ಮಕ್ಕಳಲ್ಲಿ ಗುಡ್ ಟಚ್, ಬ್ಯಾಡ್ ಟಚ್ ಜಾಗೃತಿ ಮೂಡಿಸಿ: ವಿಜಯ್

KannadaprabhaNewsNetwork |  
Published : Feb 24, 2025, 12:33 AM IST
22 ಎಚ್‍ಆರ್‍ಆರ್ 02ಹರಿಹರ: ಹರಿಹರದ ಸಂತ ಅಲೋಶಿಯಸ್ ಇಂಟನ್ರ್ಯಾಷನಲ್ ಶಾಲೆಯಲ್ಲಿ ಶನಿವಾರ 2024-25ನೆ ಸಾಲಿನ ಶಿಶುವಿಹಾರ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭ ನಡೆಸಲಾಯಿತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಸಂತೋಷ್ ಕುಮಾರ್, ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಇನಾಯತ್ ಉಲ್ಲಾ ಟಿ., ಫಾ.ಎರಿಕ್ ಮಥಾಯಸ್ ಇದ್ದರು. | Kannada Prabha

ಸಾರಾಂಶ

ಗುಡ್ ಟಚ್, ಬ್ಯಾಡ್ ಟಚ್ (ಮಮತೆಯ ಸ್ಪರ್ಶ, ದುರ್ಭಾವನೆಯ ಸ್ಪರ್ಶ) ಕುರಿತು ಮಕ್ಕಳಲ್ಲಿ ಪೋಷಕರು ಹಾಗೂ ಶಿಕ್ಷಕರು ಆಗಾಗ ಜಾಗೃತಿ ಮೂಡಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಸಂತೋಷ್ ಕುಮಾರ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಶಿಶುವಿಹಾರ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ - - - ಕನ್ನಡಪ್ರಭ ವಾರ್ತೆ ಹರಿಹರ

ಗುಡ್ ಟಚ್, ಬ್ಯಾಡ್ ಟಚ್ (ಮಮತೆಯ ಸ್ಪರ್ಶ, ದುರ್ಭಾವನೆಯ ಸ್ಪರ್ಶ) ಕುರಿತು ಮಕ್ಕಳಲ್ಲಿ ಪೋಷಕರು ಹಾಗೂ ಶಿಕ್ಷಕರು ಆಗಾಗ ಜಾಗೃತಿ ಮೂಡಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಸಂತೋಷ್ ಕುಮಾರ್ ಹೇಳಿದರು.

ನಗರದ ಸಂತ ಅಲೋಶಿಯಸ್ ಇಂಟರ್‌ ನ್ಯಾಷನಲ್ ಶಾಲೆಯಲ್ಲಿ 2024- 2025ನೇ ಸಾಲಿನ ಶಿಶುವಿಹಾರ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮುದ್ದು ಮಾಡುವ ನೆಪದಲ್ಲಿ ದುರ್ಭಾವನೆಯಿಂದ ಮಕ್ಕಳ ಖಾಸಗಿ ಭಾಗಗಳಿಗೆ ಸ್ಪರ್ಶಿಸುವುದನ್ನು ತಪ್ಪಿಸಬೇಕಿದೆ ಎಂದರು.

ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿತರು ಬಹುತೇಕ ಸಂಬಂಧಿಗಳು ಅಥವಾ ಪರಿಚಯಸ್ಥರೇ ಆಗಿರುತ್ತಾರೆ. ದುರ್ಭಾವನೆಯ ಸ್ಪರ್ಶವಾದಾಗ ಅದನ್ನು ಪ್ರತಿರೋಧಿಸುವುದನ್ನು ಮಕ್ಕಳಿಗೆ ಕಲಿಸುವ ಅಗತ್ಯವಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಇನಾಯತ್ ಉಲ್ಲಾ ಟಿ. ಮಾತನಾಡಿ, ಗುಣಮಟ್ಟದ ಪ್ರಾಥಮಿಕ ಶಿಕ್ಷಣ ದೊರೆತರೆ ಮಕ್ಕಳು ಶೈಕ್ಷಣಿಕವಾಗಿ ಪ್ರಬಲರಾಗಿ ಬೆಳೆಯುತ್ತಾರೆ. ಮನೆಯಲ್ಲಿ ಪೋಷಕರು ಕೂಡ ಮಕ್ಕಳು ಶಾಲೆಯಲ್ಲಿ ಕಲಿತು ಬಂದದ್ದನ್ನು ಪುನರ್ಮನನ ಮಾಡಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ನಿರ್ದೇಶಕ ಫಾ. ಎರಿಕ್ ಮಥಾಯಸ್ ಮಾತನಾಡಿ, ಅತ್ಯುತ್ತಮ ಮೈದಾನ, ಕಟ್ಟಡ, ಕಲಿಕೋಪಕರಣ, ಗುಣಮಟ್ಟದ ಶಿಕ್ಷಕರು, ಶೈಕ್ಷಣಿಕ ವಾತಾವರಣ ಈ ಶಾಲೆಯಲ್ಲಿದೆ. ಪೋಷಕರಿಂದ ಪಡೆದ ಶುಲ್ಕವನ್ನು ಶಾಲಾಭಿವೃದ್ಧಿ, ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಬಳಕೆ ಮಾಡಲಾಗುತ್ತಿದೆ ಎಂದರು.

ಅನಂತರ ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಚಟುವಟಿಕೆಗಳು ಜನಮನ ಸೆಳೆದವು. ಸಾಧಕ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು. ಪ್ರಾಂಶುಪಾಲರಾದ ಸಿಸ್ಟರ್ ಶಾಂತಿ ಡೇವಿಡ್, ಪುಷ್ಪಲತಾ ಅರಸು ಹಾಗೂ ಉಪ ಪ್ರಾಂಶುಪಾಲ ಫಾ.ವಿನೋದ್ ಎ.ಜೆ., ಸಂಸ್ಥೆ ಆಡಳಿತಾಧಿಕಾರಿ ಫಾದರ್ ಜಾನ್ ಬ್ಯಾಪ್ಟಿಸ್ಟ್, ಶಿಕ್ಷಕರಾದ ಅಬ್ದುಲ್ ರೆಹಮಾನ್, ಮೌಸಿನ್ ಉಲ್ಲಾ, ಮಂಜುನಾಥ್ ಎಲ್.ಎಸ್. ಉಪಸ್ಥಿತರಿದ್ದರು.

- - - (** ಈ ಪೋಟೋ-ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಿ)

-22ಎಚ್‍ಆರ್‍ಆರ್02:

ಹರಿಹರದ ಸಂತ ಅಲೋಶಿಯಸ್ ಇಂಟರ್‌ ನ್ಯಾಷನಲ್ ಶಾಲೆಯಲ್ಲಿ ಶನಿವಾರ 2024- 2025ನೇ ಸಾಲಿನ ಶಿಶುವಿಹಾರ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ನಡೆಯಿತು. ಎಎಸ್‌ಪಿ ವಿಜಯ್ ಸಂತೋಷ್ ಕುಮಾರ್, ದಾವಣಗೆರೆ ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಇನಾಯತ್ ಉಲ್ಲಾ ಟಿ., ಫಾ.ಎರಿಕ್ ಮಥಾಯಸ್ ಇದ್ದರು.

PREV

Recommended Stories

ಉಪರಾಷ್ಟ್ರಪತಿ ಹುದ್ದೆ ರೇಸಲ್ಲಿ ರಾಜ್ಯ ಗೌರ್ನರ್‌ ಗೆಹಲೋತ್‌?
ಮಕ್ಕಳಲ್ಲಿ ಬಾಲ್ಯದಿಂದಲೇ ದೇಶಪ್ರೇಮ ತುಂಬಿ