೇಷ ಅಭಿಷೇಕ, ನೆರವೇರಿಸಿ ಮಹಾಮಂಗಳಾರತಿಯೊಂದಿಗೆ ದರ್ಶನಕ್ಕೆ ಬಂದ ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆ ಪ್ರಸಾದ ವಿತರಣೆ ನಡೆಯಿತು.

ಚಂದ್ರವನ ಆಶ್ರಮದಲ್ಲಿ ವಿಶೇಷ ಪೂಜೆ:

ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿ ಶ್ರೀ ಚಂದ್ರಮೌಳೇಶ್ವರನಿಗೆ ವಿಶೇಷ ಪೂಜೆ ನಡೆಯಿತು. ಇಡೀ ರಾತ್ರಿ ಜಾಗರಣೆ ಕಾರ್ಯದಲ್ಲಿ ನೂರಾರು ಭಕ್ತರು ವಿವಿಧ ಗ್ರಾಮಗಳಿಂದ ಆಗಮಿಸಿ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತು ಚಂದ್ರಮೌಳೇಶ್ವರನ ದರ್ಶನ ಪಡೆಯುತ್ತಿದ್ದರು.

ಶ್ರೀ ಕಾಶಿವಿಶ್ವೇಶ್ವರಸ್ವಾಮಿ ಮೆರವಣಿಗೆ:

ಶ್ರೀರಂಗಪಟ್ಟಣದ ಗಂಜಾಂನ ಹೊರವಲಯದಲ್ಲಿರುವ ದೊಡ್ಡ ಗೋಸಾಯಿಘಾಟ್‌ನಲ್ಲಿರುವ ಕಾಶಿ ವಿಶ್ವೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ವಿಶೇಷವಾಗಿ ಹೂವಿನ ಅಲಂಕಾರ ಮಾಡಿ ಮೂಲಕ ಶ್ರೀರಂಗಪಟ್ಟಣ ಹಾಗೂ ಗಂಜಾಂ ರಾಜ ಬೀದಿಯಲ್ಲಿ ರಥ ಎಳೆದು ಮೆರವಣಿಗೆ ನಡೆಸಲಾಯಿತು.

ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಲೋಕಪಾವನಿ ನದಿ ತೀರದಲ್ಲಿರುವ ಶ್ರೀ ಈಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಜಾಗರಣೆ, ಅಲಂಕಾರ ಬಂದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಪಾಲಹಳ್ಳಿ ಗ್ರಾಮದ ಈಶ್ವರಸ್ವಾಮಿ, ಮರಳಗಾಲದ ಮರಡಿಲಿಂಗೇಶ್ವರ ಸ್ವಾಮಿ ಸೇರಿದಂತೆ ಇತರೆಡೆ ಅನ್ನ ಸಂತರ್ಪಣೆ ನಡೆಯಿತು.

ಶ್ರೀ ಶನೇಶ್ವರಸ್ವಾಮಿ ಪೂಜೆ:

ತಾಲೂಕಿನ ಕೂಡಲಕುಪ್ಪೆ ಗ್ರಾಮದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶ್ರೀ ಶನೇಶ್ವರಸ್ವಾಮಿ ದೇವಾಲಯದಲ್ಲಿ ಸೂರ್ಯದೇವ, ಛಾಯಾದೇವಿ, ಗಣಪತಿ ಹಾಗೂ ನವಗ್ರಹ ಪೂಜೆಗಳನ್ನು ನೆರವೇರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಬಾರಿ ಉತ್ತಮ ಮಳೆ, ಕೆರೆ ಭರ್ತಿ: ಮುಳ್ಳುಗದ್ದುಗೆ ಕಾರ್ಣಿಕ
ಡಬ್ಬಿ ಮೆಣಸಿನಕಾಯಿ ಕ್ವಿಂಟಾಲ್‌ಗೆ 90 ಸಾವಿರ ರು. ದಾಖಲೆಯ ದರ!