ಸಂವಿಧಾನದ ಮೂಲಕ ಹಕ್ಕು ಕಲ್ಪಿಸಿದ ಮಹಾತ್ಮ ಡಾ. ಅಂಬೇಡ್ಕರ್

KannadaprabhaNewsNetwork |  
Published : Apr 15, 2026, 02:15 AM IST
ಹಿರೇಕೆರೂರು ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಮಂಗಳವಾರ ಬಿಜೆಪಿ ಹಿರೇಕೆರೂರು ಮಂಡಲದ ವತಿಯಿಂದ ಆಯೋಜಿಸಲಾದ ಡಾ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಜಿ ಸಚಿವ ಬಿ.ಸಿ. ಪಾಟೀಲ್ ಪುಷ್ಪನಮನ ಸಲ್ಲಿಸಿದರು. | Kannada Prabha

ಸಾರಾಂಶ

ಕೇವಲ ಫೋಟೋ ಇಟ್ಟು ಪುಜೆ ಮಾಡಿದರೆ ಸಾಲದು. ಡಾ. ಬಿ.ಆರ್. ಅಂಬೇಡ್ಕರ್‌ ಅವರನ್ನು ಯಾವಗಲೂ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಜನಾಂಗ, ಜಾತಿ, ಸಮುದಾಯ ಹಾಗೂ ಅಂತಸ್ತು ಭೇದವಿಲ್ಲದೆ ದೇಶದ ಎಲ್ಲಾ ನಾಗರಿಕರಿಗೂ ಸಂವಿಧಾನದ ಮೂಲಕ ಹಕ್ಕು ಕಲ್ಪಿಸಿದ ಅವರ ತತ್ವ ಸಿದ್ಧಾಂತಗಳನ್ನು ನಾವು ನೀವು ಅಳವಡಿಸಿ ಕೊಳ್ಳಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಹಿರೇಕೆರೂರು: ಕೇವಲ ಫೋಟೋ ಇಟ್ಟು ಪುಜೆ ಮಾಡಿದರೆ ಸಾಲದು. ಡಾ. ಬಿ.ಆರ್. ಅಂಬೇಡ್ಕರ್‌ ಅವರನ್ನು ಯಾವಗಲೂ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಜನಾಂಗ, ಜಾತಿ, ಸಮುದಾಯ ಹಾಗೂ ಅಂತಸ್ತು ಭೇದವಿಲ್ಲದೆ ದೇಶದ ಎಲ್ಲಾ ನಾಗರಿಕರಿಗೂ ಸಂವಿಧಾನದ ಮೂಲಕ ಹಕ್ಕು ಕಲ್ಪಿಸಿದ ಅವರ ತತ್ವ ಸಿದ್ಧಾಂತಗಳನ್ನು ನಾವು ನೀವು ಅಳವಡಿಸಿ ಕೊಳ್ಳಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು. ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಮಂಗಳವಾರ ಬಿಜೆಪಿ ಹಿರೇಕೆರೂರು ಮಂಡಲದ ವತಿಯಿಂದ ಆಯೋಜಿಸಲಾದ ಡಾ. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಸಂವಿಧಾನ ರಚನೆ ಮಾಡಿ ಭಾರತ ದೇಶಕ್ಕೆ ಮಹಾನ್‌ ವ್ಯಕ್ತಿಯಾದರು. ದಲಿತ ಕುಟುಂಬದಲ್ಲಿ ಹುಟ್ಟಿದರೂ ಸಹ ನನ್ನ ಜನ ಮೇಲೆ ಬರಬೇಕು ಎಂಬ ಉದ್ದೇಶದಿಂದ ಸಂವಿಧಾನ ರಚನೆ ಮಾಡಿದ ಮಹಾನ ಶಕ್ತಿ ಎಂದರು. ಅಂಬೇಡ್ಕರ್‌ ಜ್ಞಾನದ ಸಂಕೇತ, ಅಂಬೇಡ್ಕರ್ ಎನ್ನುವ ಜ್ಞಾನ ದೀವಿಗೆಯಿಂದ ಬಹಳಷ್ಟು ಜನರ ಜೀವನ ಬೆಳಕು ಕಂಡಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಮುಂದೆ ಸಾಗಬೇಕು. ಪ್ರಜಾಪ್ರಭುತ್ವದ ಮೇಲೆ ಅಪಾರ ನಂಬಿಕೆ ಹೊಂದಿದ್ದ ಅಂಬೇಡ್ಕರ್ ದೇಶದ ಎಲ್ಲ ಶೋಷಿತರು, ಬಡವರ ಮೇಲೆತ್ತುವ ಕೆಲಸ ಮಾಡಿದ್ದಾರೆ ಎಂದರು.ಈ ವೇಳೆ ಜಿಪಂ ಮಾಜಿ ಸದಸ್ಯರಾದ ಎನ್. ಎಮ್. ಈಟೇರ್, ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷೆ ಸಂಜೀವಯ್ಯ ಕಬ್ಬಿಣಕಾಂತಿಮಠ್, ಯುವ ಮೋರ್ಚಾ ಅಧ್ಯಕ್ಷೆ ಜಗದೀಶ ದೊಡ್ಡಗೌಡ್ರ, ಎಸ್‌ಸಿ ಮೋರ್ಚಾ ಅಧ್ಯಕ್ಷೆ ಗಂಗಾಧರ್ ಬೋಗೆರ್, ಶಿವುಕುಮಾರ ತಿಪ್ಪಶಟ್ಟಿ, ಮಂಜುನಾಥ ಚಲವಾದಿ, ದುರಗೇಶ ತಿರಕಪನವರ, ಚಂದ್ರಪ್ಪ ವರಹ, ಪುಟ್ಟಣ್ಣ ಪಾಟೀಲ್, ಸಿ.ಎಸ್. ಚಳಗೇರಿ, ರಾಜು ಹೊನ್ನಪ್ಪ ಸಾಲಿ, ಬಿ.ಟಿ. ಚಿಂದಿ, ನಾಗರಾಜ ಬಣಕಾರ ಮನೋಜ ಹಾರ‍್ನಳ್ಳಿ, ಈರಣ್ಣ ಚಿಟ್ಟೋರು ಸೇರಿದಂತೆ ದಲಿತ ಮುಖಂಡರು ಕಾರ್ಯಕರ್ತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂವಿಧಾನ ರಚನೆಯಾದ ದಿನ ನಿಜವಾದ ಸ್ವಾತಂತ್ರ‍್ಯ ದೊರಕಿದ ದಿನ: ಶಾಸಕ ಕೋಳಿವಾಡ
ಅಂಬೇಡ್ಕರ್ ಸಮಾನತೆಯ ಸಂದೇಶ ಪಾಲಿಸಿ: ಲಕ್ಷ್ಮೀಪ್ರಿಯಾ