ಕನ್ನಡಪ್ರಭ ವಾರ್ತೆ ವಿಜಯಪುರ
20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನದ ಮಹಿಳಾ ಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಡಾ.ಲಕ್ಷ್ಮೀದೇವಿ.ವೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಮಹಿಳೆ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಪರಿಹರಿಸುವಲ್ಲಿ ಮಹಿಳೆಗೆ ಅದಕ್ಕೆ ಪೂರಕವಾಗುವ ಪಠ್ಯಕ್ರಮದ ಸಾಹಿತ್ಯ ಇಂದು ಅಗತ್ಯವಾಗಿದೆ ಎಂದರು.
ವೇದ ಅಕಾಡೆಮಿ ಉಪಾಧ್ಯಕ್ಷ ದಯಾನಂದ ಕೆಲೂರ ಮಾತನಾಡಿ, ಮಹಿಳೆ ಹೆಚ್ಚು ಶಿಕ್ಷಣ ಪಡೆಯುವ ಮೂಲಕ ತನ್ನ ವ್ಯಕ್ತಿತ್ವ ವಿಕಸನದ ಮೂಲಕ ತನ್ನ ಕುಟುಂಬಕ್ಕೆ ಆಧಾರಸ್ತಂಭವಾಗಬೇಕು ಎಂದು ಕಿವಿಮಾತು ಹೇಳಿದರು.ಕನ್ನಡ ಸಾಹಿತ್ಯ ಮತ್ತು ಸಬಲೀಕರಣ ಎಂಬ ವಿಷಯದ ಕುರಿತು ರೋಹಿಣಿ ಜತ್ತಿ ಅರ್ಥಪೂರ್ಣವಾಗಿ ಮಾತನಾಡಿದರು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮಹಿಳಾ ಮೀಮಾಂಸೆ ಎಂಬ ವಿಷಯದ ಕುರಿತು ಶಿಲ್ಪಾ ಭಸ್ಮೆ ಔಚಿತ್ಯಪೂರ್ಣವಾಗಿ ಮಾತನಾಡಿದರು. ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸ್ಥಾನಮಾನ ಎಂಬ ವಿಷಯದ ಕುರಿತು ಸುಖದೇವಿ ಅಲಬಾಳಮಠ ವಿವರಿಸಿದರು. ಅತಿಥಿಗಳಾಗಿ ರಾಜಶೇಖರ ಗುಡದಿನ್ನಿ, ದತ್ತಾತ್ರಿ ಎದೆಯ ಹೊಸಮಠ, ಸರೋಜಿನಿ ಬಾಪೂಜಿ ನಿಕ್ಕಂ, ಡಾ.ವಿಶ್ವನಾಥ ಬಾರಕೇರ, ಡಾ.ಶಾರದಾಮಣಿ ಹುಣಶ್ಯಾಳ, ಡಾ.ಸುಧಾ ಸುಣಗಾರ ಅನಿಸಿಕೆ ಹಂಚಿಕೊಂಡರು.ರೇವತಿ ಬೂದಿಹಾಳ ನಿರೂಪಿಸಿದರು. ಜಯಶ್ರೀ ಹಿರೇಮಠ ಸ್ವಾಗತಿಸಿದರು. ಸುನಂದಾ ಸೊನಹಳ್ಳಿ ಹಾಗೂ ಅಂಬಿಕಾ ಪಾಟೀಲ ನಿರ್ವಹಿಸಿದರು, ಬಿ.ಡಿ.ಬಿರಾದಾರ ವಂದಿಸಿದರು. ಈ ವೇಳೆ ಮಹಿಳಾ ವಿವಿಯ ಶಿಕ್ಷಣ ವಿಭಾಗದ ನವ್ಯಕೀರ್ತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಿರೇಶ ವಾಲಿ ಹಾಗೂ ಸಂಗಡಿಗರು ಪ್ರಸ್ತುತಪಡಿಸಿದರು. ಕೆ.ಎಸ್.ಪಾಟೀಲ, ಭಾರತಿ ಪಾಟೀಲ, ವಿದ್ಯಾವತಿ ಅಂಕಲಗಿ, ಅಭಿಷೇಕ ಚಕ್ರವರ್ತಿ, ಅಣ್ಣುಗೌಡ ಬಿರಾದಾರ, ಜಗನ್ನಾಥ ಚೌಧರಿ, ರಾಜುಗೌಡ ಕಳಸಗೊಂಡ, ರವಿ ಕಿತ್ತೂರ, ಸುರೇಶ ಜತ್ತಿ, ಕಮಲಾ ಮುರಾಳ, ಶಾಂತಪ್ಪ ರಾಣಾಗೋಳ, ಕಾಮರಾಜ ಬಿರಾದಾರ, ಶಿವಾನಂದ ಡೋಣೂರ, ಜಿ.ಪಿ.ಬಿರಾದಾರ, ಶಿವಾನಂದ ಬಡಾನೂರ, ಭೀಮನಗೌಡ ಬಿರಾದಾರ, ಆಶಾ ಬಿರಾದಾರ, ಸಿದ್ರಾಮಯ್ಯ ಲಕ್ಕುಂಡಿಮಠ ಮುಂತಾದವರು ಉಪಸ್ಥಿತರಿದ್ದರು.