ಕನ್ನಡಪ್ರಭ ವಾರ್ತೆ ಅಥಣಿ
ಇಲ್ಲಿನ ಗಚ್ಚಿನಮಠದಲ್ಲಿ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಥಣಿ ತಾಲೂಕ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಪುಲೆಯವರ 195ನೇ ಜಯಂತಿ ಹಾಗೂ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಗುವಿಗೆ ಶಿಕ್ಷಣದ ಜೊತೆಗೆ ತಾವು ಎಲ್ಲ ಶಿಕ್ಷಕರು ಸಂಸ್ಕೃತಿಯನ್ನು ತಿಳಿಸಿಕೊಡಬೇಕು. ಖಾಸಗಿ ಶಾಲೆಗಳ ಪೈಪೋಟಿಯ ಮಧ್ಯದಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗದಂತೆ ಕರ್ತವ್ಯ ನಿರ್ವಹಿಸುವ ಕಾರ್ಯ ಶಿಕ್ಷಕರಿಂದ ಆಗಲಿ ಎಂದರು.ಸಾನಿಧ್ಯ ವಹಿಸಿದ್ದ ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಮಾತೆ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ಪ್ರಾರಂಭವಾದ ಈ ಸಂಘ ಶಿಕ್ಷಕಿಯರ ಧ್ವನಿಯಾಗಿ, ಶಿಕ್ಷಕಿಯರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿ. ಶಿಕ್ಷಕ ವೃತ್ತಿ ಜಿಲ್ಲಾ ಪದವಿಗಳಿಗಿಂತ ದೊಡ್ಡದು, ಗುರುವಿನ ಸ್ಥಾನಕ್ಕೆ ಇರುವ ಗೌರವವನ್ನು ಕಾಪಾಡಿಕೊಂಡು ಮಕ್ಕಳಿಗೆ ಅಕ್ಷರದ ಅರಿವು ಮೂಡಿಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು, ದೇಶಪ್ರೇಮವನ್ನ ಬಿತ್ತಬೇಕೆಂದು ಕರೆ ನೀಡಿದರು.
ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ರೇಣುಕಾ ಬಡಕಂಬಿ ಪ್ರಾಸ್ತಾವಿಕವಾಗಿ ಮಾತನಾಡಿ, ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಕೆಲವು ಮಹಿಳೆಯರು ಅನುಭವಿಸುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಘಟನೆಯನ್ನು ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕಿನಲ್ಲಿ ಸ್ಥಾಪನೆ ಮಾಡಲಾಗಿದೆ. ತಾಲೂಕಿನ ಎಲ್ಲ ಶಿಕ್ಷಕಿಯರು ಮುಕ್ತವಾಗಿ ನಮಗೆ ತಮ್ಮ ಸಮಸ್ಯೆಯನ್ನು ಹೇಳಿ ಬಗೆ ಹರಿಸಿಕೊಳ್ಳಬಹುದು ಎಂದು ತಿಳಿಸಿದರು. ಶಿಕ್ಷಕಿ ಸರೀತಾ ಶಿರಗುಪ್ಪಿ ಉಪನ್ಯಾಸ ನೀಡಿ ಸಾವಿತ್ರಿಬಾಯಿ ಫುಲೆ ಅವರ ಶೈಕ್ಷಣಿಕ, ಸಾಮಾಜಿಕ ಸೇವೆಗಳನ್ನು ವಿವರಿಸಿದರು. ನಂತರ ಅಥಣಿ ತಾಲೂಕ ಮಟ್ಟದ ಆದರ್ಶ ಶಿಕ್ಷಕಿಯರಿಗೆ ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಕಾರ್ಯಕ್ರಮದಲ್ಲಿ ಪುರಸಭೆಯ ಅಧ್ಯಕ್ಷ ಶಿವಲೀಲಾ ಬುಟಾಳಿ, ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ಗಿರೀಶ ದಿವಾನಮಳ, ಸರಿತಾ ಶಿರಗುಪ್ಪಿ, ಗೌಡಪ್ಪ ಖೋತ, ಎಸ್.ಬಿ.ಕರೋಶಿ, ರಾಮಗೊಂಡ ಪಾಟೀಲ, ಭುವನೇಶ್ವರಿ ಹಿರೇಮಠ, ನಾಗಪ್ಪಾ ಉಗಾರೆ, ವಿಶ್ವನಾಥ ಸೂರ್ಯವಂಶಿ, ಸಿ.ಎಂ.ಕಾಂಬಳೆ, ರವಿ ಬಡಕಂಬಿ, ಸುನೀಲ ದಾದಾಗೋಳ, ಗುಲಾಬ್ ಅತ್ತಾರ, ರಂಜನಾ ಚೌಗಲಾ, ಜೆಡ್.ಎಚ್.ಕುಡಚಿ, ಎಸ್.ಎಲ್.ಮೇಲ್ಗಡೆ, ಆರತಿ ಖೋತ, ಸವಿತಾ ಹಿರೇಮಠ, ಎ.ಎಸ್.ಪೂಜಾರಿ, ಅನೀಲ ಗಸ್ತಿ, ಚೈತ್ರಾ ಶೆಟ್ಟಿ, ಪಲ್ಲವಿ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರೇಣುಕಾ ಬಡಕಂಬಿ ಸ್ವಾಗತಿಸಿದರು. ಸಿಂಚನಾ ಚೌಗಲಾ ವಂದಿಸಿದರು.