ಮಕರ ಸಂಕ್ರಾಂತಿ ಮದ್ದೂರು ತಾಲೂಕಿನಾದ್ಯಂತ ಸಡಗರ, ಸಂಭ್ರಮದಿಂದ ಆಚರಣೆ

KannadaprabhaNewsNetwork |  
Published : Jan 16, 2024, 01:53 AM ISTUpdated : Jan 16, 2024, 03:00 PM IST
15ಕೆಎಂಎನ್ ಡಿ16ಮದ್ದೂರು ಕೆಂಗಲ್ ಹನುಮಂತಯ್ಯ ನಗರದಲ್ಲಿ ಮಹಿಳೆಯರು ಮಕ್ಕಳೊಂದಿಗೆ ತೆರಳಿ ಎಳ್ಳು ಬೆಲ್ಲ ವಿತರಿಸಿ ಪರಸ್ಪರ ಸಂಕ್ರಾಂತಿ ಹಬ್ಬದ ಶುಭಾಶಯ ವಿನಿಯಮ ಮಾಡಿಕೊಂಡರು. | Kannada Prabha

ಸಾರಾಂಶ

ಪಾಂಡವಪುರ ತಾಲೂಕಿನಾದ್ಯಂತ ಹೆಣ್ಣುಮಕ್ಕಳು ಹೊಸ ಉಡುಗೆ ತೊಟ್ಟು ಎಳ್ಳು ಬೆಲ್ಲ ಹಂಚುವ ಮೂಲಕ ಸಂಭ್ರಮದಿಂದ ಆಚರಣೆ, ಮನೆ ಮುಂದೆ ಬಣ್ಣಗಳಿಂದ ರಂಗೋಲಿ ಹಾಕಿ, ಬಳಿಕ ದೇವರಿಗೆ ಎಳ್ಳುಬೆಲ್ಲ, ಕಬ್ಬು ಇಟ್ಟು ಪೂಜೆ ಸಲ್ಲಿಕೆ.

ಕನ್ನಡಪ್ರಭ ವಾರ್ತೆ ಮದ್ದೂರು

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ತಾಲೂಕಿನಾದ್ಯಂತ ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ನಿಮಿತ್ತ ಪುರಾಣ ಪ್ರಸಿದ್ಧ ವೈದ್ಯನಾಥಪುರ ವೈದ್ಯನಾಥೇಶ್ವರ, ಚಿಕ್ಕ ಅಂಕನಹಳ್ಳಿಯ ನಂದಿ ಬಸವೇಶ್ವರ, ಸಿ.ಎಂ.ಕೆರೆ ಕಾಲಭೈರವೇಶ್ವರ, ಮದ್ದೂರಿನ ಕಾಶಿ ವಿಶ್ವೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳು ಮುಂಜಾನೆ ಅಭಿಷೇಕ ಪುಷ್ಪಾಲಂಕಾರ ಸೇವೆಯೊಂದಿಗೆ ವಿಶೇಷ ಪೂಜಾ ಕಾರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿತು.

ಭಕ್ತಾದಿಗಳು ದೇಗುಲಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಧನ್ಯತಾಭಾವ ಮೆರೆದರು. ಮುಂಜಾನೆ ರೈತರು ತಮ್ಮ ಜಾನುವಾರುಗಳನ್ನು ಶುಚಿಗೊಳಿಸಿದರು. ಮಹಿಳೆಯರು ತಮ್ಮ ತಮ್ಮ ಮನೆಗಳ ಮುಂಭಾಗ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಗೋ ಪೂಜೆ ನೆರವೇರಿಸಿದರು.

ಸಂಜೆ ಮಹಿಳೆಯರು ಮತ್ತು ಮಕ್ಕಳು ಮನೆ ಮನೆಗೆ ತಿರುಳಿ ಎಳ್ಳು ಬೆಲ್ಲ ವಿತರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಗೋವುಗಳನ್ನು ಸೋಮವಾರ ಕಿಚ್ಚು ಹಾಯಿಸಬಾರದು ಎಂಬ ಸಂಪ್ರದಾಯದ ಹಿನ್ನೆಲೆಯಲ್ಲಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ರೈತರು ಮಂಗಳವಾರ ಕಿಚ್ಚು ಹಾಯಿಸುವ ನಿರ್ಧಾರ ಕೈಗೊಂಡಿದ್ದಾರೆ.

ಕಾಶಿ ಚಂದ್ರಮೌಳೇಶ್ವರಸ್ವಾಮಿ ಲಿಂಗ ಸ್ಪರ್ಶಿಸಿದ ಸೂರ್ಯ ಕಿರಣಗಳು

ಶ್ರೀರಂಗಪಟ್ಟಣ: ಪಟ್ಟಣದ ಹೊರವಲಯದ ಚಂದ್ರವನ ಆಶ್ರಮದ ಐತಿಹಾಸಿಕ ಕಾಶಿ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದ ಗರ್ಭಗುಡಿಯಲ್ಲಿ ಮಕರ ಸಂಕ್ರಾಂತಿಯಂದು ಚಂದ್ರಮೌಳೇಶ್ವರ ಲಿಂಗವನ್ನು ಸೂರ್ಯ ಕಿರಣಗಳು ಸ್ಪರ್ಶಿಸಿದವು.

ಬೆಳಗ್ಗೆ ಸುಮಾರು 7.30ರ ಸಮಯದಲ್ಲಿ ಸೂರ್ಯ ಕಿರಣಗಳು ಶಿವಲಿಂಗವನ್ನು ಸ್ಪರ್ಷಿಸುತಿದ್ದಂತೆ ಈ ಅಪರೂಪದ ಕ್ಷಣಗಳನ್ನು ನೆರೆದಿದ್ದ ಭಕ್ತರು ನೋಡಿ ಕಣ್ತುಂಬಿಕೊಂಡು ಭಕ್ತಿ ಭಾವ ಮೆರೆದರು.

ಮಕರ ಸಂಕಾಂತ್ರಿ ಅಂಗವಾಗಿ ಸೂರ್ಯ ತನ್ನ ಪಥವನ್ನು ಬದಲಾಯಿಸುವ ಹಿನ್ನೆಲೆಯಲ್ಲಿ ಕಾಶಿ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯಕ್ಕೆ ಭಕ್ತರು ಮುಂಜಾನೆ ದೇವಸ್ಥಾನಕ್ಕೆ ಆಗಮಿಸಿ ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಹಾದು ಹೋಗುವ ಹಿನ್ನಲೆಯಲ್ಲಿ ದೇವಸ್ಥಾನಕ್ಕೆ ನೂರಾರು ಭಕ್ತರು ಆಗಮಿಸಿದ್ದರು.

ಬೆಳಗ್ಗೆ ನದಿಯಲ್ಲಿ ಸ್ನಾನ ಮಾಡಿ ದರ್ಶನ ಪಡೆದರೆ ಪುಣ್ಯ ಲಭಿಸುತ್ತದೆ ಎಂಬ ಪ್ರತೀತಿಯಿಂದ ಪಟ್ಟಣ ಮಾತ್ರವಲ್ಲದೆ ಸುತ್ತ ಮುತ್ತಲ ಗ್ರಾಮಗಳ ಜನರ ಆಗಮಿಸಿ ದೇವರ ಕೃಪೆಗೆ ಪ್ರಾರ್ಥರಾದರು.

ನಂತರ ಶ್ರೀಚಂದ್ರಮೌಳೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಎಳ್ಳು, ಬೆಲ್ಲ ಅರ್ಪಣೆ ಸೇರಿದಂತೆ ಇತರೆ ಧಾರ್ಮಿಕ ಪೂಜಾ ಕೈಕರ್ಯಗಳು ನೆರದವು. ಸೂರ್ಯನ ಕಿರಣಗಳು ಶಿವಲಿಂಗವನ್ನು ಹಾದು ಹೋಗುವ ಕ್ಷಣಗಳನ್ನು ವೀಕ್ಷಿಸಲು ಹಾಗೂ ದೇವರ ದರ್ಶನ ಪಡೆಯಲು ಪಟ್ಟಣ ಹಾಗೂ ಸುತ್ತ ಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಭಕ್ತರಿಗೆ ಆಶ್ರಮದ ವತಿಯಿಂದ ಪ್ರಸಾದ ವಿನಿಯೋಗ ನಡೆಯಿತು.

ಈ ವೇಳೆ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!