25,000 ರು. ದಂಡದ ಆದೇಶ ಪ್ರಶ್ನಿಸಿದ್ದಅರ್ಜಿ ವಾಪಸ್‌ ಪಡೆದ ಮಹೇಶ್‌ ಜೋಶಿ

KannadaprabhaNewsNetwork |  
Published : Feb 18, 2026, 04:00 AM IST
16ಕೆಕೆಡಿಯು.2 | Kannada Prabha

ಸಾರಾಂಶ

ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾ ನಿರ್ದೇಶಕರಾಗಿದ್ದಾಗ (ಸಾರ್ವಜನಿಕ ಮಾಹಿತಿ ಅಧಿಕಾರಿ) ಮಾಹಿತಿಯೊಂದನ್ನು ನೀಡಲು ನಿರಾಕರಿಸಿದ್ದಕ್ಕೆ ಕೇಂದ್ರ ಮಾಹಿತಿ ಹಕ್ಕುಗಳ ಆಯೋಗ ತಮಗೆ 25 ಸಾವಿರ ರು. ದಂಡ ವಿಧಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಸಲ್ಲಿಸಿದ್ದ ಮೇಲ್ಮನವಿಯನ್ನು ಕಸಾಪ ಹಾಲಿ ಅಧ್ಯಕ್ಷ ಮಹೇಶ್‌ ಜೋಶಿ ಮಂಗಳವಾರ ಹಿಂಪಡೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾ ನಿರ್ದೇಶಕರಾಗಿದ್ದಾಗ (ಸಾರ್ವಜನಿಕ ಮಾಹಿತಿ ಅಧಿಕಾರಿ) ಮಾಹಿತಿಯೊಂದನ್ನು ನೀಡಲು ನಿರಾಕರಿಸಿದ್ದಕ್ಕೆ ಕೇಂದ್ರ ಮಾಹಿತಿ ಹಕ್ಕುಗಳ ಆಯೋಗ ತಮಗೆ 25 ಸಾವಿರ ರು. ದಂಡ ವಿಧಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಸಲ್ಲಿಸಿದ್ದ ಮೇಲ್ಮನವಿಯನ್ನು ಕಸಾಪ ಹಾಲಿ ಅಧ್ಯಕ್ಷ ಮಹೇಶ್‌ ಜೋಶಿ ಮಂಗಳವಾರ ಹಿಂಪಡೆದುಕೊಂಡಿದ್ದಾರೆ.

ಕೇಂದ್ರ ಮಾಹಿತಿ ಹಕ್ಕು ಆಯೋಗದ ಆದೇಶ ಮತ್ತು ಅದನ್ನು ಪುರಸ್ಕರಿಸಿದ ಹೈಕೋರ್ಟ್‌ ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಮಹೇಶ್‌ ಜೋಶಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ನ್ಯಾಯಮೂರ್ತಿ ಅನು ಶಿವರಾಮನ್‌ ಮತ್ತು ನ್ಯಾಯಮೂರ್ತಿ ವಿಜಯ ಕುಮಾರ ಎ.ಪಾಟೀಲ ಅವರಿದ್ದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ಮೇಲ್ಮನವಿ ಪರಿಶೀಲಿಸಿದ ನ್ಯಾಯಪೀಠವು ಮಹೇಶ್‌ ಜೋಶಿ ಅವರ ಪರ ವಕೀಲರನ್ನು ಉದ್ದೇಶಿಸಿ, ‘ನಿಮ್ಮ ಈ ಮೇಲ್ಮನವಿ ವಿಚಾರಣೆಗೆ ಯೋಗ್ಯವಾಗಿಲ್ಲ. ಹಾಗಾಗಿ, ಮೇಲ್ಮನವಿ ಹಿಂಪಡೆಯಲು ಅವಕಾಶ ನೀಡುತ್ತಿದ್ದೇವೆ. ಒಂದೊಮ್ಮೆ ವಾದ ಮುಂದುವರಿಸಲು ಬಯಸಿದರೆ, ಅದಕ್ಕೆ ಅವಕಾಶ ನೀಡಲಾಗುವುದು. ವಿಚಾರಣೆ ವೇಳೆ ಮೇಲ್ಮನವಿ ಕುಲ್ಲಕ ಎಂಬುದಾಗಿ ಕಂಡುಬಂದರೆ, ಒಂದು ಲಕ್ಷ ರು. ದಂಡ ವಿಧಿಸಲಾಗುವುದು’ ಎಂಬ ಮೌಖಿಕ ಎಚ್ಚರಿಸಿತು.

ಈ ಎಚ್ಚರಿಕೆ ಹಿನ್ನೆಲೆಯಲ್ಲಿ ಮಹೇಶ್‌ ಜೋಶಿ ಪರ ವಕೀಲರು, ಮೇಲ್ಮನವಿ ಹಿಂಪಡೆಯುವುದಾಗಿ ತಿಳಿಸಿದರು. ಇದರಿಂದ ಮೇಲ್ಮನವಿ ವಜಾಗೊಳಿಸಿ ವಿಭಾಗೀಯ ಪೀಠ ಆದೇಶಿಸಿತು. ಹಾಗಾಗಿ, 25 ಸಾವಿ ರು. ದಂಡ ಪಾವತಿಸುವ ಅನಿವಾರ್ಯತೆ ಮಹೇಶ್‌ ಜೋಶಿ ಅವರಿಗೆ ಎದುರಾಗಿದೆ.

ಪ್ರಕರಣವೇನು?:

ಬೆಂಗಳೂರು ದೂರದರ್ಶನಕ್ಕೆ ಸಂಬಂಧಿಸಿ ಕೆಲ ಮಾಹಿತಿ ಕೋರಿ ಬಿ.ಅಶೋಕ್ ಮತ್ತು ಎನ್‌.ಕೆ.ಮೋಹನ್ ರಾಮ್‌ ಎಂಬುವವರು 2008-09ರ ಅವಧಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ದೂರದರ್ಶನ ಕೇಂದ್ರದ ಅಂದಿನ ಸಾರ್ವಜನಿಕ ಮಾಹಿತಿ ಅಧಿಕಾರಿ/ಉಪ ಮಹಾ ನಿರ್ದೇಶಕರಾಗಿದ್ದ ಮಹೇಶ್‌ ಜೋಶಿ, ಮಾಹಿತಿ ನೀಡಲು ನಿರಾಕರಿಸಿದ್ದರು. ಜೊತೆಗೆ, ಮಾಹಿತಿ ಒದಗಿಸಲು 50,160 ರು. ಪಾವತಿಸುವಂತೆ ಅರ್ಜಿದಾರರಿಗೆ ಸೂಚಿಸಿದ್ದರು. ಅದನ್ನು ಅರ್ಜಿದಾರರು ಕೇಂದ್ರ ಮಾಹಿತಿ ಹಕ್ಕು ಆಯೋಗದಲ್ಲಿ ಪ್ರಶ್ನಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಡಿಗೆಗೆ ಮನೆ ನೋಡಲು ಹೋಗಿ55 ಲಕ್ಷ ಮೌಲ್ಯದ ಚಿನ್ನ ಎಗರಿಸಿದ
ಆಸ್ತಿ ವಿಚಾರಕ್ಕೆ ಜಗಳ:ದೊಣ್ಣೆಯಿಂದಬಡಿದು ಅಪ್ಪನ ಕೊಂದ ಹಿರಿ ಮಗ