ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲಾ ಆಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಗ್ರಾಮೀಣ ವಲಯ ಹಾಗೂ ಶಿವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ತಾಲೂಕಿನ ಶಿವಣಗಿಯಲ್ಲಿ ಹಮ್ಮಿಕೊಂಡ ಶಾಲಾ ಶಿಕ್ಷಕರಿಗೆ ಸಾಂಕ್ರಾಮಿಕ ರೋಗಗಳ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನೆಯ ಸುತ್ತಮುತ್ತ ತಗ್ಗು ಮತ್ತು ಗುಂಡಿಗಳಿದ್ದರೆ ಮಣ್ಣಿನಿಂದ ಮುಚ್ಚಬೇಕು. ಮನೆಯ ಸುತ್ತಮುತ್ತ ಹೂವಿನ ಕುಂಡ, ಟೈರ್, ಗ್ಲಾಸ್ ಅಥವಾ ಪ್ಲಾಸ್ಟಿಕ್ ಬಾಟಲ್, ತೆಂಗಿನ ಚಿಪ್ಪು ಮತ್ತು ಇತರೆ ವಸ್ತುಗಳಿದ್ದರೆ ಅದರಲ್ಲಿ ನೀರು ನಿಲ್ಲದ ಹಾಗೆ ನೋಡಿಕೊಳ್ಳಬೇಕು. ಅವುಗಳನ್ನು ವಿಲೇವಾರಿ ಮಾಡಬೇಕು. ಸೊಳ್ಳೆಗಳ ಕಚ್ಚುವಿಕೆಯಿಂದ ಪಾರಾಗಲು ಪ್ರತಿಯೊಬ್ಬರು ತಮ್ಮ ಮನೆಯ, ಕಿಟಕಿ, ಬಾಗಿಲುಗಳಿಗೆ ತಂತಿ ಜಾಲರಿ ಅಳವಡಿಸುವುದು, ಸೊಳ್ಳೆ ಲಿಕ್ವಿಡ್, ಸೊಳ್ಳೆಬತ್ತಿ, ಸೊಳ್ಳೆ ಕ್ರೀಮ್‌ಗಳನ್ನು ಉಪಯೋಗಿಸಿ, ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸಿಕೊಂಡು ಸೊಳ್ಳೆಗಳು ಕಚ್ಚಿದಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಗರ್ಭಿಣಿಯರು, ವೃದ್ಧರು ಮತ್ತು ಚಿಕ್ಕ ಮಕ್ಕಳು, ಸೊಳ್ಳೆ ಕಡಿತದಿಂದ ಜಾಗೃತರಾಗಿರಬೇಕು. ಮನೆಗಳಲ್ಲಿ ನೀರು ಸಂಗ್ರಹ ವಸ್ತುಗಳನ್ನು ಕನಿಷ್ಠ ನಾಲ್ಕರಿಂದ ಐದು ದಿನಕ್ಕೊಮ್ಮೆ ತೊಳೆದು, ಮತ್ತೆ ನೀರನ್ನು ಸಂಗ್ರಹಿಸಿ, ಮೇಲೆ ಭದ್ರವಾಗಿ ಮುಚ್ಚಬೇಕು, ಇದರಿಂದ ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಬಹುದು ಎಂದರು.ಸ್ವಚ್ಛತೆ ಕಾಪಾಡಿ:
ಆರೋಗ್ಯ ನಿರೀಕ್ಷಣಾಧಿಕಾರಿ ರಾಮನಗೌಡ ಪಾಟೀಲ್ ಮಾತನಾಡಿ, ಮಲೇರಿಯಾ, ಮೆದುಳು ಜ್ವರ ಮತ್ತು ಚಿಕೂನ್ ಗುನ್ಯಾ ರೋಗಗಳ ಹರಡುವಿಕೆ, ಲಕ್ಷಣಗಳು, ರೋಗದ ತಪಾಸಣೆ ಮತ್ತು ಚಿಕಿತ್ಸೆ, ಮುಂಜಾಗ್ರತ ಕ್ರಮಗಳ ಬಗ್ಗೆ ಸುದೀರ್ಘವಾಗಿ ತಿಳಿಸಿದರು. ಈ ತರಬೇತಿಯಲ್ಲಿ ಆರೋಗ್ಯ ಇಲಾಖೆಯ ಶಂಕ್ರಯ್ಯ ಮೇಲಿನಮಠ, ಐ.ಎಮ್.ಕಾಳೆ, ಬಶೀರ್ ಅಹ್ಮದ್ ಬೆನಕನಹಳ್ಳಿ, ವಿಶ್ವನಾಥ ಹಿರೇಮಠ, ತಬಸುಮ ಕೋಟ್ಯಾಳ, ಎಸ್.ಎಸ್.ಮೋರಟಗಿ, ಲಕ್ಷ್ಮಿ ಅರಿಸಿಬಾಗಿಲ, ಅಶ್ರಫ್ ಅಲಿ, ಅಶ್ವಿನಿ ಮೊರೆ ಮತ್ತು ಹಜರುದ್ದಿನ್ ಮಿರ್ದೆ ಸೇರಿದಂತೆ ಶಿವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸರಕಾರಿ, ಅನುದಾನಿತ, ಅನುದಾನ ರಹಿತ, ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯ ಗುರುಗಳು, ಶಿಕ್ಷಕರು ಪಾಲ್ಗೊಂಡಿದ್ದರು.
---ಬಾಕ್ಸ್
ಮುನ್ನೆಚ್ಚರಿಕೆ ಸೂಕ್ತಆರೋಗ್ಯ ಇಲಾಖೆಯಿಂದ ನಮ್ಮ ಎಲ್ಲಾ ಶಿಕ್ಷಕರಿಗೆ ಸಾಂಕ್ರಾಮಿಕ ರೋಗಗಳ ತರಬೇತಿ ಹಮ್ಮಿಕೊಂಡಿರುತ್ತಾರೆ. ತರಬೇತಿಯನ್ನು ಪಡೆದುಕೊಂಡು, ನಿಮ್ಮ ನಿಮ್ಮ ಶಾಲಾ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳ, ಲಕ್ಷಣಗಳು, ತಡೆಗಟ್ಟುವಿಕೆ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಎಲ್ಲರು ವೈಯಕ್ತಿಕ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಎಲ್ಲರು ಆರೋಗ್ಯವಂತರಾಗಿರಲು ರೋಗಗಳ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿದುಕೊಳ್ಳುವುದು ಸೂಕ್ತ ಎಂದು ಶಿಕ್ಷಣ ಇಲಾಖೆಯ ಶಿವಣಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಶಿಕ್ಷಕ ಎಂ.ಎಸ್.ಗುಬಚಿ ತಿಳಿಸಿದರು.