ಬುದ್ಧಿ ಪ್ರಚೋದಿಸುವ ಯಕ್ಷಗಾನ: ಗೋಡೆ ನಾರಾಯಣ ಹೆಗಡೆ

KannadaprabhaNewsNetwork |  
Published : Jun 12, 2025, 01:30 AM IST
ಫೊಟೊಪೈಲ್-೭ಎಸ್ಡಿಪಿ೬- ಸಿದ್ದಾಪುರ ತಾಲೂಕಿನ ವಾಜಗದ್ದೆಯಲ್ಲಿ ಗೋಡೆ ನಾರಾಯಣ ಹೆಗಡೆಯವರಿಗೆ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಜನರ ಬದುಕು ಮತ್ತು ಸಮಾಜಕ್ಕೆ ಅತಿ ಉಪಯುಕ್ತವಾದ ಮಾಹಿತಿಗಳು ಯಕ್ಷಗಾನದಿಂದ ಪಡೆದುಕೊಳ್ಳಲು ಸಾಧ್ಯ.

ಸಿದ್ದಾಪುರ: ಜನರ ಬದುಕು ಮತ್ತು ಸಮಾಜಕ್ಕೆ ಅತಿ ಉಪಯುಕ್ತವಾದ ಮಾಹಿತಿಗಳು ಯಕ್ಷಗಾನದಿಂದ ಪಡೆದುಕೊಳ್ಳಲು ಸಾಧ್ಯ. ಯಕ್ಷಗಾನ ರಸಾತ್ಮಕವಾಗಿರುವದರ ಜೊತೆಗೆ ಬುದ್ದಿ ಪ್ರಚೋದಕವೂ ಆಗಿದೆ ಎಂದು ರಾಜ್ಯಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಹೇಳಿದರು.

ತಾಲೂಕಿನ ವಾಜಗದ್ದೆಯ ದರ‍್ಗಾವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಯಕ್ಷಚಂದನ ದಂಟಕಲ್ ಅವರು ದಿ.ಗಣಪತಿ ಹೆಗಡೆ ದಂಟಕಲ್ ನೆನಪಿನಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಯಕ್ಷಗಾನ ಕೇವಲ ಹಾರಿ ಕುಣಿಯುವುದಲ್ಲ. ಅದನ್ನು ಸಮರ್ಪಕವಾಗಿ ಅಧ್ಯಯನ ಮಾಡುವುದರ ಮೂಲಕ ಸಾಧನೆ ಮಾಡಬೇಕು. ಪ್ರತಿಯೊಬ್ಬರೂ ತಂದೆ ತಾಯಿಯನ್ನು ಗೌರವಿಸಬೇಕು ಎಂದರು.

ಹಿರಿಯ ಸಾಮಾಜಿಕ ಮುಖಂಡ ಎಸ್.ಕೆ.ಭಾಗವತ್ ಶಿರಸಿಮಕ್ಕಿ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಕಲಾವಿದರಿಗೆ ಗೋಡೆ ನಾರಾಯಣ ಹೆಗಡೆ ಅವರು ಸ್ಪರ‍್ತಿ ಹಾಗೂ ಮಾದರಿ ಆಗಿದ್ದಾರೆ. ಯಕ್ಷಗಾನ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ. ಯುವಕರು ಯಕ್ಷಗಾನ ರಂಗಕ್ಕೆ ಬರುತ್ತಿರುವುದು ಸ್ವಾಗತಾರ್ಹವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ಮೇರು ಕಲಾವಿದರಿರುವುದು ಸಂತಸವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಬಡಗುತಿಟ್ಟಿನ ಸ್ಟಾರ್ ಕಲಾವಿದರಲ್ಲಿ ಒಬ್ಬರಾದ ಗೋಡೆ ನಾರಾಯಣ ಹೆಗಡೆ ಯಕ್ಷಗಾನದ ಪರಂಪರೆಯನ್ನು ಬೆಳೆಸಿಕೊಂಡು ಬಂದವರಾಗಿದ್ದಾರೆ. ಯಕ್ಷಗಾನ ಮನರಂಜನೆಗಾಗಿ ಮಾತ್ರ ಅಲ್ಲ. ಸಮಾಜಕ್ಕೆ ಆರ‍್ಶದ ನೀತಿ ಪಾಠವನ್ನು ತಿಳಿಸುವಂತಹುದು ಎಂದರು.

ಅಭಿನಂದನಾ ಮಾತನಾಡಿದ ಗೋಪಾಲ ಹೆಗಡೆ ಹುಲಿಮನೆ ಗೋಡೆ ನಾರಾಯಣ ಅವರು ಯಕ್ಷರತ್ನ. ಶಂಭು ಹೆಗಡೆ ಕೆರೆಮನೆ, ಮಹಾಬಲ ಹೆಗಡೆ ಕೆರೆಮನೆ, ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಂಥ ಮೇರು ಕಲಾವಿದರೊಂದಿಗೆ ಸರಿಸಾಟಿಯಾಗಿ ಪಾತ್ರನರ‍್ವಹಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡವರು ಗೋಡೆ ನಾರಾಯಣ ಹೆಗಡೆ ಅವರು. ಅವರ ಪಾತ್ರ ಚಿತ್ರಣ ಎಲ್ಲ ಪ್ರೇಕ್ಷರಿಗೂ ಅಚ್ಚುಮೆಚ್ಚಾಗಿದೆ. ಸ್ತ್ರೀ ವೇಷಧಾರಿಯಾಗಿ ಯಕ್ಷರಂಗ ಪ್ರವೇಶಿಸಿ ಹೆಸರುಗಳಿಸಿ ನಂತರ ಪುರುಷ ಪಾತ್ರವನ್ನು ನರ‍್ವಹಿಸಿ ಖ್ಯಾತಿ ಗಳಿಸಿದ್ದಾರೆ ಎಂದರು.

ಟಿಎಸ್‌ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ, ಅನಂತ ಮರ‍್ತಿ ಹೆಗಡೆ ಶಿರಸಿ, ಉಪೇಂದ್ರ ಪೈ ಶಿರಸಿ, ಎಸ್.ಎಂ.ಹೆಗಡೆ ಪೇಟೆಸರ ಉಪಸ್ಥಿತರಿದ್ದರು.

ಸತೀಶ ಹೆಗಡೆ ದಂಟಕಲ್, ಸುಜಾತಾ ಹೆಗಡೆ ದಂಟಕಲ್, ವಿ.ಗೋಪಾಲ ಜೋಶಿ ವಾಜಗದ್ದೆ, ಶ್ರೀಪಾದ ಹೆಗಡೆ ಕಲ್ಮನೆ ಕಾರ‍್ಯಕ್ರಮ ನಿರ್ವಹಿಸಿದರು.

ನಂತರ ಪ್ರದರ್ಶನಗೊಂಡ ಚಂದ್ರಹಾಸ ಚರಿತ್ರೆ ಯಕ್ಷಗಾನದ ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಸತೀಶ ಹೆಗಡೆ ದಂಟಕಲ್, ನಂದನ ಹೆಗಡೆ ದಂಟಕಲ್, ಶಂಕರ ಭಾಗವತ, ಗಣೇಶ ಗಾಂವ್ಕರ್, ರಘುಪತಿ ಹೆಗಡೆ ಹೂಡೇಹದ್ದ ಸಹಕರಿಸಿದರು.

ಶಂಕರ ಹೆಗಡೆ ನೀಲ್ಕೋಡು, ಸುಬ್ರಹ್ಮಣ್ಯ ಚಿಟ್ಟಾಣಿ, ವಿನಯ ಬೇರೊಳ್ಳಿ, ನಾಗೇಂದ್ರ ಮೂರೂರು, ಮಹಾಬಲೇಶ್ವರ ಗೌಡ, ನಿತಿನ್ ದಂಕಟಲ್, ರಕ್ಷಿತ ಕುಳಿಮನೆ, ವೆಂಕಟೇಶ ಹೆಗಡೆ ವಾಟಗಾರ ವಿವಿಧ ಪಾತ್ರ ನಿರ್ವಹಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ