ಮಕ್ಕಳನ್ನು ಮುಖ್ಯವಾಹಿನಿಗೆ ಕಲಿಕಾ ಹಬ್ಬ ಆಚರಣೆ: ರವಿಕುಮಾರ್

KannadaprabhaNewsNetwork | Published : Feb 20, 2025 12:45 AM

ಸಾರಾಂಶ

ಕಲಿಕೆಯಲ್ಲಿ ಹಿಂದುಳಿದ ಪ್ರತಿ ಮಗುವು ಮೂಲ ಕಲಿಕಾ ಜ್ಞಾನ ಅರಿಯಬೇಕೆಂಬುದು ಇದರ ಮೂಲ ಉದ್ದೇಶವಾಗಿದೆ. ಪ್ರಾಥಮಿಕ ಹಂತದಲ್ಲೇ ಭಾಷಾ ವಿಷಯಗಳಲ್ಲಿ ವರ್ಣಮಾಲೆ, ಕಾಗುಣಿತ, ವರ್ಣಾಕ್ಷರ, ಸಂಕಲನ, ವ್ಯವಕಲನ, ಭಾಗಾಕಾರ, ಕಲಿಯಬೇಕಾದ ಅಗತ್ಯತೆ ಇದೆ. ಮಕ್ಕಳಿಗೆ ಕಲಿಕೆಗೆ ನಿರಾಶೆಯಾಗಬಾರದು.

ಕನ್ನಡಪ್ರಭ ವಾರ್ತೆ ಹಲಗೂರು

ಓದು, ಬರಹ ಮತ್ತು ಸಂಖ್ಯಾ ಜ್ಞಾನದಲ್ಲಿ ಪ್ರಗತಿ ಸಾಧಿಸದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಜೊತೆಗೆ ಉತ್ತಮ ಕಲಿಕೆ ವಾತಾವರಣವನ್ನು ಪ್ರೇರಿಪಿಸಲು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕಲಿಕಾ ಹಬ್ಬ ಆಚರಣೆ ಜಾರಿಗೆ ತರಲಾಗಿದೆ ಎಂದು ತಾಲೂಕು ಶಿಕ್ಷಣ ಸಂಯೋಜಕ ಟಿ.ಎಂ.ರವಿಕುಮಾರ್ ತಿಳಿಸಿದರು.

ಸಮೀಪದ ಹುಚ್ಚೇಗೌಡನದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಹುಸ್ಕೂರು ಆಶ್ರಯದಲ್ಲಿ ಏರ್ಪಡಿಸಿದ್ದ ಕ್ಲಸ್ಟರ್ ಹಂತದ ಎಫ್.ಎಲ್.ಎನ್. ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ಕಲಿಕೆಯಲ್ಲಿ ಹಿಂದುಳಿದ ಪ್ರತಿ ಮಗುವು ಮೂಲ ಕಲಿಕಾ ಜ್ಞಾನ ಅರಿಯಬೇಕೆಂಬುದು ಇದರ ಮೂಲ ಉದ್ದೇಶವಾಗಿದೆ. ಪ್ರಾಥಮಿಕ ಹಂತದಲ್ಲೇ ಭಾಷಾ ವಿಷಯಗಳಲ್ಲಿ ವರ್ಣಮಾಲೆ, ಕಾಗುಣಿತ, ವರ್ಣಾಕ್ಷರ, ಸಂಕಲನ, ವ್ಯವಕಲನ, ಭಾಗಾಕಾರ, ಕಲಿಯಬೇಕಾದ ಅಗತ್ಯತೆ ಇದೆ. ಮಕ್ಕಳಿಗೆ ಕಲಿಕೆಗೆ ನಿರಾಶೆಯಾಗಬಾರದು. ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳ ಕಲಿಕೆ ಆಗಬೇಕು. ಈ ನಿಟ್ಟಿನಲ್ಲಿ ಕಲಿಕೆಯನ್ನು ಒಂದು ಹಬ್ಬದ ರೂಪ ನೀಡಲಾಗಿದೆ ಎಂದರು.

ಹುಸ್ಕೂರು ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ನಡೆದ ಗಟ್ಟಿ ಓದು ವಿಭಾಗದಲ್ಲಿ ಅನಿಷಾ ವಿ.ಗೌಡ, ಗಾನವಿ ಗೌಡ, ಪ್ರಾರ್ಥನ, ಸಂತಸ ದಾಯಕ ಗಣಿತ ಕಲಿಕೆಯಲ್ಲಿ ಭವಿಷ್ ಗೌಡ, ಋತ್ವಿಕಾ, ಸ್ಪಂದನಾ, ಸ್ಮರಣಾ ಶಕ್ತಿ ಸ್ಪರ್ಧೆಯಲ್ಲಿ ಪಲ್ಲವಿ, ಗೌತಮ್, ಪ್ರಣಮ್, ಪೋಷಕರ ಸಹ ಸಂಬಂಧ ವಿಭಾಗದಲ್ಲಿ ಲಾವಣ್ಯ, ಮಂಜುಳ, ಉಷಾ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದುಕೊಂಡರು. ರಶಪ್ರಶ್ನೆ ವಿಭಾಗದಲ್ಲಿ ಹುಸ್ಕೂರು, ಸಿದ್ದಾಪುರ, ಹುಚ್ಚೇಗೌಡದೊಡ್ಡಿ ಶಾಲೆಯ ವಿದ್ಯಾರ್ಥಿಗಳು ಬಹುಮಾನ ಪಡೆದುಕೊಂಡರು.

ಈ ವೇಳೆ ಹುಸ್ಕೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸೋಮಣ್ಣ, ಹುಸ್ಕೂರು ವಲಯದ ಸಿ.ಆರ್.ಪಿ. ರೇವಣ್ಣ, ರವಿಕುಮಾರ್, ರೇವಣ್ಣ, ಮುಖ್ಯ ಶಿಕ್ಷಕ ದೇವರಾಜು, ಲಿಂಗಣ್ಣ, ಬಸವರಾಜು, ರಮೇಶ್, ಹೇಮಲತಾ, ನಿರ್ಮಲಾ, ಸುಗುಣ, ರೇಖಾ, ಶಿಕ್ಷಕರಾದ ಅಶ್ವಿನಿ, ಆದರ್ಶ, ಅನ್ನಪೂರ್ಣ, ಕೆಂಡಗಣ್ಣಸ್ವಾಮಿ, ತೌಸಿಫ್, ಸೌಮ್ಯ, ಮಂಜುಳ ಸೇರಿದಂತೆ ಹಲವರು ಭಾಗವಹಿಸಿದ್ದರು.

Share this article