ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ದೊಡ್ಡಬೂವಳ್ಳಿ, ರಾವಣಿಯ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ರೋಟರಿ ಬೆಂಗಳೂರು ಬ್ರಿಗೇಡ್, ರೋಟರಿ ಇಂದಿರಾನಗರ, ರೋಟರಿ ಪ್ಲಾಟಿನಂ ಸಿಟಿ, ರೋಟರಿ ಸ್ಕೈವೇ, ರೋಟರಿ ಯಲಹಂಕ ಸಂಸ್ಥೆಗಳು ಸಹಯೋಗದೊಂದಿಗೆ ಸೋಮವಾರ ಲಕ್ಷ ಕಲ್ಪವೃಕ್ಷ ಮಹಾಮೇಳ ಯೋಜನೆಯಡಿ ತೆಂಗಿನ ಸಸಿ ವಿತರಿಸಿ ಮಾತನಾಡಿದರು.
ಹಲವು ಸಮಾಜ ಮುಖಿ ಕಾರ್ಯಚಟುವಟಿಕೆಗಳ ಮೂಲಕ ರೋಟರಿ ಅಂಗ ಸಂಸ್ಥೆಗಳ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಯೇ ನಮ್ಮ ಮೂಲ ಉದ್ದೇಶವಾಗಿ ಮಳವಳ್ಳಿಯ ವಿವಿಧ ಶಾಲೆಗಳ ಮಕ್ಕಳಿಗೆ 2000 ಸಾವಿರ ತೆಂಗಿನ ಸಸಿ ವಿತರಿಸಲಾಗುತ್ತಿದೆ ಎಂದರು.ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ಮಾತನಾಡಿ, ರಸಗೊಬ್ಬರಗಳ ಅತಿಬಳಕೆಯಿಂದ ಮಣ್ಣಿನ ಫಲವತ್ತೆ ಕುಸಿದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ನಾವು ಬೆಳೆಯುವ ಆಹಾರವೇ ವಿಷಯುಕ್ತವಾಗುತ್ತದೆ. ಹೀಗಾಗಿ ಸಾವಯವ ಕೃಷಿಯತ್ತ ಎಲ್ಲರ ಗಮನ ಹರಿಸಬೇಕು. ಸಾವಯವ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.