ಪಾಂಡವಪುರ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ದಾನಿಗಳು ನೀಡುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕನಗನಮರಡಿ ಗ್ರಾಪಂ ಪಿಡಿಒ ಪುರುಷೋತ್ತಮ್ ಹೇಳಿದರು.
ಪಾಂಡವಪುರ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ದಾನಿಗಳು ನೀಡುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕನಗನಮರಡಿ ಗ್ರಾಪಂ ಪಿಡಿಒ ಪುರುಷೋತ್ತಮ್ ಹೇಳಿದರು.
ತಾಲೂಕಿನ ಹೆಗ್ಗಡಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂ ಸದಸ್ಯ ಎಚ್.ಜೆ.ರಾಮಕೃಷ್ಣ ಅವರ ತಂದೆ- ತಾಯಿ ಹೆಸರಿನಲ್ಲಿ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಿಸಿ ಮಾತನಾಡಿದರು.
ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಶಿಕ್ಷಕರು ಹೇಳಿಕೊಡುವ ಪಠ್ಯಗಳನ್ನು ಕಲಿತು ಪ್ರಗತಿ ಸಾಧಿಸಿಬೇಕು. ಮಕ್ಕಳು ಪತ್ರಿಕೆ ಓದುವ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು, ಪತ್ರಿಕೆ ಓದುವುದರಿಂದ ಮಕ್ಕಳಿಗೆ ಭಾಷಾ ಜ್ಞಾನ ಬೆಳೆಯುವ ಜತೆಗೆ ಮಕ್ಕಳ ಶೈಕ್ಷಣಿಕೆ ಪ್ರಗತಿಗೆ ಸಹಕಾರಿಯಾಗಿದೆ ಎಂದರು.
ರಾಮಕೃಷ್ಣ ಅವರು ಬೇಧ, ಭಾವ ಇಲ್ಲದೆ ಗ್ರಾಮದ ಅಭಿವೃದ್ಧಿ ಜೊತೆಗೆ ತಂದೆ- ತಾಯಿ ಹೆಸರಿನಲ್ಲಿ ಮಕ್ಕಳಿಗೆ ಕ್ರೀಡಾ ಸಮವಸ್ತ್ರಗಳನ್ನು ವಿತರಿಸಿ ಮಕ್ಕಳಿಗೆ ನೆರವಾಗುತ್ತಿದ್ದಾರೆ. ಮುಂದಿನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಪಂಚಾಯಿತಿ ಸಹಕಾರ ನೀಡಲಿದೆ ಎಂದರು.
ಮಕ್ಕಳು ಇಂತಹ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಾಲೆಯಲ್ಲಿ ರಾಮಕೃಷ್ಣ ಅವರ ತಂದೆ- ತಾಯಿ ಹೆಸರಿನಲ್ಲಿ ದತ್ತು ನಿಧಿ ಸ್ಥಾಪನೆ ಮಾಡಿ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗಬೇಕೆಂದು ಸಲಹೆ ನೀಡಿದರು.
ಗ್ರಾಪಂ ಸದಸ್ಯ ಎಚ್.ಜೆ.ರಾಮಕೃಷ್ಣ ಮಾತನಾಡಿ, ಸರಕಾರಿ ಶಾಲೆಯಲ್ಲಿ ಓದುವಂತಹ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರೆ ಮಾತ್ರ ಗ್ರಾಮಗಳ ಪ್ರಗತಿ ಸಾಧ್ಯ. ಸರಕಾರಿ ಶಾಲೆಯ ಮಕ್ಕಳಿಗೆ ಕೈಲಾದ ನೆರವು ನೀಡುತ್ತಿದ್ದೇವೆ. ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕು ಎಂದು ಕೋರಿದರು.
ಗ್ರಾಪಂ ಕಾರ್ಯದರ್ಶಿ ಜಯರಾಮು ಮಾತನಾಡಿದರು. ಇದೇ ವೇಳೆ ಶಾಲೆಯ 40 ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆ ಮಾಡಿದರು. ಶಾಲೆಯಲ್ಲಿ ಸೇವೆ ಸಲ್ಲಿಸಿ ಬೇರೆಡೆಗೆ ವರ್ಗಾವಣೆಗೊಂಡ ಶಿಕ್ಷಕ ಬೆಟ್ಟೇಗೌಡ ಅವರನ್ನು ಅಭಿನಂಧಿಸಲಾಯಿತು.
ಶಾಲೆ ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಸುಮಿತ್ರ, ಜವರೇಗೌಡ, ಚಿಕ್ಕತಾಯಮ್ಮ, ವದೆಸಮುದ್ರ ಸೋಮಶೇಖರ್, ಗೌಡಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಅಪ್ಪಣ್ಣ, ಮುಖ್ಯಶಿಕ್ಷಕ ಯೋಗ ನರಸಿಂಹೇಗೌಡ, ಸಹ ಶಿಕ್ಷಕರಾದ ಎಸ್.ಪುರುಷೊತ್ತಮ, ಮುತ್ತವ್ವ ಮಣ್ಣೂರ, ಸವಿತ, ಮುಖಂಡರಾದ ಗಣೇಶ, ಪ್ರಕಾಶ್, ಜವರೇಗೌಡ, ಪ್ರತಾಪ್ ,ಅಭಿಷೇಕ್, ಗಿರೀಶ್, ಉಮೇಶ್, ಚಿಕ್ಕಮಾಯಿ ಸೇರಿ ಎಲ್ಲಾ ಎಸ್‌ಡಿಎಂಸಿ ಸದಸ್ಯರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.