ಕನ್ನಡಪ್ರಭ ವಾರ್ತೆ ಹನೂರು
ಅರಣ್ಯ ಹಕ್ಕು ಕಾಯ್ದೆಯಡಿ ಸರ್ಕಾರದಿಂದ ಸಿಗುವ ಸೌವಲತ್ತು ಸದ್ಬಳಕೆ ಮಾಡಿಕೊಳ್ಳಲು ಸಮಿತಿ ಸದಸ್ಯರಿಗೆ ಶಿಕ್ಷಣ ಮತ್ತು ಸಂವಹನ ತರಬೇತಿ ಕಾರ್ಯಕ್ರಮವನ್ನು ಆರಂಭಿಸಲಾಗಿದೆ ಎಂದು ಸೋಲಿಗ ಯುವ ಸ್ವಯಂ ಸೇವಕರ ಸಂಪನ್ಮೂಲ ತಂಡದ ರಂಗೇಗೌಡ ತಿಳಿಸಿದರು.ತಾಲೂಕಿನ ಸೇಬಿನ ಕೊಬೆ ಹಾಗೂ ಕಗ್ಗಲಿಗುಂದಿ ಸೋಲಿಗರ ಹಾಡಿಯಲ್ಲಿ ಏರ್ಪಡಿಸಲಾಗಿದ್ದ ಅರಣ್ಯ ಹಕ್ಕುಕಾಯ್ದೆಯಡಿ ಶಾಸನಬದ್ಧ ಆದಿವಾಸಿ ಸಮಿತಿ ಸದಸ್ಯರಿಗೆ ಮಾಹಿತಿ ಮತ್ತು ಶಿಕ್ಷಣ ಸಂವಹನ ತರಬೇತಿ ಕಾರ್ಯಕ್ರಮದಲ್ಲಿ ಸೋಲಿಗ ಅಭಿವೃದ್ಧಿ ಸಂಘ ಹಾಗೂ ದೇವ ಸೋಲಿಗ ಕಲ್ಚರರ್ ಡೆವಲಪ್ಮೆಂಟ್ ಟ್ರಸ್ಟ್ ಮಲೆ ಮಹದೇಶ್ವರ ಬೆಟ್ಟ ಇವರ ಜಂಟಿ ಆಶ್ರಯದಲ್ಲಿ ನಡೆದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಅರಣ್ಯ ಹಕ್ಕು ಸಮಿತಿ ಕಾರ್ಯಾಚರಣೆ ಸಮಿತಿ ಸದಸ್ಯರ ಜವಾಬ್ದಾರಿ ಮತ್ತು ಕರ್ತವ್ಯಗಳ ನಿರ್ವಹಣೆ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ವಯಕ್ತಿಕ ಭೂಮಿ ಹಕ್ಕು ಹಾಗೂ ಅದರ ಉಪಯೋಗ ವಿಲ್ಲವರಿಯಾಗದಿರುವ ಅರ್ಜಿಗಳ ಸಮಸ್ಯೆಗಳ ಅದರ ಪರಿಹಾರ ಕ್ರಮಗಳ ಕುರಿತು ಅರಣ್ಯ ಸಂಪನ್ಮೂಲ ಸಂಗ್ರಹಣೆ ಅರಣ್ಯ ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆ ಕುರಿತು ಸಂವಹನ ಗಿರಿಜನರಿಗೆ ಆಯೋಜಿಸುವುದು ಇದನ್ನು ಸದ್ಬಳಕೆ ಮಾಡಿಕೊಂಡು ಗಿರಿಜನರು ಮುಂದೆ ಬರಬೇಕು ಎಂದರು.
ಕಾರ್ಯಕರ್ತ ಗಿರೀಶ್ ಕುಮಾರ್ ಮಾತನಾಡಿ, ಇದು ಬಿಆರ್‌ಟಿ ಹುಲಿ ಯೋಜನೆ ಮಲೆ ಮಹದೇಶ್ವರ ವನ್ಯಧಾಮ ಮತ್ತು ಕಾವೇರಿ ವನ್ಯಜೀವಿ ಧಾಮಗಳ ಬುಡಕಟ್ಟು ಪ್ರದೇಶದ ಅರವತ್ತು ಅರಣ್ಯ ಹಕ್ಕು ಸಮಿತಿಗಳ ಸದಸ್ಯರು ಮುಖಂಡರು ಸೇರಿದಂತೆ 1,500 ಮಂದಿ ಸದಸ್ಯರಿಗೆ ಮಾಹಿತಿ ಮತ್ತು ಸಂವಹನ ತರಬೇತಿ ಕಾರ್ಯಕ್ರಮವಾಗಿದ್ದು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ಆದಿವಾಸಿ ಬುಡಕಟ್ಟು ಸಮುದಾಯದ ಗಿರಿಜನರು ಭಾಗವಹಿಸಿದ್ದರು.