ಬ್ರಾಹ್ಮಣರೆಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕು. ನಾವು ಎಲ್ಲಾ ವಿಭಾಗಗಳಲ್ಲಿಯೂ ನಮ್ಮನ್ನು ತೊಡಗಿಸಿಕೊಳ್ಳಬೇಕು. ಯುವಕರು ಸಮಾಜಮುಖಿಗಳಾಗಿ ಚಿಂತಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುವಂತವರಾಗಬೇಕೆಂದು ಬ್ರಾಹ್ಮಣ ಸಮಾಜದ ಜಿಲ್ಲಾ ಮುಖಂಡ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಹಿರಿಯ ಸಲಹೆಗಾರ ಮಾ.ಸ ನಂಜುಂಡಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಬ್ರಾಹ್ಮಣರೆಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕು. ನಾವು ಎಲ್ಲಾ ವಿಭಾಗಗಳಲ್ಲಿಯೂ ನಮ್ಮನ್ನು ತೊಡಗಿಸಿಕೊಳ್ಳಬೇಕು. ಯುವಕರು ಸಮಾಜಮುಖಿಗಳಾಗಿ ಚಿಂತಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುವಂತವರಾಗಬೇಕೆಂದು ಬ್ರಾಹ್ಮಣ ಸಮಾಜದ ಜಿಲ್ಲಾ ಮುಖಂಡ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಹಿರಿಯ ಸಲಹೆಗಾರ ಮಾ.ಸ ನಂಜುಂಡಸ್ವಾಮಿ ಹೇಳಿದರು.

ಅವರು ಜನ್ನಾಪುರ ಬಬ್ಬೂರು ಕಮ್ಮೆ ಸೇವಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಾವು ನೆಲದಲ್ಲಿ ಬಿಡುವ ಗರಿಕೆಗಳ ರೀತಿ ಗಟ್ಟಿಯಾಗಿ ಇರಬೇಕು. ಇತರರು ಎಷ್ಟೇ ನಮ್ಮನ್ನು ಕೆಳಗೆ ತಳ್ಳಲು ಪ್ರಯತ್ನಿಸಿದರೂ, ನಾವು ನಮ್ಮ ಸಂಸ್ಕಾರದಿಂದ ಮೇಲೆ ಬರುವ ಶಕ್ತಿ ಹೊಂದಿದ್ದೇವೆ. ಇದು ನಮ್ಮೆಲ್ಲರ ಹೆಮ್ಮೆಯ ವಿಚಾರವಾಗಿದೆ. ಮತ್ತೊಬ್ಬರಿಗೆ ಮೋಸ, ಅನ್ಯಾಯ ಅಥವಾ ಕೆಟ್ಟದನ್ನು ಮಾಡಿ ಮುಂದೆ ಬರುವ ಸಂಸ್ಕೃತಿ ನಮ್ಮದಲ್ಲ. ಎಲ್ಲರ ಹಿತಬಯಸುವವರು ನಾವು ಎಂಬುದನ್ನು ಅರಿತುಕೊಂಡು ಮುನ್ನಡೆಯಬೇಕೆಂದರು.

ಡಾ. ಎಂ.ಎಚ್ ವಿದ್ಯಾಶಂಕರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಇಂದು ಬ್ರಾಹ್ಮಣರು ತಮ್ಮ ಮಕ್ಕಳಿಗೆ ಸಂಸ್ಕಾರದ ಜೊತೆಗೆ ಕ್ರಾಂತಿಕಾರಿ ಸ್ವಭಾವವನ್ನು ಕೂಡ ಬೆಳೆಸಬೇಕಾಗಿದೆ, ಸಮಾಜದ ಮಾರ್ಗದರ್ಶಕರಾಗಿ ನಿಲ್ಲಬೇಕಾದಲ್ಲಿ ಆದರ ಅಂಕುಡೊಂಕನ್ನು ಖಂಡಿಸಿ ಸರಿಪಡಿಸಬೇಕಾಗಿದೆ ಎಂದರು.

ತುಮಕೂರು ಕೆ.ಸಿ ನಾಗೇಶ್, ಹಾಸನ ನಾಗೇಂದ್ರ ಮತ್ತು ಶಿವಮೊಗ್ಗ ರಮೇಶ್ ಜೋಯ್ಸ್, ಎಂ.ಡಿ ಪ್ರಕಾಶ್ ಮತ್ತು ಗುರುಮೂರ್ತಿ ಹಾಗೂ ಡಾ.ಎಂ.ಎಚ್ ವಿದ್ಯಾಶಂಕರ್ ಅವರ ಸಾಧನೆಗಳನ್ನು ಗುರುತಿಸಿ ಸಂಘದ ವತಿಯಿಂದ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಎಚ್.ಎಸ್ ನಂಜುಂಡಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಬ್ರಹ್ಮ ಎಂ.ಡಿ ಹಿರಿಯಣ್ಣಭಟ್, ವಿಶ್ವವಂದ್ಯ ಮತ್ತು ವಿಭೂಷಣ್‌ರವರು ವೇದಘೋಷ ನಡೆಸಿಕೊಟ್ಟರು. ಪುಷ್ಪಾ ಸುಬ್ರಹ್ಮಣ್ಯ ಮತ್ತು ಡಿ.ಎಸ್ ಗಾಯತ್ರಿ ಪ್ರಾರ್ಥಿಸಿ, ಎಚ್.ಎಸ್ ದಿನೇಶ್ ಸ್ವಾಗತಿಸಿದರು. ಸುಬ್ರಹ್ಮಣ್ಯ ನಿರೂಪಿಸಿ ಮತ್ತು ದೀಪ ಶಿವಸ್ವಾಮಿ ವಂದಿಸಿದರು.

ಶಿವಮೊಗ್ಗ ಜಿಲ್ಲಾ ಸಂಘದ ಕಾರ್ಯದರ್ಶಿ ನಾಗೇಶ್, ಆನಂದ್, ಶ್ರೀಮತಿ ಮತ್ತು ಗುರು ದತ್ತ, ಸತ್ಯನ್, ದಿವ್ಯಶ್ರೀ, ಸರೋಜಾ, ರಾಮ್‌ಪ್ರಸಾದ್, ಮೈಲಾರಯ್ಯ, ಶ್ರೀಧರ್, ಶಾಂತ ನಂಜುಂಡಸ್ವಾಮಿ, ಮೀರಾ ಆನಂದ್, ಸುಧಾ ಮತ್ತು ಓ ಸುರೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.