ಮಲ್ಲಮ್ಮ ಮೋಕ್ಷದ ಮಾರ್ಗ ತೋರಿದ ಮಹಾಸಾದ್ವಿ

KannadaprabhaNewsNetwork |  
Published : Aug 01, 2025, 12:30 AM IST
ಪೋಟೊ ಕ್ಯಾಪ್ಸನ್:ಡಂಬಳ ಹೋಬಳಿಯ ಹಳ್ಳಿಗುಡಿ ಗ್ರಾಮದಲ್ಲಿ  ಶಿವಶರಣೆ ಹೆಮರಡ್ಡಿ ಮಲ್ಲಮ್ಮ ದೇವಸ್ಥಾನ ಕಟ್ಡಡ ಭೂಮಿ ಪೂಜೆಗೆ  ನಾಡೋಜ ಜಗದ್ಗುರು ಡಾ.ಅನ್ನದಾನೀಶ್ವರ ಮಹಾಸ್ವಾಮಿಗಳು ಅಮೃತ ಹಸ್ತದಿಂದ ಚಾಲನೆ ನೀಡಲಾಯಿತು.  ಶಾಸಕ ಜಿ.ಎಸ್.ಪಾಟೀಲರು ಗುದ್ಲಿ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಹೇಮರೆಡ್ಡಿ ಮಲ್ಲಮ್ಮ ಸೂರ್ಯ-ಚಂದ್ರ ಇರುವವರೆಗೂ ಸಮಾಜಕ್ಕೆ ಅನ್ನದ ಕೊರತೆ ಬರಬಾರದು ಎಂದು ಶಿವನಿಂದ ವರ ಪಡೆದ ಮಹಾಮಾತೆ

ಡಂಬಳ: ದಾನ, ದಾಸೋಹ ಹಾಗೂ ನಿಸ್ವಾರ್ಥ ಭಕ್ತಿಗೆ ಹೆಸರಾದ ಹೇಮರಡ್ಡಿ ಮಲ್ಲಮ್ಮ ಮೋಕ್ಷದ ಮಾರ್ಗ ತೋರಿದ ಮಹಾಸಾದ್ವಿ, ಸಮಾಜ ಸುಧಾರಣೆಯಲ್ಲಿ ಕ್ರಾಂತಿ ಮಾಡಿದ ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು, ಅವರ ವಿಚಾರ ಮತ್ತು ತತ್ವಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಡಂಬಳ ಹೋಬಳಿಯ ಹಳ್ಳಿಗುಡಿ ಗ್ರಾಮದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಕಟ್ಟಡ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೇಮರೆಡ್ಡಿ ಮಲ್ಲಮ್ಮ ಸೂರ್ಯ-ಚಂದ್ರ ಇರುವವರೆಗೂ ಸಮಾಜಕ್ಕೆ ಅನ್ನದ ಕೊರತೆ ಬರಬಾರದು ಎಂದು ಶಿವನಿಂದ ವರ ಪಡೆದ ಮಹಾಮಾತೆ. ಅವರ ತತ್ವಾದರ್ಶ ಎಲ್ಲರೂ ಪಾಲಿಸಬೇಕು ಎಂದರು. ನಾಡೋಜ ಜಗದ್ಗುರು ಡಾ. ಅನ್ನದಾನೀಶ್ವರ ಮಹಾಸ್ವಾಮಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೀಮಂತಿಕೆ ಅಂದರೆ ಹಣ, ಚಿನ್ನವಲ್ಲ. ಪರಸ್ಪರ ಪ್ರೀತಿ ಗೌರವದಿಂದ ಕಾಣುವುದು. ಮಾನವೀಯ ಮೌಲ್ಯ ಅಳವಡಿಸಿಕೊಂಡು, ಎಲ್ಲ ಸಮುದಾಯಗಳೊಂದಿಗೆ ಸಹಬಾಳ್ವೆಯಿಂದ ಬದುಕುವಂತೆ ಮಲ್ಲಮ್ಮ ಬೋಧಿಸಿದವರು. ಅವರು ಹಾಕಿಕೊಟ್ಟಿರುವ ಆದರ್ಶದಲ್ಲಿ ನಡೆಯಬೇಕು ಮತ್ತು ಮಹಿಳೆಯರು ದೇವಸ್ಥಾನ ಕಟ್ಟಲು ತಮ್ಮ ಸಹಕಾರ ನೀಡಬೇಕು ಎಂದು ಹೇಳಿದರು.

ಶಂಕ್ರಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಬ್ಬಿಗೇರಿಯ ಹೆಮರಡ್ಡಿ ಮಲ್ಲಮ್ಮ ಸದ್ಭೋಧನಾ ಬಸವರಾಜ ಶ್ರೀಗಳು, ಅನ್ನಪೂರ್ಣ ಜಿ. ಪಾಟೀಲ್, ಮುಂಡರಗಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ಗೋಣಿಬಸಪ್ಪ ಕೊರ್ಲಹಳ್ಳಿ, ಎಫ್.ಎಸ್. ಗೊಡಿ, ಶಂಕ್ರಪ್ಪ ಅಂದಾನಪ್ಪ ಚನ್ನಳ್ಳಿ, ಹನಮಂತಪ್ಪ ಗಡ್ಡದ, ಬಿ.ಎಸ್. ಮೇಟಿ, ಗುರಪ್ಪ ಕುರ್ತಕೋಟಿ, ಚಂದ್ರಪ್ಪ ಚನ್ನಳ್ಳಿ, ಶೋಭಾ ಮೇಟಿ, ಕುಮಾರ ಗಡಗಿ, ಜಗದೀಶ ಅವರಡ್ಡಿ, ಸುರೇಶ ಶಿರೋಳ, ಬಸವರಡ್ಡಿ ಬಂಡಿಹಾಳ, ಕುಮಾರ ಗಡಗಿ, ಭೀಮರಡ್ಡಿ ರಡ್ಡೆರ, ಹೇಮರಡ್ಡಿ ಮುಂಡರಗಿ, ಮಹೇಶ ಗಡಗಿ, ವಿ.ಟಿ. ಮೇಟಿ, ಗುರುಪುತ್ರಪ್ಪ ಸಂಶಿ, ದೇವರಡ್ಡಿ ಕಾತರಕಿ, ವಿರುಪಾಕ್ಷಗೌಡ ಮರಿಗೌಡ್ರ, ಗ್ರಾಮದ ಹಿರಿಯರು, ನೂರಾರು ಮಹಿಳೆಯರು, ಯುವಕರು, ಸಮಿತಿಯ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ