ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಇಂಗ್ಲಿಷ್ ಶಾಲೆಯಲ್ಲಿ ಆಯೋಜಿಸಿದ್ದ ಪರಿಸರ ಸ್ನೇಹಿ ಬೀಜದುಂಡೆ ಗಣಪತಿ ತಯಾರಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಮಗೆಲ್ಲ ಪ್ರಕೃತಿ ದೇವರು, ಆದರೆ ದೇವರ ಹೆಸರಲ್ಲಿ ಪ್ರಕೃತಿಯನ್ನ ಹಾಳು ಮಾಡುತ್ತಿರುವ ಆಚರಣೆಗಳು ಬೇರೂರುತ್ತಿವೆ ಎಂದರು.
ಪರಿಸರದ ಮೇಲೆ ಪರಿಣಾಮಇನ್ನೂ ಕೆಲವೇ ದಿನಗಳಲ್ಲಿ ಬರುವ ಗಣೇಶಹಬ್ಬ ಪರಿಸರದ ಮೇಲೆ ಸಾಕಷ್ಟು ಪರಿಣಾಮವನ್ನ ಬಿರಲಿದೆ. ಹಬ್ಬದಲ್ಲಿ ಸಮಯದಲ್ಲಿ ಕೂರಿಸಲಾಗುವ ಪಿಓಪಿ ಗಣಪ, ಬಾಂಬೆ ಗಣಪ, ಬಣ್ಣಕಾರಕ ಗಣಪ ಮತ್ತು ಬಿದಿರು ಮತ್ತು ಹುಲ್ಲಿನಿಂದ ತಯಾರಿಸದ ಗಣೇಶ ಮೂರ್ತಿಗಳು ಜಲಮೂಲ ಮತ್ತು ನೆಲಮೂಲದ ದುಷ್ಪರಿಣಾಮ ಬೀರಲಿವೆ ಎಂದರು.
ನಿಯಮ ಉಲ್ಲಂಘಿಸಿದರೆ ದಂಡ ವಕೀಲ ಮಂಜುನಾಥ ರೆಡ್ಡಿ ಮಾತನಾಡಿ, 1974ರ ಪರಿಸರ ಮಾಲಿನ್ಯ ನಿಯಂತ್ರಣ ಕಾಯ್ದೆ ಪ್ರಕಾರ, ಬಾಂಬೆ ಗಣೇಶ, ಪಿಓಪಿ, ಬಿದಿರು ಮತ್ತು ಹುಲ್ಲಿನಿಂದ ತಯಾರಿಸಿದ ಗಣೇಶ ಮತ್ತು ಬಣ್ಣಕಾರಕ ಗಣೇಶಮೂರ್ತಿಗಳ ಪ್ರತಿಷ್ಟಾಪನೆ ಮಾಡುವಂತಿಲ್ಲ, ಒಂದು ವೇಳೆ ಕಾನೂನು ಉಲ್ಲಂಘನೆಯಾದ್ದಲ್ಲಿ 10 ಸಾವಿರ ದಂಡ ಹಾಗೂ ಜೈಲು ಶಿಕ್ಷೆ ಸಹ ಆಗಲಿದೆ ಎಂದರು. ಶಿಕ್ಷಕ ಗೋಪಾಲಕೃಷ್ಣ ಮಾತನಾಡಿ, ಅರಿವಿಲ್ಲದೆ ನಾವೆಲ್ಲರು ಪಿಓಪಿ, ಬಾಂಬೆ ಗಣೇಶಗಳನ್ನ ಕೂರಿಸುತ್ತಿದ್ದೇವೆ, ಇದರಿಂದ ಪರೋಕ್ಷವಾಗಿ ಮನುಷ್ಯನ ಮೇಲೆ ಪರಿಣಾಮ ಬೀರಲಿದೆ. ಶಾಸ್ತ್ರಗಳ ಪ್ರಕಾರ ಕಲ್ಲು,ಮಣ್ಣು, ಲೋಹ ದಿಂದ ವಿಗ್ರಹವನ್ನ ತಯಾರಿಸ ಬೇಕು, ಇವುಗಳಲ್ಲಿ ಮಾತ್ರ ದೈವತ್ವದ ಶಕ್ತಿ ಇರುತ್ತದೆ, ಬೀಜದುಂಡೆ ಗಣಪತಿಯಿಂದ ಪಕ್ಕೃತಿ ಮಾತೆಗೆ ನಾವು ನೀಡುವ ಕಾಣಿಕೆ ಯಾಗುತ್ತದೆ ಎಂದರು. ಈ ವೇಳೆ ಶಿಕ್ಷಕ ನಾಗರಾಜ್, ಬೋಧಕ ಮತ್ತು ಭೋಧಕೇತರ ಸಿಬ್ಬಂಧಿ ಹಾಗೂ ವಿದ್ಯಾರ್ಥಿಗಳು ಇದ್ದರು.