
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ ಪ್ರಯುಕ್ತ ನಡೆದ ಮಾಲಾಧಾರಣೆ ಅಭಿಯಾನದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಮಾಲಾಧಾರಣೆಯ ಮಹತ್ವ, ಅದರ ಉದ್ದೇಶ ಹಾಗೂ ಸಮಾಜದಲ್ಲಿ ಅದರ ಪಾತ್ರದ ಕುರಿತು ವಿವರವಾಗಿ ತಿಳಿಸಿದರು. ಸತತವಾಗಿ ಪ್ರತಿವರ್ಷದಂತೆ ಮಾಲಾಧಾರಣೆ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಈ ಬಾರಿಯೂ ಹೆಚ್ಚಿನ ಪ್ರಮಾಣದಲ್ಲಿ ಯುವಕರು ಈ ಮಾಲಾಧಾರಣೆ ಅಭಿಯಾನದಲ್ಲಿ ಭಾಗಿಯಾಗಬೇಕು ಎಂದರು. ಶ್ರೀ ಸಂಜು ಮಹಾರಾಜ ಆಹೇರಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಮುಖಂಡರಾದ ಸುರೇಶ ಬಿಜಾಪುರ, ಚಂದು ಜಾಧವ, ಈಶ್ವರ ಜಾಧವ, ರಾಜು ರಾಠೋಡ, ಅಪ್ಪು ರಾಠೋಡ, ರವಿ ರಾಠೋಡ, ರಾಕೇಶ ರಜಪೂತ, ಗಣಪತಿ ಪೂಜಾರಿ, ಸಮಾಜದ ಪ್ರಮುಖರು, ಮುಖಂಡರು, ಯುವಕರು ಇದ್ದರು.