ಟಿಎಪಿಸಿಎಂಎಸ್‌ಗೆ ಅಧ್ಯಕ್ಷರಾಗಿ ಮಳಲಿ ಶ್ರೀನಿವಾಸ್ ಅವಿರೋಧ ಆಯ್ಕೆ

KannadaprabhaNewsNetwork |  
Published : Aug 25, 2026, 01:45 AM IST
ನರಸಿಂಹರಾಜಪುರ  ಟಿ.ಎ.ಪಿ.ಸಿ.ಎಂ.ಎಸ್.ನ ಅಧ್ಯಕ್ಷರಾಗಿ ಮಳಲಿ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದು ಮುಖಂಡರು ಹಾರ ಹಾಕಿ ಅಭಿನಂದಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರಟಿಎಪಿಸಿಎಂಎಸ್‌ ನಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಸಂಸ್ಥೆ ಕಚೇರಿಯಲ್ಲಿ ನಡೆದ ಚುನಾವಯಲ್ಲಿ ಮಳಲಿ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎಸ್. ಗೋಪಾಲ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಟಿಎಪಿಸಿಎಂಎಸ್‌ ನಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಸಂಸ್ಥೆ ಕಚೇರಿಯಲ್ಲಿ ನಡೆದ ಚುನಾವಯಲ್ಲಿ ಮಳಲಿ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಎಸ್. ಗೋಪಾಲ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಅಧ್ಯಕ್ಷ ಸ್ಥಾನಕ್ಕಾಗಿ ಮಳಲಿ ಶ್ರೀನಿವಾಸ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. 14 ನಿರ್ದೇಶರ ಪೈಕಿ ಬೇರೆ ಯಾರೂ ನಾಮಪತ್ರ ಸಲ್ಲಿಸದೆ ಇರುವುದರಿಂದ ಚುನಾವಣಾಧಿಕಾರಿಯಾಗಿದ್ದ ಟಿಎಪಿಸಿಎಂಎಸ್‌ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜ್ ಅಧ್ಯಕ್ಷರಾಗಿ ಮಳಲಿ ಶ್ರೀನಿವಾಸ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ನಂತರ ನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಬೆಮ್ಮನೆ ಮೋಹನ್ ಮಾತನಾಡಿ ರೈತರಿಗೆ ಇರುವ ಟಿಎಪಿಸಿಎಂಎಸ್‌ ಸಂಸ್ಥೆಯನ್ನು ಸಂಘದ ಎಲ್ಲಾ ನಿರ್ದೇಶಕರು ಒಟ್ಟಾಗಿ ಪ್ರಗತಿಯತ್ತ ಕೊಂಡೊಯ್ಯೋಣ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ನೀಲೇಶ್ ಮಾತನಾಡಿ ಟಿಎಪಿಸಿಎಂಎಸ್‌ ರೈತರ ಸಂಸ್ಥೆಯಾಗಿದ್ದು ರೈತರಿಗೆ ಅನುಕೂಲ ವಾಗುವ ಎಲ್ಲಾ ಕೃಷಿ ಪರಿಕರ, ಗೊಬ್ಬರ ನೀಡಿ ಸಂಸ್ಥೆಯನ್ನು ಲಾಭದಾಯಕವಾಗಿ ನಡೆಸಬೇಕು ಎಂದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರುಣಕುಮಾರ್ ಮಾತನಾಡಿ ಹಿಂದಿನ ಎಲ್ಲಾ ಅಧ್ಯಕ್ಷರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಸಂಸ್ಥೆ ರೈತರ ಸ್ನೇಹಿಯಾಗಿ ಉತ್ತಮ ಹೆಸರು ಗಳಿಸಲಿ ಎಂದರು.

ಟಿಎಪಿಸಿಎಂಎಸ್‌ ನಿರ್ದೇಶಕಿ ಮೀನಾಕ್ಷಿ ಕಾಂತರಾಜ್ ಮಾತನಾಡಿ ವೈದ್ಯನಾಥನ್ ವರದಿ ಬಂದ ಮೇಲೆ ಸಹಕಾರ ಸಂಘ ಗಳಿಗೆ ಹಲವು ಸವಾಲು ಎದುರಾಗಿದೆ. ಟಿಎಪಿಸಿಎಂಎಸ್‌ ಎಲ್ಲಾ ನಿರ್ದೇಶಕರು ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ನೂತನ ಅಧ್ಯಕ್ಷ ಮಳಲಿ ಶ್ರೀನಿವಾಸ್ ಮಾತನಾಡಿ ಈ ಸಂದರ್ಭದಲ್ಲಿ ಮಾಜಿ ಸಚಿವ ಡಿ.ಎನ್.ಜೀವರಾಜ್ ಅವನ್ನು ನೆನಪಿಸಿಕೊಳ್ಳಬೇಕಾಗಿದೆ. ಈ 5 ವರ್ಷದ ಅವಧಿಯಲ್ಲಿ ಈಗಾಗಲೇ 3 ಜನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ನಾನು 4 ನೇ ಅಧ್ಯಕ್ಷನಾಗಿದ್ದೇನೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಟಿಎಪಿಸಿಎಂಎಸ್‌ ಲಾಭದಾಯಕವಾಗಿ ಮುನ್ನಡೆಸೋಣ ಎಂದರು.

ಬಿಜೆಪಿ ಮುಖಂಡ ಸಂಪತ್ ಕುಮಾರ್, ಮಾಜಿ ಅಧ್ಯಕ್ಷ ಎಸ್ ಗೋಪಾಲ್, ಬಿಜೆಪಿ ವಕ್ತಾರ ಎನ್.ಎಂ. ಕಾಂತರಾಜ್, ಟಿಎಪಿಸಿಎಂಎಸ್‌ ನಿರ್ದೇಶಕ ಕೆ.ಸಿ.ಜಯಪಾಲ್ ಮಾತನಾಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸೀತಾರಾಮ, ನಿರ್ದೇಶಕರಾದ ಜಿ.ಎಂ.ಪ್ರಕಾಶ್, ಎಚ್.ಡಿ.ಮಿಥುನ, ಕೆ.ಎಂ.ಜಗದೀಶ್, ಎಂ.ಟಿ.ಕುಮಾರ್, ರಾಜಪ್ಪಗೌಡ, ಬಿ.ಎಂ.ರಾಮಚಂದ್ರ, ಎಸ್.ರಂಗಪ್ಪ,ಜಗದೀಶ್, ಸುಧಾಕರ ಮುಖಂಡರಾದ ಎಚ್.ಇ.ದಿವಾಕರ, ವಿಜಯಕುಮಾರ್, ಸಂದೇಶ, ಡಿ.ಆರ್.ಈಶ್ವರ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ರಾಹ್ಮಣ ಯುವಕರು ಸಮಾಜಕ್ಕೆ ಕೊಡುಗೆ ನೀಡಿ: ಮಾ.ಸ ನಂಜುಂಡಸ್ವಾಮಿ
ವಿವಿಧ ಪ್ರದೇಶಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ, ಪರಿಶೀಲನೆ