ವಿಬಿಜಿ ರಾಮ್ ಜಿ ಸದುಪಯೋಗ ಪಡೆದುಕೊಳ್ಳಿ: ಮಂಜುಳಾ ಹಕಾರಿ

KannadaprabhaNewsNetwork |  
Published : Aug 07, 2026, 02:30 AM IST
ಹರದಗಟ್ಟಿ ಗ್ರಾಮದಲ್ಲಿ ವಿಬಿ ಜಿ ರಾಮ್‌ ಜಿ ಕಾಮಗಾರಿಯಲ್ಲಿ ಬದು ನಿರ್ಮಾಣ ಕಾರ್ಯ ನಡೆಯಿತು. | Kannada Prabha

ಸಾರಾಂಶ

ವಿಬಿ ಜಿ ರಾಮ್ ಜಿ ಯೋಜನೆಯು ಗ್ರಾಮೀಣ ಜನತೆ ಬಡತನ ನಿವಾರಿಸುವ ಮಹತ್ತರ ಕಾರ್ಯವಾಗಿದೆ. ವಿಬಿ ಜಿ ರಾಮ್‌ ಜಿ ಯೋಜನೆಯ ದಿನಗೂಲಿ ಮೊತ್ತ ₹370ರಿಂದ ₹382ಕ್ಕೆ ಹೆಚ್ಚಳ ಮಾಡಿದ್ದಾರೆ. ಅಳತೆಗೆ ತಕ್ಕ ಕೆಲಸ ಮಾಡಿ ಪೂರ್ಣ ಕೂಲಿ ಪಡೆಯಬಹುದು.

ಲಕ್ಷ್ಮೇಶ್ವರ: ಸಮೀಪದ ಶಿಗ್ಲಿ, ದೊಡ್ಡೂರು, ಬಾಲೆಹೊಸೂರು, ಹುಲ್ಲೂರು, ಆಡರಕಟ್ಟಿ, ಆದರಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ವಿಬಿಜಿ ರಾಮ್ ಜಿ ಯೋಜನೆಯಡಿ ಸಮುದಾಯ ಕಾಮಗಾರಿಗಳನ್ನು ಗುರುವಾರ ತಾಪಂ ಇಒ ಮಂಜುಳಾ ಹಕಾರಿ ಅವರು ಭೇಟಿ ನೀಡಿ ಪರಿಶೀಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ವಿಬಿಜಿ ರಾಮ್ ಜಿ ಯೋಜನೆಯು ಗ್ರಾಮೀಣ ಜನತೆ ಬಡತನ ನಿವಾರಿಸುವ ಮಹತ್ತರ ಕಾರ್ಯವಾಗಿದೆ. ವಿಬಿ ಜಿ ರಾಮ್‌ ಜಿ ಯೋಜನೆಯ ದಿನಗೂಲಿ ಮೊತ್ತ ₹370ರಿಂದ ₹382ಕ್ಕೆ ಹೆಚ್ಚಳ ಮಾಡಿದ್ದಾರೆ. ಅಳತೆಗೆ ತಕ್ಕ ಕೆಲಸ ಮಾಡಿ ಪೂರ್ಣ ಕೂಲಿ ಪಡೆಯಬಹುದಾಗಿದೆ ಎಂದರು.

ಸಹಾಯಕ ನಿರ್ದೇಶಕ(ಗ್ರಾಮೀಣ ಉದ್ಯೋಗ) ಧರ್ಮರ ಕೃಷ್ಣಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಿಬಿ ಜಿ ರಾಮ್‌ ಜಿ ಯೋಜನೆಯಲ್ಲಿ ವಾರ್ಷಿಕ ಮಾನವ ದಿನಗಳು 100ರಿಂದ 125 ದಿನಗಳಿಗೆ ಹೆಚ್ಚಳ ಮಾಡಲಾಗಿದೆ. ವಾರ್ಷಿಕ ಒಂದು ಗ್ರಾಮೀಣ್ ರೋಜ್‌ಗಾರ್ ಗ್ಯಾರಂಟಿ ಕಾರ್ಡಗೆ ₹47,750 ಗಳಿಸಲು ಅವಕಾಶವಿದೆ. 60 ದಿನಗಳು ಕೃಷಿ ಚಟುವಟಿಕೆಗೆ ಯೋಜನೆಯ ಕೂಲಿ ಕೆಲಸದಿಂದ ವಿರಾಮ, ಎರಡು ಬಾರಿ ಎನ್‌ಎಂಎಂಎಸ್ ಹಾಜರಾತಿ ಕಡ್ಡಾಯವಾಗಿದ್ದು, ಕೂಲಿ ಕಾರ್ಮಿಕರು ನೀಡಬೇಕು. ನೂತನ ಯೋಜನೆಯಡಿ 318 ಕಾಮಗಾರಿಗಳಿಗೆ ಅವಕಾಶ ಕಲ್ಪಿಸಿದ್ದು, ಗ್ರಾಮ ಪಂಚಾಯಿತಿಯಿಂದ ಅರ್ಜಿ ನಮೂನೆ 6ರಲ್ಲಿ ಕೂಲಿ ಬೇಡಿಕೆ ಸಲ್ಲಿಸಿ ಕೆಲಸ ಪಡೆಯಬಹುದು ಎಂದರು.

ಪಿಡಿಒ ರವಿ ಕೊರಕನವರ, ರಿಯಾಜ್ ಖತೀಬ, ಮಂಜುನಾಥ ಮಾದರ, ಗೋವಿಂದ ರೆಡ್ಡಿ, ಕೆ.ಸಿ. ಕಡೂರು, ಕಾರ್ಯದರ್ಶಿ ಕವಿತಾ ಅಣ್ಣಿಗೇರಿ, ವಡಕನಗೌಡ್ರು, ತಾಂತ್ರಿಕ ಸಂಯೋಜಕ ಹರೀಶ ಸೊಬರದ, ಟಿಐಇಸಿ ಮಂಜುನಾಥ ಸ್ವಾಮಿ ಎಚ್.ಎಂ., ತಾಂತ್ರಿಕ ಸಹಾಯಕ ಶ್ರೀನಿವಾಸ, ಫಕ್ಕೀರೇಶ ನಿಟ್ಟಾಲಿ, ಶ್ರೀಧರ ಕುಲಕರ್ಣಿ, ಪ್ರವೀಣ ಕರಕನಗೌಡ್ರು, ಬಿಎಫ್‌ಟಿ, ಕಾಸಿಂಸಾಬ್ ನದಾಫ್, ಸತೀಶ, ಅರಿಶಿಣದ, ತಿರುಕಪ್ಪ ಬಾಲೆಹೊಸೂರ, ಶಿಲ್ಪ ಲಮಾಣಿ, ಜಿಕೆಎಂ ಮಂಜುಳಾ ಕಟ್ಟಿಮನಿ, ಟಿಆರ್‌ಎಂ ಗೌರಮ್ಮ ಲಮಾಣಿ, ಪರಮೇಶ ಲಮಾಣಿ, ವಿನೋದ ಲಮಾಣಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.ಉಚಿತ ನೇತ್ರ ತಪಾಸಣಾ ಶಿಬಿರ ಇಂದು

ಲಕ್ಷ್ಮೇಶ್ವರ: ಪಟ್ಟಣದ ಡಾ. ಪಿ.ಡಿ. ತೋಟದ ನರ್ಸಿಂಗ್ ಹೋಮ್‌ನಲ್ಲಿ ಆ. 7ರಂದು ಬೆಳಗ್ಗೆ 10ರಿಂದ 2 ಗಂಟೆಯವರೆಗೆ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಗುರು ಮಹಿಪತಿರಾಜ ಸಂಸ್ಥೆ ಹುಬ್ಬಳ್ಳಿ, ಡಾ. ಎಂ.ಎಂ. ಜೋಶಿ ನೇತ್ರತಜ್ಞ ಸಂಸ್ಥೆ, ಕರ್ನಾಟಕ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘ, ತಾಲೂಕು ವೈದ್ಯರ ಸಂಘ, ಜಿಲ್ಲಾ ಅಂಧತ್ವ ನಿವಾರಣಾ ಕಾರ್ಯಕ್ರಮ ಇವುಗಳ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ನೇತ್ರತಜ್ಞ ವೈದ್ಯರು ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಭಾಗವಹಿಸುವರು ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆ ನಷ್ಟದ ನಿಖರ ಸಮೀಕ್ಷೆ ಬಳಿಕ ಬರ ಘೋಷಣೆ: ತಂಗಡಗಿ
ಮಳಿಗೆ ಖಾಲಿ ಮಾಡಲು 7 ದಿನ ಗಡುವು