Lokayukta officials visit and inspect various areas
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ವಿವಿಧ ಪ್ರದೇಶಗಳಿಗೆ ಮತ್ತು ವಿವಿಧ ಇಲಾಖೆಗಳಿಗೆ ರಾಜ್ಯ ಲೋಕಾಯುಕ್ತ ಆಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.ತಾಲೂಕಿನ ಕೆರೆಬಿಳಚಿ ಗ್ರಾಮಕ್ಕೆ ಭೇಟಿ ನೀಡಿದ ಲೋಕಾಯುಕ್ತ ರಿಜಿಸ್ಟರ್ ಅಧಿಕಾರಿ ರಾಜಶೇಖರಪ್ಪ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ, ಕುಡಿವ ನೀರು, ಗ್ರಾಮದ ಸ್ವಚ್ಛತೆ ಹಾಗೂ ಇನ್ನಿತರೆ ಅಭಿವೃದ್ಧಿ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸಿದರು.
ನಂತರ ಸೂಳೆಕೆರೆಯಲ್ಲಿರುವ ದೋಣಿವಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಈ ಅಧಿಕಾರಿಗಳು ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳ ಬಗ್ಗೆ ಮತ್ತು ಕೆರೆಯ ಆಸು-ಪಾಸಿನಲ್ಲಿ ಸ್ವಚ್ಛತೆಯನ್ನು ಕಾಪಾಡುವ ಬಗ್ಗೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪುರಸಭೆ, ಸರ್ವೆ ಇಲಾಖೆಗಳಿಗೆ ಭೇಟಿ ನೀಡಿ ಕಚೇರಿಯ ಕಡತ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಸಿಗಬಹುದಾದ ಸೌಲಭ್ಯಗಳನ್ನು ಯಾವುದೇ ವಿಳಂಬವಿಲ್ಲದೆ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲೋಕಾಯುಕ್ತ ಡಿ.ವೈ.ಎಸ್.ಪಿ ವಸಂತ್, ಪರಮೇಶ್ವರ್, ಬಸವರಾಜ್ ಲಮಾಣಿ, ತಹಶೀಲ್ದಾರ್ ಎನ್.ಜೆ.ನಾಗರಾಜ್, ತಾ.ಪಂ ಕಾರ್ಯನಿರ್ವಾಣಾಧಿಕಾರಿ ಎಂ.ಆರ್. ಪ್ರಕಾಶ್, ಉಪವಿಭಾಗಾಧಿಕಾರಿ ಚನ್ನಪ್ಪ, ರಾಜಸ್ವನಿರೀಕ್ಷಕ ಸಿದ್ದರಾಮೇಶ್, ಪರಿಸರ ಅಧಿಕಾರಿ ಶಿಲಾ ಹಾಜರಿದ್ದರು.24ಕೆಸಿಎನ್ಜಿ3
ತಾಲೂಕಿನ ಕೆರೆಬಿಳಚಿ ಗ್ರಾಮಕ್ಕೆ ಲೋಕಾಯುಕ್ತ ರಿಜಿಸ್ಟರ್ ಅಧಿಕಾರಿ ರಾಜಶೇಖರಪ್ಪ ಮತ್ತು ಅಧಿಕಾರಿಗಳ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.