ಆರೋಗ್ಯ ಕಾಪಾಡುವುದು ನಮ್ಮದೇ ಜವಾಬ್ದಾರಿ

KannadaprabhaNewsNetwork |  
Published : Dec 20, 2025, 01:45 AM IST
ಉಚಿತ ಆರೋಗ್ಯ ಶಿಬಿರ | Kannada Prabha

ಸಾರಾಂಶ

ಮದುವೆ ಆದ ಮೇಲೆ ಯಾವ ಯಾವ ಪರೀಕ್ಷೆಗಳು ವಯಸ್ಸಿಗೆ ಅನುಗುಣವಾಗಿ ಪರೀಕ್ಷೆಗಳನ್ನು ಮಾಡುತ್ತಾ ಬರುತ್ತಿದ್ದೇವೆ. ಆರೋಗ್ಯ ಎಂದರೇ ಏನು? ಅದರ ಪರಿಕಲ್ಪನೆ ಏನು? ಒಂದು ಪರಿಪೂರ್ಣವಾದ ಆರೋಗ್ಯದ ಕಲ್ಪನೆಯನ್ನು ಮಾಡಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ಮೆದುಮೇಹ, ರಕ್ತಹೀನತೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಇವುಗಳನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಲು ಆರೋಗ್ಯ ತಪಾಸಣೆ ಅಗತ್ಯವೆಂದರು.

ಕನ್ನಡಪ್ರಭ ವಾರ್ತೆ ಹಾಸನ

ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಜಾಗರೂಕರಾಗಬೇಕು. ಯಾವುದೇ ತೊಂದರೆ ಕಂಡುಬಂದರೆ ತಕ್ಷಣವೇ ಪರಿಣಿತ ವೈದ್ಯರಿಂದ ತಪಾಸಣೆ ಹಾಗೂ ಚಿಕಿತ್ಸೆ ಪಡೆಯುವುದು ಅತ್ಯಂತ ಅಗತ್ಯ ಎಂದು ವೈದ್ಯಕೀಯ ನಿರ್ದೇಶಕಿ, ಮಣಿ ಸ್ಪೆಷಾಲಿಟಿ ಸ್ಪೆಷಲ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಸೌಮ್ಯ ಮಣಿ ಸಲಹೆ ನೀಡಿದರು.ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಅಲ್ಯೂಮಿನಿಯಂ ಹಾಲ್‌ನಲ್ಲಿಲ್ಲಿ ಕಾಲೇಜಿನ ಮಹಿಳಾ ಸಬಲಿಕರಣ ವಿಭಾಗದ ವತಿಯಿಂದ, ದಿವಾಕಸ್ ಸ್ಪೆಷಲ್ ಹಾಸ್ಪಿಟಲ್ ಹಾಗೂ ಹಾಸನ ಮಣಿ ಹಾಸ್ಪಿಟಲ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹಿಳೆಯರ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಮದುವೆ ಆದ ಮೇಲೆ ಯಾವ ಯಾವ ಪರೀಕ್ಷೆಗಳು ವಯಸ್ಸಿಗೆ ಅನುಗುಣವಾಗಿ ಪರೀಕ್ಷೆಗಳನ್ನು ಮಾಡುತ್ತಾ ಬರುತ್ತಿದ್ದೇವೆ. ಆರೋಗ್ಯ ಎಂದರೇ ಏನು? ಅದರ ಪರಿಕಲ್ಪನೆ ಏನು? ಒಂದು ಪರಿಪೂರ್ಣವಾದ ಆರೋಗ್ಯದ ಕಲ್ಪನೆಯನ್ನು ಮಾಡಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ಮೆದುಮೇಹ, ರಕ್ತಹೀನತೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಇವುಗಳನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಲು ಆರೋಗ್ಯ ತಪಾಸಣೆ ಅಗತ್ಯವೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಅಮರೇಂದ್ರ ಮಾತನಾಡಿ, ಕಾಲೇಜಿನಲ್ಲಿ ಮಹಿಳಾ ನೌಕರರಿಗಾಗಿ ಮಹಿಳಾ ಸಬಲಿಕರಣ ವಿಭಾಗವು ನಿಯಮಿತವಾಗಿ ಆರೋಗ್ಯ ತಪಾಸಣೆಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಗರ್ಭಕಂಠದ ಕ್ಯಾನ್ಸರ್ ತಪಾಸಣೆ, ಮೂಳೆಗಳಲ್ಲಿನ ಕ್ಯಾಲ್ಸಿಯಂ ಹಾಗೂ ಖನಿಜಾಂಶ ಪರೀಕ್ಷೆ, ಸ್ಥನ ಕ್ಯಾನ್ಸರ್, ರಕ್ತದೊತ್ತಡ, ಹೃದಯ ಕಾಯಿಲೆ, ರಕ್ತದಲ್ಲಿ ಕೆಂಪು ರಕ್ತಕಣಗಳ ಪ್ರಮಾಣ ಹಾಗೂ ಮೆದುಮೇಹ ಸಂಬಂಧಿತ ತಪಾಸಣೆಗಳು ಮಹಿಳೆಯರ ಆರೋಗ್ಯ ರಕ್ಷಣೆಗೆ ಅತ್ಯಂತ ಸಹಕಾರಿಯಾಗಿವೆ ಎಂದು ತಿಳಿಸಿದರು. ಇಂತಹ ಆರೋಗ್ಯ ಶಿಬಿರಗಳಿಗೆ ಕಾಲೇಜಿನ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರವಿದೆ ಎಂದೂ ಹೇಳಿದರು.

ಬೆಂಗಳೂರು ದಿವಾಕಸ್ ಸ್ಪೆಷಲಿಟಿ ಹಾಸ್ಪಿಟಲ್ನ ಡಾ. ಕಾವೇರಿ ಹಾಗೂ ವೈದ್ಯಕೀಯ ತಂಡದ ಸದಸ್ಯರಾದ ಗೀತಾ, ಮೋಲಮ್ಮ, ಜವರಯ್ಯ ಮತ್ತಿತರರು ಶಿಬಿರದಲ್ಲಿ ಭಾಗವಹಿಸಿ ಮಹಿಳಾ ನೌಕರರಿಗೆ ಆರೋಗ್ಯ ತಪಾಸಣೆ ನಡೆಸಿದರು. ಈ ಶಿಬಿರದಲ್ಲಿ ಕಾಲೇಜಿನ ಮಹಿಳಾ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕಾರ್ಯಕ್ರಮದ ಸ್ವಾಗತವನ್ನು ಸಹ ಪ್ರಾಧ್ಯಾಪಕಿ ಹಾಗೂ ಸಂಯೋಜಕಿ ಡಿ.ಎಸ್. ಅಮೃತಾ ನೆರವೇರಿಸಿದರು. ಸಹ ಪ್ರಾಧ್ಯಾಪಕಿ ಹಾಗೂ ಸಂಯೋಜಕಿ ಎಸ್.ಕೆ. ಯೋಗಿತಾ, ಕಾಲೇಜಿನ ರಿಜಿಸ್ಟ್ರಾರ್‌ ಕುಮುದ, ಎನ್‌ಎಸ್‌ಎಸ್ ಅಧಿಕಾರಿ ವಿಜಯಕುಮಾರ್ ತೀಲೆ, ಮಾಧ್ಯಮ ಸಂಯೋಜಕ ಕಟ್ಟಾಯ ಶಿವಕುಮಾರ್, ಹಾಸನ ರೋಟರಿ ಅಧ್ಯಕ್ಷ ಸಿದ್ದೇಶ್, ರೋಟರಿ ಸಮಿತಿಯ ಮಮತಾ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!