ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇಲ್ಲಿನ ಮಾರುತಿ ನಗರ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ಗೋಪಾಲಪುರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಎ ಅನ್ನಾಂಗ ದ್ರಾವಣ 1 ರಿಂದ 5 ವರ್ಷದ ಒಳಗಿನ ಮಕ್ಕಳಿಗೆ ಕೊಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಹದಲ್ಲಿ ನಾನಾ ಜೈವಿಕ ಪ್ರಕ್ರಿಯೆಯಲ್ಲಿ ಉಪಯೋಗಿಸಲ್ಪಡುವ ರೆಟಿನೋಲ್ ಅಥವಾ ರೆಟಿನೋಯಿಕ್ ಆಸಿಡ್ ಮತ್ತು ಇತರ ಪರಸ್ಪರ ಹೋಲಿಕೆಯೊಳ್ಳ ರಾಸಾಯನಿಕ ಪದಾರ್ಥಗಳ ಸಮೂಹವೇ ವಿಟಮಿನ್ ಎ ಅನ್ನಾಂಗವಾಗಿದೆ. ಇದು ದ್ರಾವಣ ರೂಪದಲ್ಲಿರುತ್ತದೆ. ವಿಟಮಿನ್ ಎ ಕೊರತೆ ವಿಟಮಿನ್ ಎಯ ಆಹಾರ ಸೇವನೆ ಮಾಡದಿರುವುದರಿಂದ ಉಂಟಾಗುತ್ತದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ರಾತ್ರಿ ಕುರುಡುತನವು ವಿಟಮಿನ್ ಎ ಕೊರತೆಯ ಮೊದಲ ಚಿಹ್ನೆಗಳಲ್ಲಿ ಒಂದಾಗಿದೆ.ಅದರ ತೀವ್ರ ಸ್ವರೂಪಗಳಲ್ಲಿ, ವಿಟಮಿನ್ ಎ ಕೊರತೆಯು ಕಾರ್ನಿಯಾವನ್ನು ತುಂಬಾ ಒಣಗಿಸುವ ಮೂಲಕ ಕುರುಡುತನಕ್ಕೆ ಕೊಡುಗೆ ನೀಡುತ್ತದೆ. ಹೀಗಾಗಿ ರೆಟಿನಾ ಮತ್ತು ಕಾರ್ನಿಯಾವನ್ನು ಹಾನಿಗೊಳಿಸುತ್ತದೆ ಎಂದರು.