ಕನ್ನಡಪ್ರಭವಾರ್ತೆ ಚಿತ್ರದುರ್ಗ
ನವೆಂಬರ್ ತಿಂಗಳಲ್ಲಿ ನಡೆಯುವ ಒನಕೆ ಓಬವ್ವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ಸಂಬಂಧ ಭಾನುವಾರ ಪ್ರವಾಸಿ ಮಂದಿರದಲ್ಲಿ ಛಲವಾದಿ ಜನಾಂಗದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಯಂತಿಗೆ ಸಂಬಂಧಿಸಿದಂತೆ ನ.3ರಂದು ಮತ್ತೊಮ್ಮೆ ನಡೆಯುವ ಪೂವಭಾವಿ ಸಭೆಗೆ ಛಲವಾದಿ ಸಮುದಾಯದವರು ಆಗಮಿಸಿ ಸೂಕ್ತ ಸಲಹೆಗಳನ್ನು ನೀಡುವಂತೆ ಮನವಿ ಮಾಡಿದರು.
ಡಾ.ಪಿ.ವಿ.ಶ್ರೀಧರಮೂರ್ತಿ ಮಾತನಾಡಿ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸೋಣ. ಜನಾಂಗದ ಎಲ್ಲರ ಸಹಕಾರ ಅತಿ ಮುಖ್ಯ ಎಂದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಮಾತನಾಡಿ, ಛಲವಾದಿ ಸಮುದಾಯದವರಲ್ಲಿ ಜಾಗೃತಿ ಮೂಡಿಸಬೇಕಾಗಿ ರುವುದರಿಂದ ಒನಕೆ ಓಬವ್ವಳ ಜಯಂತಿ ಮೂಲಕವಾದರೂ ಎಲ್ಲರೂ ಒಂದೆಡೆ ಸೇರೋಣ ಎಂದರು.
ಶಾರದಾ ಬ್ರಾಸ್‌ಬ್ಯಾಂಡ್‌ನ ಗುರುಮೂರ್ತಿ ಮಾತನಾಡಿ ಜನಾಂಗದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಜಯಂತಿಯಲ್ಲಿ ಪ್ರೋತ್ಸಾಹಿಸಿದರೆ ಅದಕ್ಕೆ ಬೇಕಾದ ಎಲ್ಲಾ ರೀತಿಯ ನೆರವು ನೀಡುತ್ತೇನೆ. ಹೊಳಲ್ಕೆರೆ ರಸ್ತೆಯಲ್ಲಿರುವ ಗೌರಸಮುದ್ರ ಮಾರಮ್ಮನ ದೇವಸ್ಥಾನದ ಸಮೀಪದಿಂದ ಮೆರವಣಿಗೆ ಹೊರಡೋಣ ಎಂದು ಸಲಹೆ ನೀಡಿದರು.
ಎಸ್.ಎನ್.ರವಿಕುಮಾರ್, ಶಿಕ್ಷಣ ಇಲಾಖೆಯ ನಾಗರಾಜ್, ಎಚ್. ಅಣ್ಣಪ್ಪಸ್ವಾಮಿ, ದಯಾನಂದ್, ಚನ್ನಬಸಪ್ಪ ಮುಸ್ಟೂರು, ಮಂಜಣ್ಣ, ಜಯರಾಂ ಕೆ. ಶಶಾಂಕ್, ರಂಗಸ್ವಾಮಿ ಚಿಕ್ಕಪುರ, ರಾಮಲಿಂಗಪ್ಪ, ಪರಮೇಶ್ ಪೂಜಾರ್, ಮಂಜುನಾಥ್, ಜಯಣ್ಣ, ನಾಗರಾಜ್ ಪೈಲೆಟ್, ಉಮಾಶಂಕರ್ ಸೇರಿದಂತೆ ಛಲವಾದಿ ವಂಶಸ್ಥರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.