ಧಾರವಾಡ:
ಕರ್ನಾಟಕ ವಿದ್ಯಾವರ್ಧಕ ಸಂಘವು ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನ ಉತ್ತರಾಧಿಮಠ ದತ್ತಿ ಅಂಗವಾಗಿ ಆಯೋಜಿಸಿದ್ದ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ ಪ್ರದಾನದಲ್ಲಿ ಮಾತನಾಡಿದ ಅವರು, ವೈಚಾರಿಕ ಪ್ರಜ್ಞೆ ಹಾಗೂ ಸಾಮಾಜಿಕ ಕಳಕಳಿಯ ದಾಸರ ಹಾಡುಗಳು ಸಮಾಜ ಪರಿವರ್ತನೆಗೆ ದಾರಿ ದೀಪಗಳಾಗಿವೆ. ಇಂದು ದಾಸ ಸಾಹಿತ್ಯವು ಎಲ್ಲರ ಮನೆ-ಮನ ಮುಟ್ಟಬೇಕು. ಇಂದಿನ ವಿಜ್ಞಾನ, ತಂತ್ರಜ್ಞಾನದ ಪ್ರಭಾವದಿಂದ ಮಕ್ಕಳು ಅತಿಯಾದ ಮೊಬೈಲ್ ಬಳಕೆಯಿಂದ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಮಕ್ಕಳು ಖಿನ್ನತೆಗೆ ಒಳಗಾಗಿದ್ದಾರೆ. ಮಕ್ಕಳನ್ನೇ ಮೊಬೈಲ್ ಬಳಕೆಯಿಂದ ದೂರವಿರಿಸಲು ಪಾಲಕರು ಇಂತಹ ಸತ್ಸಂಗದಲ್ಲಿ ಪಾಲ್ಗೊಳ್ಳುವಂತೆ ಪಾಲಕರು ಮಾಡಬೇಕು ಎಂದು ಸಲಹೆ ನೀಡಿದರು.
ಅಖಿಲ ಭಾರತ ಬ್ರಾಹ್ಮಣ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಎನ್.ಆರ್. ಕುಲಕರ್ಣಿ ಹಾಗೂ ನುಗ್ಗಿಕೇರಿ ಪರ್ಯಾಸ್ಥರಾದ ಕೆ.ಆರ್. ದೇಸಾಯಿ ಮಾತನಾಡಿದರು. ಡಾ. ಕೃತಿಕಾ ಸತ್ಯಬೋಧ ಗುತ್ತಲ ದಾಸರ ಹಾಡುಗಳ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು. ಮಾಯಾ ಚಿಕ್ಕೇರೂರ, ಪದ್ಮಜಾ ಉಮರ್ಜಿ, ನಟರಾಜ ಮಹಾಜನ ನಿರ್ಣಾಯಕರಾಗಿದ್ದರು. 85 ವರ್ಷ ಪೂರೈಸಿದ ನಿಮಿತ್ತ ಎಸ್.ಬಿ. ಗುತ್ತಲ ಅವರನ್ನು ಗೌರವಿಸಲಾಯಿತು.ಆರಂಭದಲ್ಲಿ ‘ಹರಿದಾಸರ’ ಹಾಡುಗಳ ಸ್ಪರ್ಧೆಯಲ್ಲಿ 27ಕ್ಕೂ ಹೆಚ್ಚು ಭಜನಾ ಮತ್ತು ಮಹಿಳಾ ಮಂಡಳಗಳು ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಮಾಳಮಡ್ಡಿಯ ಸ್ವರಾತ್ಮಕ ಭಜನಾ ಮಂಡಳವು ಪ್ರಥಮ ಸ್ಥಾನ ಪಡೆದು ‘ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ ಪಡೆಯಿತು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶೇಷರಾಜ ಗುತ್ತಲ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ವೀರಣ್ಣ ಒಡೀನ ವಂದಿಸಿದರು.