ನೂತನ ಪಲ್ಲಕ್ಕಿ ಹೆಸರಿನ ಬಸ್‌ ಸೇವೆ ಸದುಪಯೋಗವಾಗಲಿ

KannadaprabhaNewsNetwork |  
Published : Nov 07, 2023, 01:31 AM IST
ಫೋಟೊ:೦೬ಕೆಪಿಸೊರಬ-೦೧ : ಸೊರಬ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪಲ್ಲಕ್ಕಿ ಹೆಸರಿನ ಸೊರಬ-ಬೆಂಗಳೂರು ಮಾರ್ಗದ ಬಸ್ ಸಂಚಾರಕ್ಕೆ ಸಚಿವ ಮಧು ಬಂಗಾರಪ್ಪ ಹಸಿರು ನಿಶಾನೆ ತೋರಿಸಿದರು. | Kannada Prabha

ಸಾರಾಂಶ

ಸೊರಬ-ಬೆಂಗಳೂರು ಬಸ್ ಸಂಚಾರಕ್ಕೆ ಹಸಿರು ನಿಶಾನೆ ನೀಡಿ ಸಚಿವ

ಕನ್ನಡಪ್ರಭ ವಾರ್ತೆ ಸೊರಬ

ಪ್ರಯಾಣಿಕರಿಗೆ ನೆರವಾಗಲೆಂದು ಪ್ರಸಕ್ತ ವರ್ಷ ಪಲ್ಲಕ್ಕಿ ಹೆಸರಿನಲ್ಲಿ ಸರ್ಕಾರದಿಂದ 40 ನೂತನ ಬಸ್‌ಗಳನ್ನು ಬಿಡಲಾಗಿದೆ. ಇಂಥ ಜನೋಪಯೋಗ ಕಾರ್ಯಗಳ ದೃಢನಿರ್ಧಾರದಿಂದ ಕಾಂಗ್ರೆಸ್ ಸರ್ಕಾರ ಜನಮಾನಸದಲ್ಲಿ ಇನ್ನಷ್ಟು ಹತ್ತಿರವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪಲ್ಲಕ್ಕಿ ಹೆಸರಿನಲ್ಲಿ ಹೊರಡಿಸಿರುವ ಸೊರಬ-ಬೆಂಗಳೂರು ಮಾರ್ಗದ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನರಿಗೆ 5 ಗ್ಯಾರಂಟಿ ಯೋಜನೆಗಳ ಜೊತೆಗೆ ಜನಸಾಮಾನ್ಯರಿಗೆ ನೆರವಾಗಲೆಂದು ಹಲವು ಯೋಜನೆಗಳನ್ನು ಕೈಗೊಂಡಿದೆ. ಜನತೆ ಕೂಡ ಸರ್ಕಾರದೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಈ ಕಾರಣದಿಂದ ಜನರು ಬೆಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದರು.

ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಜಿಲ್ಲೆ, ತಾಲೂಕುಗಳಿಂದ ಬೆಂಗಳೂರಿಗೆ ತೆರಳಲು ಈ ವರ್ಷ 40 ಹೊಸ ಪಲ್ಲಕ್ಕಿ ಹೆಸರಿನ ಬಸ್‌ಗಳನ್ನು ಖರೀದಿಸಿ ಬಿಡುಗಡೆ ಮಾಡಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ತಹಸಿಲ್ದಾರ್ ಹುಸೇನ್ ಸರಾಕವಸ್, ಪುರಸಭೆ ಮುಖ್ಯಾಧಿಕಾರಿ ಟಿ.ಬಾಲಚಂದ್ರ, ಪುರಸಭೆ ಸದಸ್ಯರಾದ ಅಫ್ರಿನಾ, ಸುಲ್ತಾನ ಬೇಗಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ.ಅಣ್ಣಪ್ಪ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಜೋತಾಡಿ, ಮುಖಂಡರಾದ ಸದಾನಂದಗೌಡ ಬಿಳಗಲಿ, ಎಚ್.ಗಣಪತಿ, ಕೆ.ವಿ.ಗೌಡ, ಎಂ.ಡಿ.ಶೇಖರ್, ನೆಹರು ಕೊಡಕಣಿ, ಪ್ರದೀಪ್, ರಾಯನ್ ಗೋಪಾಲಪ್ಪ, ಶಿವಲಿಂಗೇಗೌಡ, ರಾಮಪ್ಪ, ಲೋಹಿತ್, ಡಾಕಪ್ಪ, ಸುರೇಶ್ ಬಿಳವಾಣಿ, ಭೈರಪ್ಪ, ಅಬ್ದುಲ್ ರಶೀದ್ ಹಿರೇಕೌಂಶಿ, ಫಯಾಜ್ ಅಹ್ಮದ್, ಸಂತೋಷ್, ನಾಗಪ್ಪ, ಉಮಾಪತಿ, ಮೆಹಬೂಬ್, ರತ್ನಮ್ಮ, ಮನೋಹರ್ ಇತರರಿದ್ದರು.

- - - -06ಕೆಪಿಸೊರಬ01:

ಸೊರಬ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪಲ್ಲಕ್ಕಿ ಹೆಸರಿನ ಸೊರಬ- ಬೆಂಗಳೂರು ಮಾರ್ಗದ ಬಸ್ ಸಂಚಾರಕ್ಕೆ ಸಚಿವ ಮಧು ಬಂಗಾರಪ್ಪ ಹಸಿರು ನಿಶಾನೆ ತೋರಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ