ಹಿಂದೂ ಧರ್ಮದ ಬಗ್ಗೆ ಯುವಜನತೆಗೆ ಅರಿವು ಮೂಡಿಸಿ: ಸ್ಥಾನು ಮಾಲುಯನ್‌ಜೀ

KannadaprabhaNewsNetwork |  
Published : Aug 29, 2024, 01:00 AM IST
ಫೋಟೊ ಶೀರ್ಷಿಕೆ: 28ಆರ್‌ಎನ್‌ಆರ್1ರಾಣಿಬೆನ್ನೂರು ನಗರದ ಮೆಡ್ಲೇರಿ ರಸ್ತೆಯ ಶ್ರೀ ಆದಿಶಕ್ತಿ ದೇವಸ್ಥಾನ ಸಭಾಭವನದಲ್ಲಿ ಸ್ಥಳೀಯ ಹಿಂದೂ ಪರಿಷತ್ ರಾಣೇಬೆನ್ನೂರು ಪ್ರಖಂಡ ವತಿಯಿಂದ ಏರ್ಪಡಿಸಲಾಗಿದ್ದ ಸ್ಥಾಪನಾ ದಿನ, ಷಷ್ಠಿಪೂರ್ತಿ ಹಾಗೂ ಕೃಷ್ಣ ಜನಾಷ್ಟಮಿ ಸಮಾರಂಭವನ್ನು ವಿಶ್ವ ಹಿಂದೂ ಪರಿಷತ್ ಕೇಂದ್ರಿಯ ಅಧಿಕಾರಿ ಸ್ಥಾನು ಮಾಲುಯನ್‌ಜೀ ಉದ್ಘಾಟಿಸಿದರು. | Kannada Prabha

ಸಾರಾಂಶ

ದೇಶದ ಸನಾತನ ಸಂಸ್ಕೃತಿ ಸಾವಿರಾರು ವರ್ಷಗಳಿಂದ ಬಂದಿದೆ. ಇದನ್ನು ಹೋಗಲಾಡಿಸಬೇಕು ಎಂದು ಅನೇಕ ಶತಮಾನಗಳಿಂದ ಅನೇಕರು, ಸಮುದಾಯಗಳು ಪ್ರಯ್ನತಪಟ್ಟರೂ ಹಿಂದೂ ಧರ್ಮ ಅಳಿಯದೆ ಗಟ್ಟಿಯಾಗಿ ನಿಂತಿದೆ ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರಿಯ ಅಧಿಕಾರಿ ಸ್ಥಾನು ಮಾಲುಯನ್‌ಜೀ ಹೇಳಿದರು.

ರಾಣಿಬೆನ್ನೂರು: ಇಂದಿನ ಯುವಜನತೆಯಲ್ಲಿ ಹಿಂದೂ ಧರ್ಮದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ನಮ್ಮ ದೇಶದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರಿಯ ಅಧಿಕಾರಿ ಸ್ಥಾನು ಮಾಲುಯನ್‌ಜೀ ಹೇಳಿದರು.

ನಗರದ ಮೆಡ್ಲೇರಿ ರಸ್ತೆಯ ಶ್ರೀ ಆದಿಶಕ್ತಿ ದೇವಸ್ಥಾನ ಸಭಾಭವನದಲ್ಲಿ ವಿಶ್ವ ಹಿಂದೂ ಪರಿಷತ್‌ನ 60ನೇ ವರ್ಷದ ಅಂಗವಾಗಿ ಸ್ಥಳೀಯ ಹಿಂದೂ ಪರಿಷತ್ ರಾಣಿಬೆನ್ನೂರು ಪ್ರಖಂಡ ವತಿಯಿಂದ ಏರ್ಪಡಿಸಲಾಗಿದ್ದ ಸ್ಥಾಪನಾ ದಿನ, ಷಷ್ಟಿಪೂರ್ತಿ ಹಾಗೂ ಕೃಷ್ಣ ಜನಾಷ್ಟಮಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಸನಾತನ ಸಂಸ್ಕೃತಿ ಸಾವಿರಾರು ವರ್ಷಗಳಿಂದ ಬಂದಿದೆ. ಇದನ್ನು ಹೋಗಲಾಡಿಸಬೇಕು ಎಂದು ಅನೇಕ ಶತಮಾನಗಳಿಂದ ಅನೇಕರು, ಸಮುದಾಯಗಳು ಪ್ರಯ್ನತಪಟ್ಟರೂ ಹಿಂದೂ ಧರ್ಮ ಅಳಿಯದೆ ಗಟ್ಟಿಯಾಗಿ ನಿಂತಿದೆ. ಸನಾತನ ಹಿಂದೂ ಧರ್ಮದ ಜಾಗೃತಿ ಮಾಡಬೇಕಾದದ್ದು ಧಾರ್ಮಿಕ ಸಂಘಟನೆಯಾಗಿ ಪರಿಷತ್ ಆದ್ಯ ಕರ್ತವ್ಯವಾಗಿದೆ. 60 ವರ್ಷಗಳಿಂದ ವಿಶ್ವ ಹಿಂದೂ ಪರಿಷತ್ ದೇಶದ ದೇವಸ್ಥಾನ, ಮಠ-ಮಂದಿರಗಳು ಹಾಗೂ ಗೋ-ಶಾಲೆಗಳ ರಕ್ಷಣೆಗೆ ಕಟ್ಟಿಬದ್ಧವಾಗಿ ಹೋರಾಟ ಮಾಡುತ್ತಾ ರಕ್ಷಣೆ ಮಾಡುತ್ತಿದೆ. ಹಿಂದೂ ಸಮಾಜವನ್ನು ಸಂಘಟಿಸುವುದು ಮತ್ತು ಸೇವೆ ಮಾಡುವುದು ಪರಿಷತ್ ಮೂಲ ಉದ್ದೇಶವಾಗಿದ್ದು, ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶನಂದಜೀ ಮಹಾರಾಜರು ಮಾತನಾಡಿ, ಭಾರತ ದೇಶ ಸದೃಢ ರಾಷ್ಟ್ರವಾಗಬೇಕು. ಹಿಂದೂ ಸಮಾಜದ ಉಳಿವಿಗಾಗಿ ಹಿಂದೂ ಸಮಾಜದ ಜನರು ಜಾಗೃತಿ ಹೊಂದಬೇಕು. ವಿಶ್ವ ಹಿಂದೂ ಪರಿಷತ್ ಜತೆಗೆ ಹಿಂದೂಗಳು ನಿಂತು ಅದನ್ನು ಬೆಳೆಸಿಕೊಂಡು ಹೋಗಬೇಕು. ಆಗ ದೇಶದ ಸಂಸ್ಕೃತಿ-ಪರಂಪರೆ ಉಳಿಯುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಭಗವದ್ಗೀತೆ ಪಾಠವನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಸುವ ಶ್ವೇತಾ ಐರಣಿ ಅವರನ್ನು ಗೌರವಿಸಲಾಯಿತು.

ಜ್ಞಾನಸಾಗರ ಹಾಗೂ ಆರ್ಯಭಟ ಪಬ್ಲಿಕ್ ಶಾಲೆಗಳ ವಿದ್ಯಾರ್ಥಿಗಳು ಕೃಷ್ಣ ರಾಧೆಯ ವೇಷಭೂಷಣದೊಂದಿಗೆ ಕೃಷ್ಣ ಜನ್ಮಾಷ್ಟಾಮಿ ಆಚರಿಸಿದರು.

ನವಶಕ್ತಿ ಮಹಿಳಾ ಮಂಡಳದ ಅಧ್ಯಕ್ಷೆ ಸಾವಿತ್ರಮ್ಮ ಎಲಿಗಾರ, ಚೋಳಪ್ಪ ಕಸವಾಳ, ಪ್ರಕಾಶ ಬುರಡಿಕಟ್ಟಿ, ರಮೇಶ ಕದಮ್, ಅನಿಲ್ ಹಲವಾಗಲ, ರುದ್ರೇಶ ಬುಕ್ಕಶೆಟ್ಟಿ, ರಾಮನಗೌಡ ಪಾಟೀಲ, ನಾಗರಾಜ ಕೊರವರ, ವಿನಯಗೌಡ ಬಾಳನಗೌಡ್ರ, ಅನಿಲ್ ಮಳವಳ್ಳಿ, ಜಯರಾಮ ಕುಂದಾಪುರ, ಬೀರೇಶ ಗುದಿಗೇರ, ಸಂಜೀವ ಬೇನಾಳ, ಅನು ಹುಂಕಿ ಮತ್ತಿತರರಿದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ