ಅಹಿಂಸೆ ಪರಮ ಧಮ೯ ವಿಶ್ವಕ್ಕೆ ಸಾರಿದ ಮಹಾವೀರ

KannadaprabhaNewsNetwork |  
Published : Mar 31, 2026, 03:15 AM IST
ವಿಜಯಪುರ | Kannada Prabha

ಸಾರಾಂಶ

ಭಗವಾನ ಮಹಾವೀರರು ಎಲ್ಲ ಜೀವಿಗಳನ್ನು ಮನುಷ್ಯರಂತೆ ಪ್ರೀತಿಸಬೇಕು. ಅಹಿಂಸೆ ಪರಮೋ ಧಮ೯ವನ್ಮು ವಿಶ್ವಕ್ಕೆ ಸಾರಿದ ಮಹಾವೀರರು ಸತ್ಯ ಹಾಗೂ ಅಹಿಂಸೆಯ ಜೀವನಕ್ಕೆ ಪ್ರಾಧ್ಯಾನತೆ ನೀಡಿಬೇಕು ಎಂದು ಸಂದೇಶ ಸಾರಿದ ಮಹಾವೀರರು ಶ್ರೇಷ್ಠ ತತ್ವಜ್ಞಾನಿಗಳು ಎಂದು ವಿಜಯಪುರ ಸರ್ಕಾರಿ ತರಬೇತಿ ಸಂಸ್ಥೆ ಅಧೀಕ್ಷಕಿ ಶಶಿಕಲಾ ನಾಯ್ಡೊಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಭಗವಾನ ಮಹಾವೀರರು ಎಲ್ಲ ಜೀವಿಗಳನ್ನು ಮನುಷ್ಯರಂತೆ ಪ್ರೀತಿಸಬೇಕು. ಅಹಿಂಸೆ ಪರಮೋ ಧಮ೯ವನ್ಮು ವಿಶ್ವಕ್ಕೆ ಸಾರಿದ ಮಹಾವೀರರು ಸತ್ಯ ಹಾಗೂ ಅಹಿಂಸೆಯ ಜೀವನಕ್ಕೆ ಪ್ರಾಧ್ಯಾನತೆ ನೀಡಿಬೇಕು ಎಂದು ಸಂದೇಶ ಸಾರಿದ ಮಹಾವೀರರು ಶ್ರೇಷ್ಠ ತತ್ವಜ್ಞಾನಿಗಳು ಎಂದು ವಿಜಯಪುರ ಸರ್ಕಾರಿ ತರಬೇತಿ ಸಂಸ್ಥೆ ಅಧೀಕ್ಷಕಿ ಶಶಿಕಲಾ ನಾಯ್ಡೊಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಗವಾನ ಮಹಾವೀರರ ಜಯಂತಿಯನ್ನು ಪುಷ್ಪ ಅಪಿ೯ಸಿ ಮಾತನಾಡಿ, ಮಹಾವೀರರು ಮೊಕ್ಷ ಪ್ರಾಪ್ತಿಗಾಗಿ ಅಹಿಂಸೆ, ಸತ್ಯ, ಆಸ್ಥೆಯ ಅಪರಿಗ್ರಹ ಮತ್ತು ಬ್ರಹ್ಮಚರ್ಯ ಎಂಬ ಐದು ಪಂಚ ಮಹಾವೃತಗಳನ್ನು ಬೊಧಿಸಿದರು. ಬದುಕಿರಿ ಹಾಗೂ ಬದುಕಲು ಬಿಡಿ ಎಂದು ಜನರಲ್ಲಿ ಬಿನ್ನಯಿಸಿದರು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಮಾತನಾಡಿ, ಜೀವನದಲ್ಲಿ ದಯಯೇ ಪರಮ ಧಮ೯ ಎಂಬುವುದು ಜೈನ ಸಿದ್ಧಾಂತದ ಮುಖ್ಯ ಬೋಧನೆಯಾಗಿದೆ. ಮಹಾವೀರರು ನಿಮ್ಮ ನಿತ್ಯ ಕತ೯ವ್ಯಗಳನ್ನು ಮಾಡುವಲ್ಲಿ ಪ್ರಾಮಾಣಿಕತೆ ಇರಬೇಕೆಂದು ಸಾರಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಅಪಾರ. ಪಂಪ, ಪೊನ್ನ, ಜನ್ನ, ನಯಸೇನ, ಚಾವುಂಡರಾಯ, ರತ್ನಾಕರವರಣಿ, ನಾಗಚಂದ್ರ ಮುಂತಾದ ಜೈನ ಕವಿಗಳು ತಿಥ೯ಕರರ ಚರಿತ್ರೆಗಳು ಹಾಗೂ ಆಧ್ಯಾತ್ಮಿಕ ವಿಷಯಗಳಿಗೆ ಪ್ರಾಧ್ಯಾನತೆ ನೀಡಿದರು. ಇವರೆಲ್ಲರೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು ಎಂದರು. ಲಲಿತಕಲಾ ಅಕಾಡೆಮಿಯ ರಾಜ್ಯ ಸದಸ್ಯೆ ರಾಜಶ್ರೀ ಮೋಪಗಾರ ಮಾತನಾಡಿ, ಮಹಾವೀರರು ಮೊಕ್ಷ ಪಡೆಯಲು ಸಹಿಷ್ಣುಗಳಾಗಬೇಕು. ತ್ರೀರತ್ನಗಳಾದ ಸರಿಯಾದ ನಂಬಿಕೆ, ಸರಿಯಾದ ಜ್ಞಾನ, ಸರಿಯಾದ ನಡುವಳಿಕೆ ಇವು ಮೋಕ್ಷಕ್ಕೆ ದಾರಿಯಾಗಿವೆ. ಲೌಕಿಕ ಸುಖಗಳನ್ನು ತ್ಯಜಿಸಲು ಆತ್ಮ ಸಂಯಮ ಬೇಕೆಂಬ ಮಹಾವೀರರ ಸಂದೇಶ ಸವ೯ಕಾಲಿಕ ಎಂದರು. ಕಸಾಪ ಅಧ್ಯಕ್ಷರಾದ ಹಾಸಿಂಪೀರ ವಾಲಿಕಾರ, ಮಹಾದೇವ ಮೋಪಗಾರ, ಲತಾ ಗುಂಡಿ, ಗಂಗಮ್ಮ ರೆಡ್ಡಿ, ಶಿವಾಜಿ ಮೋರೆ, ಮಲ್ಲಿಕಾರ್ಜುನ ದಳವಾಯಿ ವೇದಿಕೆಯ ಮೇಲಿದ್ದರು. ವಿಜಯಲಕ್ಷ್ಮೀ ಹಳಕಟ್ಟಿ, ಬಸನಗೌಡ ಬಿರಾದಾರ, ಸಂಗನಗೌಡ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ, ಮುದಸ್ಸರ ವಾಲಿಕಾರ, ಅಹಮ್ಮದ್‌ ವಾಲಿಕಾರ, ಮಂಜುಳಾ ಕಾಳಗಿ, ಬಸೀರ್‌ ಬುದ್ನೂರಪಟೇಲ, ಭಾಗಿರಥಿ ಸಿಂದೆ, ಸುಖದೇವಿ ಅಲಬಾಳಮಠ, ಮೆಹತಾಬ್‌ ಕಾಗವಾಡ ಪ್ರಾಥಿ೯ಸಿದರು. ಭಾರತಿ ಗೊಂಗಡಿ ಸ್ವಾಗತಿಸಿದರು. ಡಾ.ಶೈಲಾ ಬಳಗಾನೂರ ನಿರೂಪಿಸಿದರು. ಮಹಾದೇವಿ ತೆಲಗಿ ಪ್ರಾಸ್ತಾವಿಕ ಮಾತನಾಡಿದರು. ರಶ್ಮಿ ಬದ್ನೂರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐಗಳಿಯಲ್ಲಿ ಮಹಾವೀರ ಜಯಂತಿ ಆಚರಣೆ
ಮನುಕುಲ ಉದ್ದಾರಿಸಿದ ಮಹಾನ್ ಚೇತನ: ಶಿವಲೀಲಾ ಸದಾಶಿವ ಬುಟಾಳಿ