ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ಮೈಮುಲ್) ಮೆಗಾ ಡೇರಿಯಲ್ಲಿ ಶನಿವಾರ ನಂದಿನಿ ಪನ್ನಿರ್ ಮತ್ತು ಖೋವಾ ಬಗ್ಗೆ ಅರಿವು ಮೂಡಿಸಲು ನಂದಿನಿ ಪಾಕ ಸ್ಪರ್ಧೆಯಲ್ಲಿ ಆಯೋಜಿಸಲಾಗಿತ್ತು.ಈ ಸ್ಪರ್ಧೆಯಲ್ಲಿ ಮೈಸೂರಿನ ವಿವಿಧ ಬಡಾವಣೆ ಮತ್ತು ಕ್ಲಬ್ ಗಳಿಂದ ಹಲವು ಮಹಿಳೆಯರು ಭಾಗವಹಿಸಿದ್ದರು. ಸ್ಪರ್ಧೆಗೆ ಅವಶ್ಯವಿರವ ಅಡುಗೆ ಸಾಮಾಗ್ರಿ, ಗ್ಯಾಸ್ ಸ್ಟೌವ್, ಮಿಕ್ಸಿ ಹಾಗೂ ಖೋವಾ, ಪನ್ನಿರನ್ನು ನೀಡಲಾಗಿತು. ಸ್ಪರ್ಧಿಗಳು ಮನೆಯಿಂದ ತಂದ ಸ್ವಂತ ಪಾತ್ರೆಗಳನ್ನು ಬಳಸಿಕೊಂಡು 45 ನಿಮಿಷಗಳಲ್ಲಿ ಪನ್ನಿರ್ ಬಳಸಿಕೊಂಡು ಪನ್ನಿರ್ ಬೂರ್ಜಿ, ಹನಿ ಚಿಲ್ಲಿ ಪನ್ನಿರ್, ಪನ್ನಿರ್ ಕಟ್ಲೇಟ್ ಮತ್ತು ಖೋವಾದಿಂದ ಮೀಠಾ ಬಾತ್, ಖೋವಾ ಬನಾನ ಡಿಲೈಟ್, ಖೋವಾ ಫೈನಾಪಲ್ ಫೈರ್ ಸೇರಿದಂತೆ ಬಗೆ ಬಗೆಯ ತಿನಿಸುಗಳನ್ನು ತಯಾರಿಸಿ ಗಮನ ಸೆಳೆದರು.
ನಂದಿನಿ ಪಾಕ ಸ್ಪರ್ಧೆಯಲ್ಲಿ ಮೈಸೂರಿನ ಮಾನಸಿನಗರದ ದೀಪಾ(ಪ್ರಥಮ- 10 ಸಾವಿರ), ಕುವೆಂಪುನಗರದ ಉಮಾ ವಿವೇಕ್(ದ್ವಿತೀಯ- 7500) ಮತ್ತು ನಿವೇದಿತನಗರದ ಚಾಂದಿನಿ ವಿಜಯಕುಮಾರ್(ತೃತೀಯ- 5000) ಬಹುಮಾನ ಪಡೆದರು. 5 ಮಂದಿಗೆ ತಲಾ 1000 ರೂ. ಸಮಾಧಾನಕರ ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಪಿ.ಎಂ. ಪ್ರಸನ್ನ ವಿತರಿಸಿದರು.ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕರಾದ ಎ.ಟಿ. ಸೋಮಶೇಖರ, ಕೆ. ಉಮಾಶಂಕರ್, ಕೆ.ಜಿ. ಮಹೇಶ್, ಸಿ. ಓಂಪ್ರಕಾಶ್, ಕೆ. ಈರೇಗೌಡ, ಕೆ.ಎಸ್. ಕುಮಾರ್, ದ್ರಾಕ್ಷಾಯಿಣಿ ಬಸವರಾಜಪ್ಪ, ಬಿ.ಕೆ. ಲೀಲಾ ನಾಗರಾಜ್, ಬಿ. ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಡಿ. ರಾಜೇಂದ್ರ, ಬಿ.ಎನ್. ಸದಾನಂದ, ಆರ್. ಚಲುವರಾಜು, ಗುರುಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ ಬಿ.ಎನ್. ವಿಜಯಕುಮಾರ್, ವ್ಯವಸ್ಥಾಪಕರಾದ ಕೆ.ಎಸ್. ಜಗದೀಶ್, ಜಯಶಂಕರ್, ಬಿ.ಎಲ್. ಶ್ವೇತ, ಎಸ್. ಗಿರಿಜಾ ಇದ್ದರು.