ಮಕ್ಕಳನ್ನು ಪ್ರಜ್ಞಾವಂತರನ್ನಾಗಿ ಮಾಡುವುದು ಬಹಳ ಮುಖ್ಯ: ಡಾ.ಹುಲಿಕ್ ನಟರಾಜು

KannadaprabhaNewsNetwork |  
Published : Mar 02, 2026, 02:00 AM IST
1ಕೆಎಂಎನ್ ಡಿ15 | Kannada Prabha

ಸಾರಾಂಶ

ವಿಜ್ಞಾನ, ತಂತ್ರಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ಹೊಂದಿಕೊಂಡು ಮಕ್ಕಳ ಸಹ ಅಪ್‌ಡೇಟ್ ಆಗುತ್ತಿರುವುದು ಒಂದಡೆಯಾದರೆ ಮಕ್ಕಳ ಮನಸ್ಸು ಸ್ಥಿಮಿತ ಕಳೆದುಕೊಂಡು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಸಾಧ್ಯವಾದಷ್ಟು ಮಕ್ಕಳನ್ನು ಮೊಬೈಲ್, ವ್ಯಾಟ್ಸಾಪ್ ಚಾಟಿಂಗ್, ಟಿವಿ, ಧಾರಾವಾಹಿಗಳಿಂದ ದೂರ ಇಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಕ್ಕಳನ್ನು ವಿದ್ಯಾವಂತ, ಬುದ್ಧಿವಂತನಾಗಿಸುವ ಜೊತೆಗೆ ಪ್ರಜ್ಞಾವಂತರನ್ನಾಗಿ ಮಾಡುವುದು ಬಹಳ ಮುಖ್ಯ ಎಂದು ಸಂಶೋಧಕ ಡಾ.ಹುಲಿಕಲ್ ನಟರಾಜು ತಿಳಿಸಿದರು.

ಪಟ್ಟಣದ ಭವಿಷ್ಯತ್ ಪಬ್ಲಿಕ್ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮೂಡನಂಬಿಕೆಗಳ ಬಗ್ಗೆ ಅರಿವು ಮೂಡಿಸಿದರು.

ವಿಜ್ಞಾನ, ತಂತ್ರಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ಹೊಂದಿಕೊಂಡು ಮಕ್ಕಳ ಸಹ ಅಪ್‌ಡೇಟ್ ಆಗುತ್ತಿರುವುದು ಒಂದಡೆಯಾದರೆ ಮಕ್ಕಳ ಮನಸ್ಸು ಸ್ಥಿಮಿತ ಕಳೆದುಕೊಂಡು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಸಾಧ್ಯವಾದಷ್ಟು ಮಕ್ಕಳನ್ನು ಮೊಬೈಲ್, ವ್ಯಾಟ್ಸಾಪ್ ಚಾಟಿಂಗ್, ಟಿವಿ, ಧಾರಾವಾಹಿಗಳಿಂದ ದೂರ ಇಡಬೇಕು ಎಂದರು.

ಮಕ್ಕಳನ್ನು ಸಂಶೋಧನೆ, ಭಾಗವಹಿಸುವಿಕೆ, ಮಾಹಿತಿ ಸಂಗ್ರಹದ ಕಡೆಗೆ ಗಮನಹರಿಸುವಂತೆ ಮಾಡಬೇಕು. ಇದರಿಂದ ಮಕ್ಕಳ ಜ್ಞಾನವು ಬೆಳೆಯುತ್ತದೆ. ವಿದ್ಯಾವಂತ, ಬುದ್ದಿವಂತಿಕೆಗಿಂತ ಪ್ರಜ್ಞಾವಂತಿಕೆ ಬಹಳ ಮುಖ್ಯ. ಮಕ್ಕಳು ಪ್ರಶ್ನೆ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಜ್ಞಾನ ಬೆಳೆದಂತೆಲ್ಲ ವಿಜ್ಞಾನವನ್ನೇ ಮರೆಮಾಚಿ ಮೌಢ್ಯಾಚಾರಣೆಗಳಿಂದ ಜನರಿಗೆ ಮೋಸ ಮಾಡುವ ಆಂತರಿಕ ಭಯೋತ್ಪಾದಕರು ಸಮಾಜದಲ್ಲಿದ್ದಾರೆ. ದೇವರಿಗೆ ಮೋಸ ಮಾಡುವ ಜನರಿದ್ದು, ಇವರ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು ಎಂದರು.

ಪೋಷಕರು, ಮಕ್ಕಳು ಮೂಢನಂಬಿಕೆ, ಮೌಢ್ಯಾಚರಣೆಗಳಿಗೆ ಹೆಚ್ಚು ಒಳಗಾಗಬಾರದು, ಪಂಚಾಂಗ, ಜೋಷಿತಿಗಳು, ಟೋಂಗಿ ಮಂತ್ರವಾದಿಗಳಿಂದ ದೂರವಿರಬೇಕು. ಪಂಚಾಂಗ ಬಿಸಾಕಿ ಮನಸ್ಸಿನ ಪಂಚ ಅಂಗಗಳ ಬಗ್ಗೆ ಜಾಗೃತರಾಗಬೇಕು. ಮನೆಯ ವಾಸ್ತು ಬಿಟ್ಟು ಮನಸ್ಸಿನ ವಾಸ್ತುವನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದರು.

ಮನುಷ್ಯ ಹುಟ್ಟುವಾಗ ಉಸಿರು ಇರುತ್ತದೆ ಹೆಸರು ಇರೋದಿಲ್ಲ ಅದೇ ಮನುಷ್ಯ ಸತ್ತಾಗ ಹೆಸರು ಇರುತ್ತದೆ ಉಸಿರು ಇರೋದಿಲ್ಲ. ಇವುಗಳ ಮಧ್ಯ ಸಮಾಜದ ಸುಸ್ಥಿತರೆ ಕಾಪಾಡಿಕೊಳ್ಳುವ ಕಡೆಗೆ ಮುಂದಾಗಬೇಕು ಎಂದರು.

ಇದೇ ವೇಳೆ ಶಾಲಾ ಆವರಣದಲ್ಲಿ ಶಾಲಾ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಣೆ ಮಾಡಿ ಮಕ್ಕಳಿಂದ ಮಾಹಿತಿ ಪಡೆದರು.

ಕಾರ್ಯಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷೆ ಹಾಗೂ ಪ್ರಾಂಶುಪಾಲೆ ಮಾನಸ, ಸಂಸ್ಥೆ ಕಾರ್ಯದರ್ಶಿ ಅನಿಲ್, ಆಡಳಿತಾದಿ ರಕ್ಷಿತ, ಸಲಹೆಗಾರ ನಾರಾಯಣಗೌಡ, ನಿವೃತ್ತ ಶಿಕ್ಷಣಾಧಿಕಾರಿ ಜೈಪ್ರಕಾಶ್, ಉಪ ಪ್ರಾಂಶುಪಾಲೆ ಲೀನ್, ಕೋಟಿನೆಟರ್ ಚಂದ್ರಕಲಾ ಸೇರಿದಂತೆ ಶಿಕ್ಷಕರು ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿ ಅನುಷ್ಠಾನ ತಡೆಯಲು ಹೊರಟಿರುವ ಸರಕಾರದ ನಡೆ ಸರಿಯಲ್ಲ
ಇಂದು ಸರ್ವಧರ್ಮ ಸಮ್ಮೇಳನ-ತೆಪ್ಪೋತ್ಸವ, ನಾಳೆ ಮಹಾರಥೋತ್ಸವ