ಮಲ್ಲಮ್ಮಳ ನಡೆನುಡಿ ನಮ್ಮ ಸಂಸ್ಕೃತಿಯ ಪ್ರತಿಬಿಂಬ

KannadaprabhaNewsNetwork | Published : May 11, 2025 11:52 PM
ವಿಜಯಪುರ ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮವನ್ನು ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ತಮ್ಮ ಬದುಕಿನ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರಿದವರು ಶಿವಶರಣೆ ಹೆಮರಡ್ಡಿ ಮಲ್ಲಮ್ಮ ಎಂದು ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ಹೇಳಿದರು. ನಗರದ ಕಂದಗಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ತಮ್ಮ ಬದುಕಿನ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರಿದವರು ಶಿವಶರಣೆ ಹೆಮರಡ್ಡಿ ಮಲ್ಲಮ್ಮ ಎಂದು ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ಹೇಳಿದರು.

ನಗರದ ಕಂದಗಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿವಶರಣೆ ಮಲ್ಲಮ್ಮನವರು ಕಷ್ಟಗಳಿಗೆ ಎದೆಗುಂದದೇ ತಾಳ್ಮೆಯ ಬದುಕಿನ ಮಾರ್ಗದಲ್ಲಿ ನಡೆದು ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಬದುಕಿನ ತತ್ವಾದರ್ಶಗಳು ಇಂದಿನ ಸಮಾಜಕ್ಕೆ ಪ್ರೆರಣೆಯಾಗಿವೆ ಎಂದು ಹೇಳಿದರು.ಮೈದುನ ವೇಮನನಿಗೆ ಸನ್ಮಾರ್ಗ ತೋರಿಸಿ ಆದರ್ಶ ವ್ಯಕ್ತಿಯನ್ನಾಗಿಸಿದವರು. ಶಿವಶರಣೆ ಮಲ್ಲಮ್ಮ. ಅವಿಭಕ್ತ ಕುಟುಂಬದ ಪರಿಕಲ್ಪನೆಯಲ್ಲಿ ಸಾಗಿ ಸಮಾಜಕ್ಕೆ ಕುಟುಂಬದ ಮೌಲ್ಯಗಳನ್ನು ಸಾರಿದರು. ಹೆಣ್ಣು-ಗಂಡು ಎನ್ನದೆ ಇಡೀ ಮನುಕುಲಕ್ಕೆ ಆದರ್ಶವಾಗಿ ಸರಳ ಜೀವನ ನಡೆಸಿದವರು. ಅವರ ನಡೆನುಡಿಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾಗಿವೆ ಎಂದು ತಿಳಿಸಿದರು.ಸಿಕ್ಯಾಬ್ ಮಹಿಳಾ ಮಹಾವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಮೇತ್ರಿ ಮಾತನಾಡಿ, ತಾಳ್ಮೆ, ಸಹನೆ ಹಾಗೂ ಭಕ್ತಿಯ ಮಾರ್ಗದಲ್ಲಿ ಸಾಗಿದವರು. ಸಹನೆ, ಭಕ್ತಿ, ದಾನಿ, ಕ್ಷಮಾಗುಣಿ ಹೀಗೆ ಅನೇಕ ನಾಮಗಳಿಂದ ಹೆಮರಡ್ಡಿ ಮಲ್ಲಮ್ಮ ಅವರನ್ನು ಸ್ಮರಿಸಲಾಗುತ್ತದೆ. ದಾನದ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಶಿವಶರಣೆ ಮಲ್ಲಮ್ಮ, ಕಷ್ಟಗಳಲ್ಲಿಯೂ ಸಕಾರಾತ್ಮಕತೆಯನ್ನು ಕಂಡುಕೊಂಡವರು. ಮಲ್ಲಮ್ಮನಲ್ಲಿದ್ದ ತಾಳ್ಮೆಯ ಆದರ್ಶಮಯ ಅಂಶಗಳನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹಲಹೆ ನೀಡಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಶಂಕರ್ ಮಾರಿಹಾಳ, ಭಾರತಿ ಕುಂದನಗಾರ(ಸೋನಾರ), ಮುತ್ತಪ್ಪ ಸಂಕಣ್ಣವರ, ಎಚ್.ಎ.ಮಮದಾಪುರ, ಜಿಪಂ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಎ.ಬಿ.ಅಲ್ಲಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷ ಸುರೇಶ ದೇಸಾಯಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.

PREV