ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರ ಬಾಗಲಕೋಟೆಯಿಂದ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯ ಹಾಗೂ ಮಹಾಯೋಗಿ ವೇಮನರ ಜಯಂತಿಯ ಆಚರಣೆ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಹಾಯೋಗಿ ವೇಮನರು ಇಬ್ಬರೂ 12ನೇ ಶತಮಾನದ ಶ್ರೇಷ್ಠ ವಚನಕಾರರು. ಸಮಾಜ ಸುಧಾರಕರು ಮತ್ತು ದಾರ್ಶನಿಕರು. ಇಬ್ಬರೂ ತಮ್ಮ ನೇರ, ನಿರ್ಭಿತ ವಚನಗಳಿಂದ ಜಾತಿ-ಭೇದಗಳನ್ನು ಖಂಡಿಸಿ, ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಪ್ರತಿಪಾದಿಸಿದರು. ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ ಅಂಕಿತದ ವಚನಗಳ ಮೂಲಕ ಭವಸಾಗರ ದಾಟುವ ಕೌಶಲ್ಯ ಹೇಳಿದರೆ, ವೇಮನರು ತಮ್ಮ ಪದ್ಯಗಳ ಮೂಲಕ ಜನಪದ ಮತ್ತು ತತ್ವಶಾಸ್ತ್ರ ಬೆರೆಸಿ ಸಾರ್ವತ್ರಿಕ ಮೌಲ್ಯಗಳನ್ನು ಸಾರಿದವರು ಎಂದು ಹೇಳಿದರು.ಬಸವರಾಜ ಯಂಕಂಚಿ, ಶಿವಾನಂದ ಟವಳಿ ಮಾತನಾಡಿದರು. ಡಾ. ಎಂ.ಎಸ್. ದಡ್ಡೆನ್ವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಗುಂಡುರಾವ ಶಿಂಧೆ, ಭಾಗೀರಥಿ ಪಾಟೀಲ, ರಾಮಣ್ಣ ರಾಮೋಡಗಿ, ಸಿ.ವಿ.ಕೋಟಿ, ಅಯ್ಯಪ್ಪ ವಾಲ್ಮೀಕಿ, ಯಂಕಪ್ಪ ಬಿಚ್ಚೆಲಿ,ಮುದಕಪ್ಪ ಕಟ್ಟಿಮನಿ, ಶ್ರೀಕಾಂತ ಕಟ್ಟಿಮನಿ, ಬಾಲಪ್ಪ ಅಂಬಿಗೇರ, ಶಾಂತಪ್ಪ ಬಾಡದ, ಪ್ರೇಮಾ ಅಂಬಿಗೇರ, ಸರಸ್ವತಿ ಕುರಬರ, ಶಶಿಕಲಾ ಮಜ್ಜಗಿ, ಶಿವಲೀಲಾ ಸಂಬಣ್ಣವರ, ಬಸವರಾಜ ಅಂಬಿಗೇರ, ಸುರೇಶ ಮಜ್ಜಗಿ, ಯಲ್ಲಪ್ಪ ನಾರಾಯಣಿ, ಶಶಿಕುಮಾರ ಗುತ್ತೆನ್ನವರ, ನಗರಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೇಟ್ಟ. ರಾಜು ಕೋಟಿಕಲ್, ಚಂದ್ರು ಸರೂರ, ಶಂಕರ ತೇಲಕರ, ಗಿರೀಶ ಭಾಂಡಗೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.