ನ್ಯಾಯಮೂರ್ತಿ ಶಿವಶಂಕರೇಗೌಡರಿಂದ ಮಾನಸ ಪ್ರಶಸ್ತಿ ಪ್ರದಾನ ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಕ್ಕಳನ್ನು ಸಾಹಿತ್ಯ ಪುಸ್ತಕ ಓದುವಂತೆ ಮಾಡಿ ಅವರಲ್ಲಿ ಸಾಹಿತ್ಯ ಸೃಷ್ಟಿಗೆ ಪೋಷಕರು ಸಹಕರಿಸಬೇಕು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಸಲಹೆ ನೀಡಿದರು. ಮಾನಸ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.ಮಕ್ಕಳನ್ನು ಸಾಹಿತ್ಯದ ಪುಸ್ತಕ ಓದಿಸುವ ಮೂಲಕ ಹೊಸ ಸಾಹಿತ್ಯ ಸೃಷ್ಟಿಗೆ ಅವರನ್ನು ಪ್ರೇರೇಪಿಸಬೇಕು ಎಂದು ಜ್ಞಾನಪೀಠ ಪುರಸ್ಕೃತ ಸಾಹಿತಿ, ನಾಡೋಜ ಚಂದ್ರಶೇಖರ ಕಂಬಾರ ಸಲಹೆ ನೀಡಿದರು.
ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಅಯೋಜಿಸಿದ್ದ ಮಾನಸ ಪ್ರಶಸ್ತಿ ಪ್ರದಾನ ಸಮಾರೋಪ ಸಮಾರಂಭದಲ್ಲಿ ಡಾ.ಚಂದ್ರಶೇಖರ ಕಂಬಾರ ಅವರಿಗೆ ಆರ್. ಸಿದ್ದೇಗೌಡ ಲಿಂಗಮ್ಮನವರ ಸ್ಮರಣಾರ್ಥ ನೀಡಲಾಗುವ ಮಾನಸ ಪ್ರಶಸ್ತಿಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ಶಿವಶಂಕರೇಗೌಡ ಪ್ರದಾನ ಮಾಡಿದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಂಬಾರರು, ಭಾರತದ ದೇಶದ ಮಕ್ಕಳೆಲ್ಲರೂ ಸೃಜನಶೀಲರು, ಅವರಿಂದ ಸಾಹಿತ್ಯವನ್ನು ಓದಿಸಬೇಕು. ಹೊಸ ಸಾಹಿತ್ಯ ಸೃಷ್ಟಿಸುವಂತೆ ಪ್ರೇರೇಪಿಸಬೇಕು. ಮಾನಸ ಪ್ರಶಸ್ತಿ ಸ್ವೀಕರಿಸುವ ಈ ಕ್ಷಣ ಸಂತಸ ತಂದಿದೆ ಎಂದು ಹೇಳಿದರು.
ವಿಶ್ರಾಂತ ಕುಲಪತಿ ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ಮಾನಸ ಶಿಕ್ಷಣ ಸಂಸ್ಥೆ ಗ್ರಾಮೀಣ ಭಾಗದ ಜನರಿಗೆ ಉತ್ತಮ ಸೇವೆಯನ್ನು ಕೊಡುತ್ತಿದೆ, ಗ್ರಾಮೀಣ ಪ್ರದೇಶದ ಸಂಸ್ಕೖತಿ ಪರಂಪರೆಯನ್ನು ಉಳಿಸಲು ಸಂಸ್ಥೆ ಪಣತೊಟ್ಟಿದೆ. ಸ್ಥಳೀಯ ಜ್ಞಾನದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಜನಪದ ಕಲೆಗಳ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುವಲ್ಲಿ ಸಂಸ್ಥೆ ಮಾನಸೋತ್ಸವ ವೇದಿಕೆ ಸೃಷ್ಟಿಸಿದೆ. ಡಾ.ಚಂದ್ರಶೇಖರ ಕಂಬಾರರಿಗೆ ಮಾನಸ ಪ್ರಶಸ್ತಿ ನೀಡಿರುವುದು ಗ್ರಾಮೀಣ ಸಂಸ್ಕೃತಿ ಮತ್ತು ಪರಂಪರೆಗೆ ಭೂಷಣವಾಗಿದೆ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಎ.ಆರ್. ಕೃಷ್ಣ ಮೂರ್ತಿ ಮಾತನಾಡಿ, ‘ಮಾನಸ ಶಿಕ್ಷಣ ಸಂಸ್ಥೆಗೂ ನನಗೂ ಉತ್ತಮ ಒಡನಾಟವಿದೆ ಸಂಸ್ಥೆಯಲ್ಲಿ ಪಿಯುಸಿ ಕಾಲೇಜು ಪ್ರಾರಂಭಿಸಲು ಅಂದಿನ ಸರ್ಕಾರದ ಜೊತೆ ಶಿಫಾರಸ್ಸಿಗೆ ಶ್ರಮಿಸಿದ ಪ್ರತಿಫಲ ಇಂದು ಉತ್ತಮವಾದ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿದೆ. ಗಡಿನಾಡು ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯನ್ನು ರೂಪಿಸಿ ಮೈಸೂರಿನಿಂದ ಬೋಧಕರನ್ನು ಕರೆಯಿಸಿ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರ್ಯದರ್ಶಿ ಡಾ.ದತ್ತೇಶ್ ಶ್ರಮಿಸುತ್ತಿದ್ದಾರೆ ಎಂದರು.
ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ.ಎಸ್ ಶ್ರೀವತ್ಸರವರು ಮಾನಸ ವಾರ್ಷಿಕ ಸಂಚಿಕೆ 2023-24ನ್ನು ಬಿಡುಗಡೆ ಮಾಡಿದರು.ಮಾತೃಭಾಷೆ ಸಾಧನೆಗೆ ಅಡ್ಡಿಯಲ್ಲ
ನ್ಯಾಯಮೂರ್ತಿ ಶಿವಶಂಕರೇಗೌಡರು ಮಾತನಾಡಿ, ‘ಕನ್ನಡವನ್ನು ಉಳಿಸಿ ಬೆಳೆಸಲು ಕಂಬಾರರಂತಹ ಸಾಹಿತಿಗಳ ಸೇವೆಯೇ ಕಾರಣ, ಕಂಬಾರರಿಗೆ ಮಾನಸ ಶಿಕ್ಷಣ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ನಾನು ಕೂಡ ಧನ್ಯ. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸಾಮಾನ್ಯ ಜ್ಞಾನ ಹೆಚ್ಚಿರುತ್ತದೆ, ಉತ್ತಮ ಸಂಸ್ಕಾರವು ಇರುತ್ತದೆ, ಪಟ್ಟಣ ಪ್ರದೇಶದಲ್ಲಿ ವಾಸ ಮಾಡುವವರು ಯಾಂತ್ರಿಕ ಜೀವನವನ್ನು ನಡೆಸುತ್ತಿದ್ದಾರೆ. ಹಳ್ಳಿಯಲ್ಲಿ ಇರುವವರು ಶ್ರಮಜೀವನವನ್ನು ನಡೆಸುತ್ತಾರೆ. ಮಾತೃ ಭಾಷೆ ಕಲಿಕೆ ಸಾಧನೆಗೆ ಅಡ್ಡಿಯಾಗುವುದಿಲ್ಲ. ಉನ್ನತ ಹುದ್ದೆಗೆ ಏರಿರುವವರು ಗ್ರಾಮೀಣ ಪ್ರದೇಶದ ಜನರೇ ಆಗಿದ್ದಾರೆ’ ಎಂದು ಹೇಳಿದರು.ಕೊಳ್ಳೇಗಾಲದಲ್ಲಿ ನಡೆದ ಮಾನಸೋತ್ಸವ ಸಮಾರೋಪ ಸಮಾರಂಭದಲ್ಲಿ ಮಾನಸ ಪ್ರಶಸ್ತಿಯಲ್ಲಿ ಹೆಸರಾಂತ ಸಾಹಿತಿ, ನಾಡೋಜ ಚಂದ್ರಶೇಖರ ಕಂಬಾರರಿಗೆ ಪ್ರದಾನ ಮಾಡಲಾಯಿತು. ನ್ಯಾಯಮೂರ್ತಿ ಶಿವಶಂಕರೇಗೌಡ, ಬೋರಲಿಂಗೇಗೌಡ, ಡಾ.ದತ್ತೇಶ್, ಶಿವರಾಜಪ್ಪ ಇದ್ದಾರೆ.