ಸಾಗರ ರಕ್ಷಣೆ ಆದ್ಯತೆ ಆಗಲಿ

KannadaprabhaNewsNetwork |  
Published : May 26, 2024, 01:35 AM ISTUpdated : May 26, 2024, 01:36 AM IST
25ಡಿಡಬ್ಲೂಡಿ1ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಅಲೈಡ ಹೆಲ್ತ್ ಸೈನ್ಸಸ್ ವಿಭಾಗದಿಂದ ಪರ್ವ ಹೆಸರಿನಲ್ಲಿ ಸಮುದ್ರ – ನಮ್ಮ ಜೀವನದ ಸೌಂದರ್ಯ ಎಂಬ ಧ್ಯೇಯೆಯೊಂದಿಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರವನ್ನು ಡಾ.ನಿರಂಜನ ಕುಮಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ಭೂ ಮಂಡಲದಲ್ಲಿ ಶೇ.70ರಷ್ಟು ನೀರು ಹೊಂದಿದ್ದು, ನಾವು ಸಾಗರದ ಸಂರಕ್ಷಣೆ ನಮ್ಮ ಆದ್ಯತೆಯಾಗಿರಬೇಕು. ಸಾಗರದಲ್ಲಿನ ನೀರಿನ ಮಟ್ಟವು ಹವಾಮಾನ ಬದಲಾವಣೆ ಮತ್ತು ಅದರ ಪರಿಣಾಮಗಳಿಗೆ ಕಾರಣವಾಗುತ್ತದೆ

ಧಾರವಾಡ:

ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಅಲೈಡ್‌ ಹೆಲ್ತ್ ಸೈನ್ಸಸ್ ವಿಭಾಗದಿಂದ ಪರ್ವ ಹೆಸರಿನಲ್ಲಿ ಸಮುದ್ರ–ನಮ್ಮ ಜೀವನದ ಸೌಂದರ್ಯ ಎಂಬ ಧ್ಯೇಯೆಯೊಂದಿಗೆ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನ್ ಕುಮಾರ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಉತ್ತಮ ಕೌಶಲ್ಯತೆ ಮೈಗೂಡಿಸಿಕೊಳ್ಳಬೇಕು. ಪ್ರಕೃತಿ ಸಂರಕ್ಷಿಸುತ್ತ ಮುನ್ನಡೆಯಬೇಕು. ಸಾಗರದಷ್ಟೂ ಜ್ಞಾನವನ್ನು ವೃದ್ಧಿಸಿಕೊಂಡು, ಉತ್ಸಾಹ ಮತ್ತು ಸೃಜನಶೀಲತೆಯ ಗುಣ ಹೊಂದಬೇಕು ಎಂದರು.

ಆರೋಗ್ಯ ಕಾರ್ಯಕರ್ತರಿಗೆ ಉತ್ತಮ ಬೇಡಿಕೆ ಇದ್ದು, ಅವರು ಭವಿಷ್ಯದ ಆರೋಗ್ಯ ರಕ್ಷಕರಾಗುತ್ತಾರೆ ಎಂದ ಅವರು, ಭೂ ಮಂಡಲದಲ್ಲಿ ಶೇ.70ರಷ್ಟು ನೀರು ಹೊಂದಿದ್ದು, ನಾವು ಸಾಗರದ ಸಂರಕ್ಷಣೆ ನಮ್ಮ ಆದ್ಯತೆಯಾಗಿರಬೇಕು. ಸಾಗರದಲ್ಲಿನ ನೀರಿನ ಮಟ್ಟವು ಹವಾಮಾನ ಬದಲಾವಣೆ ಮತ್ತು ಅದರ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.

ಪದ್ಮಲತಾ ನಿರಂಜನ್, ಸಾಕೇತ್ ಶೆಟ್ಟಿ, ಡಾ. ಚಿದೇಂದ್ರ ಶೆಟ್ಟರ ಇದ್ದರು. ಅಲೈಡ್‌ ಹೆಲ್ತ್ ಸೈನ್ಸಸ್‌ನ ಸಂಯೋಜಕರಾದ ಡಾ. ವಿದ್ಯಾ ಪಾಟೀಲ ಪರ್ವ ಸಾಂಸ್ಕೃತಿಕ ಕಾರ್ಯಕ್ರಮದ ಅವಲೋಕನ ಮಾಡಿದರು. ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ ಮಾತನಾಡಿದರು. ಶೋಧನ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಮೀನಾಜ್ ಮತ್ತು ತಾಂಜೀಯಾ ನಿರೂಪಿಸಿದರು. ಸೌಮ್ಯ ವಂದನಾರ್ಪಣೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ