ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಏನಿದು ಪ್ರಕರಣ?: ಬಿಎಸ್ಪಿಯಿಂದ ಬಿಜೆಪಿಗೆ ಬೆಂಬಲಿಸಿ ತೆರಳಿದ ಮಾಜಿ ಸಚಿವ ಮಹೇಶ್ ಅವರ ಜೊತೆಗೂಡಿ ಬಂದ ರಾಮಕೃಷ್ಣ, ನಾಸೀರ್, ಶಂಕನಪುರ ನಾಗಸುಂದ್ರಮ್ಮ, ಜಗದೀಶ್, ಶಂಕನಪುರ ಪ್ರಕಾಶ್, ಪವಿತ್ರಾ ರಮೇಶ್ ಸೇರಿದಂತೆ 6 ಮಂದಿ ಸದಸ್ಯರ
ಸದಸ್ಯತ್ವ ಅನರ್ಹವಾಗಿತ್ತು. ಈ ಹಿನ್ನೆಲೆ ಎನ್. ಮಹೇಶ್ ಶಾಸಕರಾಗಿದ್ದ ವೇಳೆ ಚುನಾವಣಾ ಹೋರಾಟ ನಡೆಸಿದ ಫಲವಾಗಿ ಜಿಲ್ಲಾಡಳಿತ ಆದೇಶವನ್ನೆ ಕೋರ್ಟ್ ಎತ್ತಿಹಿಡಿದಿತ್ತು, ಆದರೆ ಮುಂದಿನ ಚುನಾವಣೆಯಲ್ಲಿ ಆರು ಮಂದಿಗೆ ಸ್ಪರ್ಧೆಗೆ ಅವಕಾಶ ನೀಡಲಾಗಿತ್ತು. ಇದನ್ನೆ ಜಯವೆಂದು ಬಾವಿಸಿದ ಮಹೇಶ್ ಆರು ಮಂದಿಗೂ ಬಿಜೆಪಿ ಟಿಕೆಟ್ ಕೊಡಿಸಿ ಗೆಲ್ಲಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದರು. 6 ಮಂದಿ ಗೆಲುವನ್ನು ನನ್ನದೆ ಗೆಲುವು ಎಂದು ಸಂಭ್ರಮಿಸಿದ್ದರು.ಆದರೆ ನಗರಸಭೆ ಚುನಾವಣೆ ವೇಳೆ ಇತ್ತಿಚೆಗೆ ತಮ್ಮ ಆಪ್ತರೆ ಕೈಕೊಟ್ಟ ವಿಚಾರದಲ್ಲಿ ಮನನೊಂದಿದ್ದರು, ಸುದ್ದಿಗೋಷ್ಠಿ ಕರೆದು ನನ್ನ ಪತ್ನಿ ಸಮಾಧಿ ಮುಂದೆ ಅತ್ತು ಅವರಿಗೆ ಶುಭವಾಗಲಿ ಎಂದು ಕೋರುವೆ ಎಂದು ತಿಳಿಸಿದ್ದನ್ನ ಇಲ್ಲಿ ಸ್ಮರಿಸಬಹುದು. ಹಾಗಾಗಿ ತಮ್ಮ ಆಪ್ತರ ವಿರುದ್ದವೇ ವಾರ್ಡ್‌ನಲ್ಲಿ ಸಭೆ ನಡೆಸಲು ನಿರ್ಧರಿಸುವ ಮಹೇಶ್ ಅವರ ಈ ನಿರ್ಣಯ ನಾನಾ ರಾಜಕೀಯ ಚರ್ಚೆಗೆ ಆಸ್ಪದ ಮಾಡಿಕೊಡಲಿವೆ ಎನ್ನಲಾಗಿದೆ.