ಧಾರವಾಡ: ಜಿಲ್ಲಾಡಳಿತವು ಧಾರವಾಡ ಐಐಐಟಿ ಜೊತೆಗೂಡಿ ಹಮ್ಮಿಕೊಂಡಿರುವ ವಿದ್ಯಾಶಕ್ತಿ ಕಾರ್ಯಕ್ರಮ ಯಶಸ್ವಿಗೊಳಿಸಿ, ಧಾರವಾಡದ ಹೆಸರು ಉಳಿಸಲು ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಭಜಂತ್ರಿ ಹೇಳಿದರು.
ಕಾರ್ಯದರ್ಶಿ ಭೀಮರಾವ್ ಬಶೆಟ್ಟಿ ಹಿಂದಿನ ಸಭೆಯ ನಡಾವಳಿ ಓದಿದರು. ಉಪಾಧ್ಯಕ್ಷ ಪ್ರಮೋದ ವಾದಿರಾಜ 2024-25 ನೇ ಸಾಲಿನ ಖರ್ಚು ವೆಚ್ಚಗಳ ಮಂಡಿಸಿದರು. ಪ್ರೌಢಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರಾಗಿ/ ಕಾಲೇಜು ಉಪನ್ಯಾಸಕರಾಗಿ ಬಡ್ತಿ ನೀಡವುದು ಸರ್ಕಾರದಿಂದ ವಿಳಂಬವಾಗುತ್ತಿದ್ದು, ಶೀಘ್ರದಲ್ಲಿ ನೀಡುವಂತೆ ಒತ್ತಾಯಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು.
ಪದಾಧಿಕಾರಿಗಳಾದ ಶ್ರೀಧರ ಗಸ್ತಿ, ರಮೇಶ ತಳವಾರ, ವಿ.ಜಿ. ಗಲಬಿ, ಮಂಜುನಾಥ ಕುರಕುರಿ, ಆರ್.ಎಸ್.ಗೂಳೇರ, ತಿಪ್ಪೆಸ್ವಾಮಿ ಡಿ, ಬಸವರಾಜ ವಾಸನದ, ಶಿವಾನಂದ ಕವಟಕೊಪ್ಪ, ಪ್ರಕಾಶ ಬೂತಲ, ಎ.ಕೆ. ಮುಜಾವರ, ಎಸ್.ಕೆ. ಕಮ್ಮಾರ, ಹೇಮಲತಾ ಉಪನಾಳ ಇದ್ದರು.