ಮಹಾತ್ಮಗಾಂಧಿಯನ್ನು ಎರಡನೇ ಬಾರಿ ಕೊಲೆ ಮಾಡಿದೆ

KannadaprabhaNewsNetwork |  
Published : Jan 15, 2026, 01:15 AM IST
0000 | Kannada Prabha

ಸಾರಾಂಶ

ರಾಷ್ಟ್ರಪಿತ ಮಹಾತ್ಮಗಾಂಧಿ ಅವರನ್ನುಎರಡನೇ ಬಾರಿ ಕೊಲೆ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಮಯೂರ ಜಯಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು ಗ್ರಾಮೀಣ ಬಡಜನರ ಬದುಕಿಗೆ ಆಸರೆಯಾಗಿದ್ದ ನರೇಗಾ ಕಾಯ್ದೆಯನ್ನು ರದ್ದು ಮಾಡಿ, ಅದರ ಬದಲು ವಿಬಿ ಜಿ-ರಾಮ್ ಜಿ ಹೆಸರಿನಲ್ಲಿ ಯೋಜನೆಯೊಂದನ್ನು ಹುಟ್ಟು ಹಾಕಿ, ಬಡಜನರ ಬದುಕನ್ನು ಕಿತ್ತುಕೊಂಡಿರುವ ಕೇಂದ್ರ ಸರಕಾರ,ರಾಷ್ಟ್ರಪಿತ ಮಹಾತ್ಮಗಾಂಧಿ ಅವರನ್ನುಎರಡನೇ ಬಾರಿ ಕೊಲೆ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಮಯೂರ ಜಯಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಆಯೋಜಿಸಿದ್ದ ಕೇಂದ್ರ ಸರಕಾರದ ಉದ್ಯೋಗವನ್ನು ಜನರ ಹಕ್ಕು ಎಂದು ಪ್ರತಿಪಾದಿಸುತಿದ್ದ ನರೇಗಾ ಯೋಜನೆಯನ್ನು ರದ್ದು ಮಾಡಿರುವುದರ ವಿರುದ್ಧ ಮತ್ತು ಆಗ್ನೇಯ ಪದವಿಧರರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಗ್ರಾಮೀಣ ಜನರ ಕೋರಿಕೆಯ ಮೇರೆಗೆ ಜನರ ಮನೆ ಬಾಗಿಲಲ್ಲಿಯೇ ಉದ್ಯೋಗ ಒದಗಿಸುವ ಹಕ್ಕು ಹೊಂದಿದ್ದ ಎಂ.ಎನ್.ಆರ್.ಇ.ಜಿ.ಎ ಕಾಯ್ದೆಯನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಿ, ಕಾರ್ಪೋರೇಟ್ ಸಂಸ್ಕೃತಿಗೆ ಬೆಂಬಲವಾಗಿಸುವ ಗುತ್ತಿಗೆ ಆಧಾರಿತ ವಿಬಿ ಜಿ-ರಾಮ್ ಜಿ ಯೋಜನೆ ಜಾರಿ ಮಾಡಿದ್ದು ಇದು ಗೋಡ್ಸೆ ಕಾಯ್ದೆಯಾಗಿದೆ. ಇದರ ವಿರುದ್ದ ಕಾಂಗ್ರೆಸ್‌ ಜನರ ಬಳಿಗೆ ಹೋಗಲಿದೆ ಎಂದರು.ಕಾಂಗ್ರೆಸ್ ಪಕ್ಷದ ಯುವಕರಿಗೆ ಅವಕಾಶ ನೀಡಬೇಕೆಂಬ ಸದುದ್ದೇಶದಿಂದ ಈ ಬಾರಿಯ ನಾಲ್ಕು ವಿಧಾನ ಪರಿಷತ್‌ ಚುನಾವಣೆಗೆ ಯುವಕರಿಗೆ ಟಿಕೆಟ್‌ ನೀಡಿದೆ. ಯುವ ಕಾಂಗ್ರೆಸ್ ಮುಖಂಡರಾದ ಶಶಿ ಹುಲಿಕುಂಟೆ ಮಠ್‌ ಅವರಿಗೆ ಟಿಕೇಟ್ ನೀಡಿದೆ. ಇದುವರೆಗೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿಲ್ಲ. ಆದರೆ ಈ ಇತಿಹಾಸ ಬದಲಾಗಬೇಕು ಎಂದರು. ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ನರೇಗಾದಿಂದ ಮಹಾತ್ಮಗಾಂಧಿ ಹೆಸರುತೆಗೆಯಲು 2014 ರಲ್ಲಿಯೇ ಪ್ರಯತ್ನ ನಡೆದಿತ್ತು. ಆದರೆ ವಿರೋಧಪಕ್ಷಗಳಿಂದ ತೀವ್ರ ಅಕ್ಷೆಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಕ್ಷಿಗುಡ್ಡೆಯಾಗಿ ಅದನ್ನು ಉಳಿಸಿದ್ದರು. ಗ್ರಾಮೀಣ ಭಾಗದಲ್ಲಿ ಆಸ್ತಿ ಸೃಷ್ಟಿಗೆ, ಬಡವರ ಬದುಕಿಗೆ ಅಸರೆಯಾಗಿದ್ದ ಎಂಎನ್‌ಆರ್‌ಇಜಿಎ ಪುನರ್ ಸ್ಥಾಪಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು. ಮುಖಂಡರಾದ ಇಕ್ಬಾಲ್‌ ಅಹಮದ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಪ್ರತಿಯೊಂದು ಕೆಲಸಗಳಿಗೂ ಬಿಜೆಪಿ ಅಡ್ಡಿ ಪಡಿಸುತ್ತಲೇ ಬಂದಿದೆ. ಕ್ರೀಡಾ ಸಂಸ್ಥೆಗಳು, ಕ್ರೀಡಾಪಟುಗಳ ಕೋರಿಕೆ ಮೇರೆಗೆ ಕ್ರೀಡಾಪುಟವಾಗಿರುವ ಡಾ.ಜಿ.ಪರಮೇಶ್ವರ್‌ಅವರ ಹೆಸರನ್ನು ಒಳಾಂಗಣ ಕ್ರೀಡಾಂಗಣಕ್ಕೆಇಟ್ಟಿರುವುದನ್ನು ಸಹಿಸದೆ ವಿರೋಧಿಸುತ್ತಿದೆ ಎಂದರು. ಆಗ್ನೇಯ ಪದವಿಧರರ ಕ್ಷೇತ್ರದ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಮಾತನಾಡಿ, ಈಗ ಪಕ್ಷಚುನಾವಣೆ 10 ತಿಂಗಳ ಮುಂಚೆಯೇ ಟಿಕೆ ಟ್‌ಘೋಷಿಸಿದೆ. ಇದರಿಂದ ಪ್ರವಾಸ ಮಾಡಲು ಅನುಕೂಲವಾಗಲಿದೆ ಎಂದರು. ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಚಂದ್ರಶೇಖರಗೌಡ ವಹಿಸಿದ್ದರು. ಮಾಜಿ ಶಾಸಕರಾದ ಡಾ.ರಫೀಕ್‌ಅಹಮದ್, ಕೆ.ಎಸ್.ಕಿರಣಕುಮಾರ್ ಮಾತನಾಡಿದರು.ವೇದಿಕೆಯಲ್ಲಿ ಡಾ.ಎಸ್.ಷಪಿ ಅಹಮದ್, ಸೂರ್ಯ ಮುಕುಂದರಾಜ್, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಫೈಯಾಜ್,ಮಹೇಶ್, ಪಾಲಿಕೆ ಸದಸ್ಯರಾದ ನಯಾಜ್,ಒಬಿಸಿ ಘಟಕದ ಅನಿಲ್,ಕೆಂಚಮಾರಯ್ಯ, ರಾಮಕೃಷ್ಣ,ರೇವಣಸಿದ್ದಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ