- ಶಿವಗಂಗೋತ್ರಿ ದಾವಣಗೆರೆ ವಿವಿ ಕಾರ್ಯಾಗಾರದಲ್ಲಿ ದೆಹಲಿಯ ಡೆಲ್‌ನೆಟ್ ಸಂಸ್ಥೆ ನಿರ್ದೇಶಕಿ ಡಾ.ಸಂಗೀತಾ ಕೌಲ್ ಸಲಹೆ
ಡಿಜಿಟಲ್ ಗ್ರಂಥಾಲಯಗಳಲ್ಲಿ ಸೈಬರ್ ಭದ್ರತೆ ಮತ್ತು, ದತ್ತಾಂಶ ಗೌಪ್ಯತೆ ಬಗ್ಗೆ ಕಾಳಜಿ ವಹಿಸುವುದು ಅತಿ ಮುಖ್ಯವಾಗಿದೆ ಎಂದು ದೆಹಲಿಯ ಡೆಲ್‌ನೆಟ್ ಸಂಸ್ಥೆ ನಿರ್ದೇಶಕಿ ಡಾ.ಸಂಗೀತಾ ಕೌಲ್ ಹೇಳಿದರು.
ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿ.ವಿ.ಯಲ್ಲಿ ದೆಹಲಿಯ ಡೆವಲಪಿಂಗ್ ಲೈಬ್ರರಿ ನೆಟ್‌ವರ್ಕ್ (ಡೆಲ್‌ನೆಟ್) ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗ್ರಂಥಾಲಯಗಳು, ಗ್ರಂಥಪಾಲಕರು ಮತ್ತು ಓದುಗರನ್ನು ಪರಿವರ್ತಿಸುವುದು ಮತ್ತು ಸಬಲೀಕರಗೊಳಿಸುವುದು: ಇತ್ತೀಚಿನ ಪ್ರವೃತ್ತಿಗಳು ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಡಿಜಿಟಲ್ ಗ್ರಂಥಾಲಯಗಳು ವೈವಿಧ್ಯಮಯ ಬಳಕೆದಾರರ ಅಗತ್ಯತೆ ಪೂರೈಸಲು ನಿರಂತರ ಸುಧಾರಣೆಗೆ ಓದುಗರ ಪ್ರತಿಕ್ರಿಯೆ ಬಳಸಿಕೊಳ್ಳಬೇಕು. ಡಿಜಿಟಲ್ ಕೌಶಲ್ಯಗಳೊಂದಿಗೆ ಓದುಗರನ್ನು ಸಬಲಗೊಳಿಸಲು ಗ್ರಂಥಪಾಲಕರು ಆನ್‌ಲೈನ್ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ ಮೂಲಕ ಡಿಜಿಟಲ್ ವಿಭಜನೆ (ಡಿಜಿಟಲ್ ಡಿವೈಡ್)ಯನ್ನೂ ಪರಿಹರಿಸಬೇಕು. ಗ್ರಂಥಾಲಯಗಳ ಸೇವೆ ಮತ್ತು ಸಂಪನ್ಮೂಲ ಸಂಗ್ರಹಣೆ ಬಳಕೆಗೆ ಡೇಟಾ ವಿಶ್ಲೇಷಣೆ ಬಳಸಿಕೊಳ್ಳುವುದೂ ಅಗತ್ಯ ಎಂದು ತಿಳಿಸಿದರು.
ಗ್ರಂಥಾಲಯಗಳನ್ನು ಡಿಜಿಟಲ್ ಸಂಗ್ರಹಣೆ ಮಾಡಿ, ನಿರ್ವಹಿಸಲು ಅನುಕೂಲ ಮಾಡಿಕೊಟ್ಟಿವೆ. ಯಾವುದೇ ಸಮಯದಲ್ಲಿ, ಎಲ್ಲಿಯೇ ಇದ್ದರೂ ಜಾಗತಿಕ ಮಟ್ಟದ ಸಂಶೋಧನೆಗಳ ಮಾಹಿತಿಯನ್ನು ಮುಕ್ತವಾಗಿ ಪಡೆಯಲು ಸಹಾಯಕವಾಗಿದೆ. ಗ್ರಂಥಾಲಯಗಳು ಕಲಿಕೆ, ನಾವೀನ್ಯತೆ ಮತ್ತು ಸಾಮಾಜಿಕ ಸಂವಹನಕ್ಕಾಗಿ ಸಹಯೋಗ ಸ್ಥಳಗಳಾಗಿ ವಿಕಸನಗೊಳ್ಳುತ್ತಿದೆ ಎಂದು ಡಾ.ಸಂಗೀತಾ ಕೌಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಈಚಿನ ಕೃತಕ ಬುದ್ಧಿಮತ್ತೆ, ಡೇಟಾ ಅನಲೈಟಿಕ್ಸ್ ಸೇರಿದಂತೆ ಇತರೆ ತಂತ್ರಜ್ಞಾನಗಳು ಕ್ಷೇತ್ರವನ್ನು ತಾಂತ್ರಿಕವಾಗಿ ಸಬಲಗೊಳಿಸುತ್ತಿವೆ. ಸರ್ಕಾರವು ತಂತ್ರಜ್ಞಾನ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಖರ್ಚು ಮಾಡುತ್ತಿದೆ. ಆದರೆ, ಓದುಗರನ್ನು ಗ್ರಂಥಾಲಯದಲ್ಲಿ ಹಿಡಿದಿಟ್ಟು, ಓದಿನತ್ತ ಆಸಕ್ತಿ ಮೂಡಿಸುವ ಪ್ರಯತ್ನ ವಿಫಲವಾಗಿದೆ. ಇದಕ್ಕೆ ಕಾರಣವೇನೆಂಬ ಬಗ್ಗೆ ಅವಲೋಕಿಸಿ, ಗ್ರಂಥಾಲಯಗಳಿಗೆ ಪುನರುಜ್ಜೀವನ ನೀಡಬೇಕಾಗಿದೆ ಎಂದು ತಿಳಿಸಿದರು.
- - -
- ಪ್ರೊ. ಬಿ.ಡಿ.ಕುಂಬಾರ, ಕುಲಪತಿ, ದಾವಿವಿ
ಕಾರ್ಯಾಗಾರವನ್ನು ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಉದ್ಘಾಟಿಸಿದರು.