ಕಂದಾಯ ಇಲಾಖೆಯಲ್ಲಿ ಮಹತ್ತರ ಬದಲಾವಣೆ: ಶಾಸಕ ಜಿ.ಎಚ್.ಶ್ರೀನಿವಾಸ್

KannadaprabhaNewsNetwork |  
Published : Jun 12, 2025, 01:31 AM IST
ತರೀಕೆರೆಯಲ್ಲಿ ಗ್ರಾಮ ಅಡಳಿತ ಅಧಿಕಾರಿಗಳಿಗೆ  ಲ್ಯಾಪ್ ಟ್ಯಾಪ್ ವಿತರಣಾ ಕಾರ್ಯಕ್ರಮ  | Kannada Prabha

ಸಾರಾಂಶ

ತರೀಕೆರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನೆರವಿನಿಂದ ಕಂದಾಯ ಇಲಾಖೆಯಲ್ಲಿ ಆಗುತ್ತಿರುವ ಮಹತ್ತರ ಮತ್ತು ಕ್ರಾಂತಿಕಾರಕ ಬದಲಾವಣೆ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗುತ್ತಿವೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.

- ತರೀಕೆರೆಯಲ್ಲಿ ಗ್ರಾಮ ಅಡಳಿತ ಅಧಿಕಾರಿಗಳಿಗೆ ಲ್ಯಾಪ್ ಟ್ಯಾಪ್ ವಿತರಣೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನೆರವಿನಿಂದ ಕಂದಾಯ ಇಲಾಖೆಯಲ್ಲಿ ಆಗುತ್ತಿರುವ ಮಹತ್ತರ ಮತ್ತು ಕ್ರಾಂತಿಕಾರಕ ಬದಲಾವಣೆ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗುತ್ತಿವೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.ತಹಸೀಲ್ದಾರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮಾಡಳಿತ ಅಧಿಕಾರಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಿ ಮಾತನಾಡಿದರು. ಗ್ರಾಮ ಇ-ಆಪೀಸ್, ಡಿಜಿ-ಕಂದಾಯ, ಮುಖಾಂತರ ವಿವಿಧ ಪಿಂಚಣಿಗಳು ತತ್ರಾಂಶದ ಮೂಲಕ ವಿತರಿಸುತ್ತಿರುವುದರಿಂದ ಲ್ಯಾಪ್ ಟ್ಯಾಪ್‌ಗಳಿಂದ ಹೆಚ್ಚು ಅನುಕೂಲವಾಗುತ್ತದೆ. ಸಾರ್ವಜನಿಕರು ಕಚೇರಿಗೆ ಅಲೆದಾಡುವುದು ತಪ್ಪತ್ತದೆ. ಗ್ರಾಮಾಡಳಿತ ಅಧಿಕಾರಿಗಳು ಹೆಚ್ಚು ಆಸಕ್ತಿಯಿಂದ ಕಂದಾಯ ಇಲಾಖೆ ವಿವಿಧ ಕಾರ್ಯ ಗಳನ್ನು ನಿರ್ವಹಿಸಬೇಕು ಎಂದು ಸೂಚಿಸಿದರು.

ಪ್ರಜಾಸೌಧ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳನ್ನು ನಿರ್ಮಿಸಲು 18 ಎಕರೆ 2 ಗುಂಟೆ ಸ್ಥಳ ವನ್ನು ಅಜ್ಜಂಪುರ ಸಮೀಪ ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.ತರೀಕೆರೆ ಕ್ಷೇತ್ರದ ವ್ಯಾಪ್ತಿಯಲ್ಲಿ 187 ಗ್ರಾಮಗಳಲ್ಲಿ 10 ಸಾವಿರಕ್ಕೂ ಹೆಚ್ಚು ಇ-ಸ್ವತ್ತು ಇಲ್ಲದಿರುವ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ತರೀಕರೆ ತಾಲೂಕಿನಲ್ಲಿ ಗ್ರಾಮಠಾಣ ವಿಸ್ತರಣೆಗೆ ತಾಲೂಕಿನಲ್ಲಿ ಕುಡ್ಲೂರು ಮತ್ತು ಭಾವಿಕೆರೆ- ಅಜ್ಜಂಪುರ ತಾಲೂಕಿನಲ್ಲಿ ಬಗ್ಗವಳ್ಳಿ ಗ್ರಾಮಗಳನ್ನು ಪ್ರಾಯೋಗಿಕವಾಗಿ ಗುರುತಿಸಲಾಗಿದೆ ಎಂದು ಹೇಳಿದರು. ಈ ಕುರಿತು ಗ್ರಾಮ ಆಡಳಿತ, ಸರ್ವೆ, ಕಂದಾಯ ಅಧಿಕಾರಿಗಳೊಡನೆ ಮಾಹಿತಿ ಸಭೆ ನಡೆಸಲಾಗಿದೆ, ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಂದಾಯ ಗ್ರಾಮ, ಗ್ರಾಮಠಾಣ ಗುರುತಿಸುವಿಕೆ ಉತ್ತಮವಾಗಿದೆ. ಈ ಕ್ರಮ ಇಡೀ ರಾಜ್ಯಕ್ಕೆ ವಿಸ್ತರಣೆಯಾಗಲಿದೆ ಎಂದು ಹೇಳಿದರು.ಉಪವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್, ತಹಸೀಲ್ದಾರ್ ಗ್ರೇಡ್-2 ನೂರುಲ್ ಉದಾ, ಅಜ್ಜಂಪುರ ತಹಸೀಲ್ದಾರ್ ವಿನಾಯಕ ಸಾಗರ್, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಧರ್ಮರಾಜ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಸಮೀವುಲ್ಲಾ ಷರೀಫ್, ಪುರಸಭೆ ನಾಮಿನಿ ಸದಸ್ಯರಾದ ಮಂಜುನಾಥ್, ಅಬ್ಬಾಸ್, ಜಯರಾಮ್ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.10ಕೆಟಆರ್.ಕೆ.4ಃ

ತರೀಕೆರೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಗ್ರಾಮ ಅಡಳಿತ ಅಧಿಕಾರಿಗಳಿಗೆ ಲ್ಯಾಪ್-ಟ್ಯಾಪ್ ಗಳನ್ನು ವಿತರಿಸಿದರು. ಉಪ ವಿಭಾಗಾಧಿಕಾರಿಡಾ.ಕೆ.ಜಿ. ಕಾಂತರಾಜ್, ತಹಸೀಲ್ದಾರ್ ಗ್ರೇಡ್-2 ನೂರುಲ್ ಉದಾ, ಅಜ್ಜಂಪುರ ತಹಶೀಲ್ದಾರ್ ವಿನಾಯಕ ಸಾಗರ್ ಮತ್ತಿತರರು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ