ಮೂಲಸೌಕರ್ಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ: ವಿಜಯಮಹಾಂತೇಶ ದಾನಮ್ಮನವರ

KannadaprabhaNewsNetwork |  
Published : Mar 13, 2026, 02:15 AM IST
ಹಾವೇರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಅವರು ಪ್ರಸಕ್ತ 2026-27ನೇ ಸಾಲಿನ ಆಯವ್ಯಯ ಪ್ರದರ್ಶಿಸಿದರು. | Kannada Prabha

ಸಾರಾಂಶ

ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರಸಭೆ ಆಡಳಿತಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಅವರು ಪ್ರಸಕ್ತ 2026-27ನೇ ಸಾಲಿನ ₹13.85 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.

ಹಾವೇರಿ: ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರಸಭೆ ಆಡಳಿತಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಪ್ರಸಕ್ತ 2026-27ನೇ ಸಾಲಿನ ₹13.85 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.

ಆದಾಯದ ಮೂಲ ಹೆಚ್ಚಿಸಿಕೊಂಡು ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನದೊಂದಿಗೆ ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಂತೆ ನಗರಸಭೆ ಸಿಬ್ಬಂದಿಗೆ ಸೂಚಿಸಿದರು.

ಆದಾಯದ ಮೂಲ: ಹಾವೇರಿ ನಗರಸಭೆ ಸ್ವಂತ ಮೂಲಗಳಾದ ಮನೆ ಕಂದಾಯ ₹6.7 ಕೋಟಿ, ನೀರಿನ ಕರ ₹1 ಕೋಟಿ, ಮಳಿಗೆ ಬಾಡಿಗೆ ₹1.65 ಕೋಟಿ, ಸಂತೆ ಶುಲ್ಕ ₹12.50 ಲಕ್ಷ, ವೇತನ ಅನುದಾನ (ಎಸ್‌ಎಫ್‌ಸಿ) ₹5.65 ಕೋಟಿ, ಎಸ್‌ಎಫ್‌ಸಿ ವಿದ್ಯುತ್ ಅನುದಾನ ₹3.65 ಕೋಟಿ, ಕೇಂದ್ರ ಸರ್ಕಾರದ 15ನೇ ಹಣಕಾಸು ಯೋಜನೆಯಡಿ ₹2.55 ಕೋಟಿ, ಎಸ್‌ಎಫ್‌ಸಿ ರಾಜ್ಯ ಹಣಕಾಸು ಆಯೋಗದ ಅನುದಾನ ₹2.75 ಕೋಟಿ, ಸ್ವಚ್ಛ ಭಾರತ ಯೋಜನೆಗೆ ₹1 ಕೋಟಿ, ಡೇ-ನಲ್ಮ್ ಯೋಜನೆಗೆ ₹5 ಲಕ್ಷ, ಅಸಾಮಾನ್ಯ ಆದಾಯ ₹6.85 ಕೋಟಿ, ಕಟ್ಟಡ ಪರವಾನಗಿ ಶುಲ್ಕ ₹28.67 ಲಕ್ಷ, ಇತರ ಆದಾಯ ₹3.76 ಕೋಟಿ ಅನುದಾನ ನಿರೀಕ್ಷಿಸಲಾಗಿದೆ ಎಂದರು.

ಆದ್ಯತಾ ವಲಯ: ಪ್ರತಿ ವಾರ್ಡ್‌ನಲ್ಲೂ ರಸ್ತೆ ನಿಮಾಣಕ್ಕೆ ₹4.15 ಕೋಟಿ, ಹೊಸ ಚರಂಡಿ, ಸಿಡಿ ನಿರ್ಮಾಣಕ್ಕೆ ₹1.92 ಕೋಟಿ, ಹೊಸ ಪೈಪ್‌ಲೈನ್‌ಗೆ ₹1.92 ಕೋಟಿ, ಹೊಸ ಪಂಪ್‌ಸೆಟ್ ಖರೀದಿಗೆ ₹95 ಲಕ್ಷ, ರಸ್ತೆ ದುರಸ್ತಿಗೆ ₹98.79 ಲಕ್ಷ, ಚರಂಡಿ ದುರಸ್ತಿಗೆ ₹1.29 ಕೋಟಿ, ನಗರ ನೈರ್ಮಲೀಕರಣಕ್ಕೆ ₹3.96 ಕೋಟಿ, ಪೈಪ್‌ಲೈನ್ ದುರಸ್ತಿಗೆ ₹1.27 ಕೋಟಿ, ಮೋಟಾರ ದುರಸ್ತಿಗೆ ₹89 ಲಕ್ಷ, ನೀರು ಸರಬರಾಜು ಸಾಮಗ್ರಿ ಖರೀದಿಗೆ ₹65 ಲಕ್ಷ, ಬೀದಿ ದೀಪ ನಿರ್ವಹಣೆ ₹1.49 ಕೋಟಿ, ವಿದ್ಯುತ್ ಬಿಲ್‌ಗೆ ₹3.70 ಕೋಟಿ, ವೇತನಕ್ಕಾಗಿ ₹5.55 ಕೋಟಿ, ಸಾರ್ವಜನಿಕ ಉದ್ಯಾನಗಳು ಹಾಗೂ ಕೆರೆ ಅಭಿವೃದ್ಧಿಗಾಗಿ ₹25 ಲಕ್ಷ, ಎಸ್‌ಸಿ, ಎಸ್‌ಟಿ ಜನರ ಅಭಿವೃದ್ಧಿಗೆ ₹30.80 ಲಕ್ಷ, ಅಂಗವಿಕಲರ ಅಭಿವೃದ್ಧಿಗೆ ₹13 ಲಕ್ಷ, ಸ್ಟೇಷನರಿ ಸಾಮಗ್ರಿ ಸೇರಿ ಇತರ ವೆಚ್ಚಕ್ಕಾಗಿ ₹2 ಕೋಟಿ ಅನುದಾನ ಮೀಸಲಿರಿಸಲಾಗಿದೆ ಎಂದರು.

ಈ ವೇಳೆ ವಿಧಾನಸಭೆ ಉಪಾಧ್ಯಕ್ಷರು, ಶಾಸಕ ರುದ್ರಪ್ಪ ಲಮಾಣಿ, ಅಪರ ಜಿಲ್ಲಾಧಿಕಾರಿ ಎಲ್. ನಾಗರಾಜ, ಪೌರಾಯುಕ್ತ ಎಚ್. ಕಾಂತರಾಜು, ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಇತರರಿದ್ದರು. ಲೆಕ್ಕಾಧೀಕ್ಷಕಿ ಶೋಭಾ ಉದಗಟ್ಟಿ ನಿರ್ವಹಿಸಿದರು.ಆದಾಯ ಹೆಚ್ಚಿಸಿಕೊಳ್ಳಿ: ನಗರಸಭೆಯ ಆದಾಯದ ಮೂಲ ಹೆಚ್ಚಿಸಿಕೊಂಡು ಮುಂದಿನ ಸಾರಿ ಇನ್ನಷ್ಟು ಹೆಚ್ಚಿನ ಉಳಿತಾಯ ಬಜೆಟ್ ಮಂಡಿಸಲು ಪ್ರಯತ್ನಿಸಬೇಕು. ನಮ್ಮ ಸಂಪನ್ಮೂಲ ಹೆಚ್ಚಿಕೊಂಡರೆ ನಗರದ ಅಭಿವೃದ್ಧಿ ಮಾಡಲು ಅನುಕೂಲ ಆಗಲಿದೆ. ಅ ಖಾತೆಯಿಂದ ಬ ಖಾತೆ ಮಾಡಬೇಕು. ಇದರಿಂದ ಬಡವರಿಗೆ ಅನುಕೂಲ ಆಗಲಿದೆ ಎಂದು ಸ್ಥಳೀಯ ಶಾಸಕ ರುದ್ರಪ್ಪ ಲಮಾಣಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!