ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕಳೆದ ವಾರದ ವರೆಗೂ ಕೆಜಿಗೆ 20-30 ರು.ಗಳಿದ್ದ ಟೊಮೆಟೊ ದರ ದಿಢೀರ್ 50-60 ರುಪಾಯಿಗಳಿಗೆ ಏರಿಕೆಯಾಗಿದೆ. ಟೊಮೆಟೊ ಬೆಳೆ ಪ್ರಸಕ್ತ ಮುಂಗಾರಿನಲ್ಲಿ ಅತೀಯಾದ ಮಳೆ ಹಾಗೂ ಕೊಳೆ ರೋಗದಿಂದಾಗಿ ಕುಸಿತಗೊಂಡಿರುವ ಪರಿಣಾಮ ಟೊಮೆಟೋ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದಾರೆ.ಆದರೆ ಟೊಮೆಟೊ ಬೆಳೆದ ರೈತನಿಗೆ ಉತ್ತಮ ದರ ಸಿಗುತ್ತಿದೆ. 15 ಕೆಜಿ ಟಮಾಟೊ ಕ್ರೇಟ್‌ಗೆ 500 ರಿಂದ 800 ರವರೆಗೂ ಮಾರಾಟವಾಗಿದೆ. ರೈತರಿಗೆ ಇಂತ ಬೆಲೆ ಸಿಗೋದೆ ಅಪರೂಪ. ಟೊಮೆಟೊ ಬೆಳೆದ ರೈತ ಕೈತುಂಬಾ ಕಾಸು ಪಡೆಯುವಂತಾಗಿದ್ದರೆ, ಟೊಮೆಟೊ ಖರೀದಿಸುವ ಗ್ರಾಹಕನ ಕೈ ಸುಡುತ್ತಿದೆ.
ಟೊಮೆಟೊ ಬೆಳೆ ಹಾನಿ, ದರ ಹೆಚ್ಚಳಮಾರುಕಟ್ಟೆಯಲ್ಲಿ ಆವಕ ಕಡಿಮೆ ಆಗಿರುವ ಕಾರಣ ಟೊಮೆಟೊಗೆ ಈಗ ಬೆಲೆ ಹೆಚ್ಚಾಗಿದೆ. ಯಾವಾಗಲು ಹೂವು, ದಾಳಿಂಬೆ, ತರಕಾರಿಗೆ ಒಳ್ಳೆ ದರ ಸಿಗುತ್ತಿತ್ತು. ಆಧರೆ ಟೊಮೆಟಗೆ ಉತ್ತಮ ದರ ಸಿಗುವುದು ಅಪರೂಪ. ಟೊಮೆಟೊ ಹೆಚ್ಚು ಲಾಭವಿಲ್ಲದ ಬೆಳೆ ಎಂದೇ ರೈತರು ಭಾವಿಸಿದ್ದಾರೆ. ಹದಿನೈದು ಇಪ್ಪತ್ತು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಹಳಷ್ಟು ಟೊಮೆಟೊ ಬೆಳೆಗೆ ಹಾನಿಯಾಗಿದೆ. ಉಳಿದ ಟೊಮೆಟೊ ಬೆಳೆಗೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸಿಗುತ್ತಿದೆ. ಇದರಿಂದಾಗಿ ಕೆಲವೇ ರೈತರಿಗೆ ಕೈತುಂಬಾ ಕಾಸು ಸಿಗುವಂತಾಗಿದ್ದು, ಟೊಮೆಟೊ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.
ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ 600 ರಿಂದ 860 ರೂಗಳವರೆಗೂ ಉತ್ತಮ ಗುಣಮಟ್ಟದ ಟೊಮೆಟೊ ಮಾರಾಟ ವಾಗಿದೆ. ಕಳೆದ ಒಂದು ತಿಂಗಳಿಂದಲೂ ಹೆಚ್ಚೂ ಕಡಿಮೆ ಇವತ್ತಿನ ಧರ ಅದಕ್ಕಿಂತಲೂ ಹೆಚ್ವಿನ ಧರ ಅಂದ್ರೆ 15 ಕೆಜಿ ಟೊಮೆಟೊ ಕ್ರೇಟ್ 900 ರುಪಾಯಿವರೆಗೂ ಮಾರಾಟ ಮಾಡಿದ್ದಾರೆ.ಅಗತ್ಯಕ್ಕೆ ತಕ್ಕಷ್ಟು ಬೆಳೆ ಇಲ್ಲ
ಮಾರುಕಟ್ಟೆಗೆ ಬೇಡಿಕೆ ಇದ್ದಷ್ಟು ಟೊಮೆಟೊ ಬರುತ್ತಿಲ್ಲ. ಮಳೆ ಹೆಚ್ಚಾಗಿ ಇರೋದ್ರಿಂದ ಇಟ್ಟ ಬೆಳೆ ಸರಿಯಾಗಿ ಬರುತ್ತಿಲ್ಲ. ಜತೆಗೆ ಹೊರಗಡೆ ರಾಜ್ಯಗಳಿಂದಲೂ ಟೊಮೆಟೊ ಬರುತ್ತಿಲ್ಲ. ಈ ಕಾರಣದಿಂದ ಒಂದು ತಿಂಗಳಿಂದ ಒಂದೆ ತೆರನಾದ ದರಗಳು ಸಿಗುತ್ತಿದೆ. ಇದು ಇನ್ನೂ ಎರಡು ತಿಂಗಳು ಇದೆ ರೀತಿಯ ಸಮಾನ ದರ ಸಿಗುವ ಸಾಧ್ಯತೆ ಇದೆ. ಇದರಿಂದ ರೈತರೂ ಖುಷಿಯಾಗಿದ್ದಾರೆ. ಮಳೆ ಇಲ್ಲದ ಕೆಲವು ರಾಜ್ಯಗಳಿಗೆ ಇಲ್ಲಿಂದ ಟೊಮೆಟೊ ರಫ್ತಾಗುತ್ತದೆ. ಆದರೆ ಈಗ ಅವರ ಬೇಡಿಕೆಗೆ ತಕ್ಕಷ್ಟು ಟೊಮೆಟೊ ಇಲ್ಲಿಂದ ಪೂರೈಸಲು ಆಗುತ್ತಿಲ್ಲ ಎಂಬುದು ವರ್ತಕರ ಅಭಿಪ್ರಾಯ.ತಿಪ್ಪೇನಹಳ್ಳಿ ರೈತರೊಬ್ಬರ ಪ್ರಕಾರ, ಇದೆ ಮೊದಲು ಹೆಚ್ಚು ದರಕ್ಕೆ ಟೊಮೆಟೊ ಮಾರಾಟ ಮಾಡಲಾಗುತ್ತಿದೆ. ಕಳೆದು ಐದಾರು ವರ್ಷಗಳಿಂದ ಟೊಮೆಟೊ ಬೆಳೆಯುತಿದ್ದರೂ, ಯಾವತ್ತೂ ಮೂರು ನೂರರಿಂದ ನಾಲ್ಕುನೂರು ರು.ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಇಷ್ಟು ದಿನ ಹಾಕಿದ ಬಂಡವಾಳಕ್ಕೆ ಸರಿಹೋಗುತಿತ್ತು ಈ ತಿಂಗಳಲ್ಲಿ ನನ್ನ ಎಲ್ಲಾ ಖರ್ಚು ಕಳೆದು ಮೂರು ನಾಲ್ಕು ಲಕ್ಷ ಲಾಭವನ್ನ ಪಡೆದಿದ್ದೇನೆ ಎಂದು ಸಂತಸದ ಮಾತುಗಳನ್ನಾಡಿದರು.
ಅತಿಯಾದ ಮಳೆಯಿಂದಾಗಿ ಟೊಮೆಟೊ ಬೆಳೆಗಾರನಿ ಉತ್ತಮ ಲಾಭ ಸಿಗುತ್ತಿದೆ. ಗ್ರಾಹನಿಗೆ ಮಾತ್ರ ಬರೆ ಬಿದ್ದಿದೆ. ಕೆಜಿ ಟೊಮೆಟೊಗೆ 50ರಿಂದ 60 ರುಪಾಯಿ ಕೊಟ್ಟು ಕೊಂಡುಕೊಳ್ಳುವಂತಾಗಿದೆ.