ಸ್ವಯಂ ಗಣತಿ ಮಾಡಿಕೊಂಡು ಗಣತಿ ಯಶಸ್ವಿಗೊಳಿಸಿ

KannadaprabhaNewsNetwork |  
Published : Apr 11, 2026, 04:00 AM IST
ಲೋಕಾಪುರ | Kannada Prabha

ಸಾರಾಂಶ

ಐತಿಹಾಸಿಕವಾದ ಮೊದಲ ಡಿಜಿಟಲ್ ಜನಗಣತಿ ಪ್ರಕ್ರಿಯೆ ಆರಂಭವಾಗಿದ್ದು, ೨೦೨೭ರ ಜನಗಣತಿಯ ಈ ಮಹತ್ವದ ಹಂತದಲ್ಲಿ ಸಾರ್ವಜನಿಕರಿಗೆ ಸ್ವಯಂ ಗಣತಿ ಮಾಡಿಕೊಳ್ಳುವ ವಿಶೇಷ ಅವಕಾಶ ಕಲ್ಪಿಸಲಾಗಿದೆ. ನಾಗರಿಕರು ತಾವೇ ನೇರವಾಗಿ ಆನ್‌ಲೈನ್‌ ಮೂಲಕ ತಮ್ಮ ಕುಟುಂಬದ ವಿವರಗಳನ್ನು ದಾಖಲಿಸಬಹುದಾಗಿದೆ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಾಬಣ್ಣ ಪೂಜೇರ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಐತಿಹಾಸಿಕವಾದ ಮೊದಲ ಡಿಜಿಟಲ್ ಜನಗಣತಿ ಪ್ರಕ್ರಿಯೆ ಆರಂಭವಾಗಿದ್ದು, ೨೦೨೭ರ ಜನಗಣತಿಯ ಈ ಮಹತ್ವದ ಹಂತದಲ್ಲಿ ಸಾರ್ವಜನಿಕರಿಗೆ ಸ್ವಯಂ ಗಣತಿ ಮಾಡಿಕೊಳ್ಳುವ ವಿಶೇಷ ಅವಕಾಶ ಕಲ್ಪಿಸಲಾಗಿದೆ. ನಾಗರಿಕರು ತಾವೇ ನೇರವಾಗಿ ಆನ್‌ಲೈನ್‌ ಮೂಲಕ ತಮ್ಮ ಕುಟುಂಬದ ವಿವರಗಳನ್ನು ದಾಖಲಿಸಬಹುದಾಗಿದೆ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಾಬಣ್ಣ ಪೂಜೇರ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ ಸ್ವಯಂ ಗಣತಿಯ ಜಾಗೃತಿ ಬೈಕ್ ರ‍್ಯಾಲಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಮೊಬೈಲ್‌ ಇಲ್ಲವೇ ಲ್ಯಾಪ್‌ಟಾಪ್‌ನಲ್ಲಿ ಪೋರ್ಟಲ್‌ಗೆ ಲಾಗಿನ ಆಗಿ ಆದಲ್ಲಿ ಕಾಣಿಸುವ ೩೩ ಸರಳ ಪ್ರಶ್ನೆಗಳಿಗೆ ಸರಿಯಾದ ಅಪ್‌ಡೇಟ್ ಮಾಡಿದ ನಂತರ ಎಸ್‌ಇ ಐಡಿ ಸೃಜನೆಯಾಗುತ್ತಿದ್ದಂತೆಯೇ ಅದನ್ನು ಸೇವ್‌ ಮಾಡಬೇಕು. ಬಳಿಕ ಗಣತಿದಾರರು ಮನೆಗೆ ಬಂದಾಗ ಅವರಿಗೆ ನೀಡಬೇಕು. ಅಲ್ಲದೇ, ಸ್ವಯಂ ಗಣತಿ ಪೂರ್ಣ ಪ್ರಮಾಣದ ಗಣತಿಯಾಗಿರುವುದಿಲ್ಲ. ಎಸ್‌ಐ ಐಡಿಯನ್ನು ಗಣತಿದಾರರಿಗೆ ನೀಡದಾಗ ಮಾತ್ರ ಮನೆ ಸಂಖ್ಯೆ ಸೇರಿ ಹೆಚ್ಚುವರಿ ವಿವರ ಸೇರಿಸಿ, ಗಣತಿದಾರರು ಅಪ್‌ಲೋಡ್ ಮಾಡಲಿದ್ದಾರೆ ಎಂದರು. ಕಂದಾಯ ನಿರೀಕ್ಷಕ ಆಕಾಶ ರಾಯಣ್ಣವರ ಮಾತನಾಡಿ, ೨ ಹಂತಗಳಲ್ಲಿ ನಡೆಯುವ ಜನಗೀತಯ ಭಾಗವಾಗಿ ಮೊದಲ ಹಂತವಾದ ಸ್ವಯಂ ಗಣತಿ ಹಾಗೂ ಮನೆಗಳ ಪಟ್ಟಿ ಮತ್ತು ಮನೆಗಳ ಗಣತಿ ಕಾರ್ಯವನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಮೊದಲ ಹಂತದ ಸ್ವಯಂ ಗಣತಿ ಕಾರ್ಯವನ್ನು ಏ.೧ ರಿಂದ ಏ.೧೫ ರವರೆಗೆ ಹಾಗೂ ಮನೆಗಳ ಪಟ್ಟಿ ಮತ್ತು ಮನೆಗಳ ಗಣತಿ ಕಾರ್ಯವನ್ನು ಏ.೧೬ ರಿಂದ ಮೇ ೧೫ ರವರೆಗೆ ನಿಗದಿಪಡಿಸಲಾಗಿದೆ. ಇದಕ್ಕಾಗಿ ಮೊಬೈಲ್ ಆ್ಯಪ್ ಮತ್ತು ವೆಬ್ ಪೋರ್ಟಲ್ ಮೂಲಕ ಗಣತಿ ಕಾರ್ಯಕೈಗೊಳ್ಳಲಾಗುತ್ತದೆ ಎಂದರು. ಬಸವೇಶ್ವರ ವೃತ್ತದಿಂದ ಪ್ರಾರಂಭಗೊಂಡ ಜನಗಣತಿ ಜಾಥಾ ಮೇನ ಬಜಾರ, ಹೂಗಾರ ಗಲ್ಲಿ, ಬ್ರಾಹ್ಮಣ ಗಲ್ಲಿ, ಬಡಿಗೇರ ಓಣಿ, ದೇಸಾಯಿ ವಾಡೆ, ಜನತಾ ಪ್ಲಾಟ, ಶಿವಾಜಿ ವೃತ್ತ, ಜ್ಞಾನೇಶ್ವರ ಮಠ, ಸುಭಾಸನಗರ, ವೆಂಕಟಾಪುರ, ಜಾಲಿಕಟ್ಟಿ ವಿವಿಧಡೆ ಸಾರ್ವಜನಿಕರಿಗೆ ಜನಗಣತಿ ಜಾಥಾ ಬೈಕ್‌ ರ‍್ಯಾಲಿ ಹಮ್ಮಿಕೊಂಡಿದ್ದರು. ಪ್ರಥಮ ದರ್ಜೆ ಸಹಾಯಕ ಸಂತೋಷ ಸಿರಿನಾಳ, ಪಪಂ ಆರೋಗ್ಯ ನಿರೀಕ್ಷಕಿ ಭಾಗ್ಯಾಶ್ರೀ ಪಾಟೀಲ, ಸಿಆರ್‌ಪಿ ಕೃಷ್ಣಾ ಮಾಳೇದ, ರಾಘವೇಂದ್ರ ಮುರಗೋಡ, ಕಾಶಲಿಂಗ ರೊಡ್ಡಪ್ಪವನರ, ವಿಠ್ಠಲ ಗಸ್ತಿ, ಶಂಕರಗೌಡ ಪಾಟೀಲ, ಹೃತ್ತಿಕ ಮೋಮಿನ್, ಶಬ್ಬೀರ ಕರ್ನಾಚಿ, ಅಶೋಕ ಕಾಳಮ್ಮನವರ, ಗ್ಯಾನು ರೊಡ್ಡಪ್ಪನವರ, ಕಾವೇರಿ ಪಾಟೀಲ, ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗ ಜಾಥಾದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ತರ
ತ್ಯಾಜ್ಯ ವಿಲೇವಾರಿ ಘಟಕ ತೆರವಿಗೆ ಆಗ್ರಹ