ನೀರಿನೊಂದಿಗೆ ಅಂಕವನ್ನೂ ತುಂಬಿದ ವಿನಯ!

KannadaprabhaNewsNetwork |  
Published : Apr 11, 2026, 04:00 AM IST
ನೀರಿನೊಂದಿಗೆ `ವಿನಯ’ವಾಗಿ ಅಂಕ ತುಂಬಿದ ವಿದ್ಯಾರ್ಥಿ | Kannada Prabha

ಸಾರಾಂಶ

ಕಿತ್ತು ತಿನ್ನುವ ಬಡತನದ ಮಧ್ಯೆಯೂ ದಿನಂಪ್ರತಿ ಮನೆಯೊಬ್ಬರಲ್ಲಿ ದಿನನಿತ್ಯ ಬರೋಬ್ಬರಿ 100 ಕೊಡಗಳಷ್ಟು ನೀರು ಎತ್ತಿ ಹಾಕಿ ತುಂಬುವುದರೊಂದಿಗೆ ಪಿಯು ದ್ವಿತೀಯ ಪರೀಕ್ಷೆ ಬರೆದು 578 ಅಂಕಗಳನ್ನು ಪಡೆದು ವಿಶೇಷ ಸಾಧನೆ ಮಾಡುವ ಮೂಲಕ ಎಲ್ಲ ಮೆಚ್ಚುಗೆಗೆ ಪಾತ್ರರಾಗಿದ್ದಾನೆ ಈ ವಿದ್ಯಾರ್ಥಿ.

ಶಿವಾನಂದ ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕಿತ್ತು ತಿನ್ನುವ ಬಡತನದ ಮಧ್ಯೆಯೂ ದಿನಂಪ್ರತಿ ಮನೆಯೊಬ್ಬರಲ್ಲಿ ದಿನನಿತ್ಯ ಬರೋಬ್ಬರಿ 100 ಕೊಡಗಳಷ್ಟು ನೀರು ಎತ್ತಿ ಹಾಕಿ ತುಂಬುವುದರೊಂದಿಗೆ ಪಿಯು ದ್ವಿತೀಯ ಪರೀಕ್ಷೆ ಬರೆದು 578 ಅಂಕಗಳನ್ನು ಪಡೆದು ವಿಶೇಷ ಸಾಧನೆ ಮಾಡುವ ಮೂಲಕ ಎಲ್ಲ ಮೆಚ್ಚುಗೆಗೆ ಪಾತ್ರರಾಗಿದ್ದಾನೆ ಈ ವಿದ್ಯಾರ್ಥಿ.

ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಸರ್ಕಾರಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿರುವ ಇಲ್ಲಿನ ಅಶೋಕ ಕಾಲೋನಿಯ ವಿನಯ ಆಲಕನೂರ ಈ ಸಾಧನೆ ಮಾಡಿದ ವಿದ್ಯಾರ್ಥಿ. ತಂದೆಗೆ ಕೆಲಸವಿಲ್ಲ, ತಾಯಿ ಹಪ್ಪಳ ತಯಾರಿಕೆಯಲ್ಲಿ ಕೆಲಸ ಮಾಡುತ್ತಾಳೆ. ಇಷ್ಟಕ್ಕೇ ತುತ್ತಿನ ಚೀಲ ತುಂಬದ ಕಾರಣ ವಿದ್ಯಾರ್ಥಿ ವಿನಯ ಕೂಡ ದಿನಂಪ್ರತಿ ಖಾಸಗಿ ಮನೆಯೊಂದಕ್ಕೆ ನೂರು ಕೊಡಗಳಷ್ಟು ನೀರು ಎತ್ತಿ ಹಾಕುವದರೊಂದಿಗೆ ಪ್ರತಿದಿನ ₹100 ಗಳಷ್ಟು ಆದಾಯದೊಂದಿಗೆ ಬದುಕಿನ ಬಂಡಿ ಜೊತೆಗೆ ಶೇ.97ರಷ್ಟು ಪ್ರತಿಶತ ಅಂಕ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ವಿನಯ ಕನ್ನಡದಲ್ಲಿ ೧೦೦, ಇಂಗ್ಲಿಷ್‌-೮೩, ಇತಿಹಾಸ-೯೯, ಅರ್ಥಶಾಸ್ತ್ರ-೯೮, ವ್ಯವಹಾರ ಅಧ್ಯಯನ-೯೯, ಲೆಕ್ಕಶಾಸ್ತ್ರ-೯೯ ಅಂಕ ಪಡೆದಿದ್ದಾನೆ. ಕುಟುಂಬ ನಿರ್ವಹಣೆ ಒಂದು ಸವಾಲಾಗಿರುವ ವಿನಯನ ಮುಂದಿನ ವ್ಯಾಸಂಗಕ್ಕೆ ಆರ್ಥಿಕ ಸ್ಥಿತಿ ಅಡ್ಡಿಯಾಗುತ್ತಿದೆ. ಈತನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲಿಚ್ಛಿಸುವವರು ಮೊ.7083991358 ನಂಬರನ್ನು ಸಂಪರ್ಕಿಸಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ತರ
ತ್ಯಾಜ್ಯ ವಿಲೇವಾರಿ ಘಟಕ ತೆರವಿಗೆ ಆಗ್ರಹ