ಆ್ಯಂಕರ್‌... ವಿದ್ಯಾರ್ಥಿಗಳಿಗೆ ಸೇವಾದಳ ಶಿಕ್ಷಣ ಕಡ್ಡಾಯವಾಗಲಿ

KannadaprabhaNewsNetwork |  
Published : May 09, 2026, 02:00 AM IST
೭ಕೆಎಲ್‌ಆರ್-೬ಕೋಲಾರದ ಖಾದ್ರಿಪುರ ಶ್ರೀ ನಲ್ಲೂರಮ್ಮ ದೇವಿ ಮಕ್ಕಳ ಆಶ್ರಮದಲ್ಲಿ ಗುರುವಾರ ಭಾರತ ಸೇವಾದಳ ಸಂಸ್ಥಾಪಕ ನಾ.ಸು.ಹರ್ಡೀಕರ್ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಸ್ವಾತಂತ್ರ್ಯ ಚಳವಳಿಗೆ ಯುವ ಸಮೂಹವನ್ನು ಸಂಘಟಿಸಲು ಕರ್ನಾಟಕ ನಾ.ಸು. ಹರ್ಡೀಕರ್ ಆರಂಭಿಸಿದ ಭಾರತ ಸೇವಾದಳ ತರಬೇತಿ ಶಿಕ್ಷಣವು ಪ್ರಸ್ತುತ ಪರಿಸ್ಥಿತಿಯಲ್ಲಿಯೂ ಪ್ರತಿ ವಿದ್ಯಾರ್ಥಿಗೂ ಅಗತ್ಯವಾಗಿದ್ದು, ಸೇವಾದಳ ಶಿಕ್ಷಣವನ್ನು ಪ್ರತಿ ಶಾಲೆಯಲ್ಲಿಯೂ ಕಡ್ಡಾಯಗೊಳಿಸಬೇಕು

ಕನ್ನಡಪ್ರಭ ವಾರ್ತೆ ಕೋಲಾರಸ್ವಾತಂತ್ರ್ಯ ಚಳವಳಿಗೆ ಯುವ ಸಮೂಹವನ್ನು ಸಂಘಟಿಸಲು ಕರ್ನಾಟಕ ನಾ.ಸು. ಹರ್ಡೀಕರ್ ಆರಂಭಿಸಿದ ಭಾರತ ಸೇವಾದಳ ತರಬೇತಿ ಶಿಕ್ಷಣವು ಪ್ರಸ್ತುತ ಪರಿಸ್ಥಿತಿಯಲ್ಲಿಯೂ ಪ್ರತಿ ವಿದ್ಯಾರ್ಥಿಗೂ ಅಗತ್ಯವಾಗಿದ್ದು, ಸೇವಾದಳ ಶಿಕ್ಷಣವನ್ನು ಪ್ರತಿ ಶಾಲೆಯಲ್ಲಿಯೂ ಕಡ್ಡಾಯಗೊಳಿಸಬೇಕುಕೆಂದು ಭಾರತ ಸೇವಾದಳ ಗೌರವಾಧ್ಯಕ್ಷ ಸಿ.ಎಂ.ಆರ್. ಶ್ರೀನಾಥ್ ಹೇಳಿದರು.ನಗರದ ಖಾದ್ರಿಪುರದಲ್ಲಿರುವ ಶ್ರೀನಲ್ಲೂರಮ್ಮ ದೇವಿ ಮಕ್ಕಳ ಆಶ್ರಮ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಲ್ಲಿ ಗುರುವಾರ ಆಯೋಜಿಸಿದ್ದ ನಾ.ಸು. ಹರ್ಡೀಕರ್ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಕ್ಕಳನ್ನುದ್ದೇಶಿಸಿ ಮಾತನಾಡಿದರು.ಆರಂಭದಲ್ಲಿ ಹಿಂದೂಸ್ತಾನಿ ಸೇವಾದಳವಾಗಿದ್ದ ಭಾರತ ಸೇವಾದಳದ ಮೂಲಕ ಯುವ ಸಮೂಹವು ದೇಶ ಪ್ರೇಮ, ದೇಶ ಭಕ್ತಿ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಕೆ. ಶಿಸ್ತು ದೈಹಿಕ ಸದೃಢತೆಯನ್ನು ಪಡೆದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧೈರ್ಯದಿಂದ ಪಾಲ್ಗೊಂಡು ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದರು. ಈಗಲೂ ಮಕ್ಕಳಲ್ಲಿ ದೇಶ ಪ್ರೇಮ, ಸೌಹಾರ್ದತೆ ಮತ್ತು ಸೇವಾ ಮನೋಭಾವನೆಯನ್ನು ಮೂಡಿಸಲು ಸೇವಾದಳ ಶಿಕ್ಷಣ ಅಗತ್ಯವಾಗಿದೆ ಎಂದರು.ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿ, ಬಾಲ್ಯದಲ್ಲಿಯೇ ತಂದೆ ತಾಯಿ ಕಳೆದುಕೊಂಡರೂ ಎದೆಗುಂದದೆ ಅಪ್ರತಿಮ ರಾಷ್ಟ್ರಪ್ರೇಮಿಯಾಗಿ, ವೈದ್ಯರಾಗಿ, ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಂಡು, ಗಾಂಧಿ ತತ್ವಗಳಡಿ ಭಾರತ ಸೇವಾದಳವನ್ನು ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟಗಾರರಾಗಿ ಜನಿಸಿದ ೧೩೭ ವರ್ಷಗಳ ನಂತರವೂ ಸ್ಮರಣೀಯರಾಗಿರುವ ನಾ.ಸು.ಹರ್ಡೀಕರ್ ಅವರ ಪ್ರೇರಣೆಯಲ್ಲಿ ಆಶ್ರಮದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕೆಂದು ಆಶಿಸಿದರು.ಕಾರ್ಯಕ್ರಮದಲ್ಲಿ ಮಾಲೂರು ತಾಲೂಕು ಭಾರತ ಸೇವಾದಳ ಅಧ್ಯಕ್ಷ ಬಹದೂರ್ ಸಾಬ್, ಹಿರಿಯ ಸೇವಾದಳ ಮುಖಂಡ ವಿ.ಪಿ. ಸೋಮಶೇಖರ್, ಸೇವಾದಳ ಪದಾಧಿಕಾರಿಗಳಾದ ಕೆ.ಜಯದೇವ್, ಮುನಿವೆಂಕಟಯಾದವ್, ರೆಡ್ಡಿ, ಜಗದೀಶ್, ಡೊಮಿನಿಕ್, ರಾಮು, ನ್ಯೂಸ್ ಚಂದ್ರು, ರಮ್ಯ ಇದ್ದರು.ಶ್ರೀ ನಲ್ಲೂರಮ್ಮ ಮಕ್ಕಳ ಆಶ್ರಮದ ಮುಖ್ಯಸ್ಥ ಭುವನೇಶ್ವರ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಭಾರತ ಸೇವಾದಳ ಸಂಘಟಕ ಎಂ.ಬಿ. ದಾನೇಶ್ ಕಾರ್ಯಕ್ರಮ ನಿರೂಪಿಸಿದರು.

೭ಕೆಎಲ್‌ಆರ್-೬

ಕೋಲಾರದ ಖಾದ್ರಿಪುರ ಶ್ರೀ ನಲ್ಲೂರಮ್ಮ ದೇವಿ ಮಕ್ಕಳ ಆಶ್ರಮದಲ್ಲಿ ಗುರುವಾರ ಭಾರತ ಸೇವಾದಳ ಸಂಸ್ಥಾಪಕ ನಾ.ಸು.ಹರ್ಡೀಕರ್ ಜಯಂತಿ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಹಿತಿ ನೀಡದ 18 ಅಧಿಕಾರಿಗಳಿಗೆ ದಂಡ: ಬಿ. ವೆಂಕಟಸಿಂಗ್
ಯಾವ ಪುರುಷಾರ್ಥಕ್ಕೆ ಯಡಿಯೂರಪ್ಪ ಅಭಿಮಾನೋತ್ಸವ?