ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಆಲಂಬಾಡಿಕಾವಲು ಗ್ರಾಮದ ಡೇರಿ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾದ ನೂತನ ನಿರ್ದೇಶಕರನ್ನು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿನಂದಿಸಿದರು.ಪಟ್ಟಣದ ತಮ್ಮ ಕಚೇರಿಯಲ್ಲಿ ಅಭಿನಂದಿಸಿ ಮಾತನಾಡಿದ ಅವರು, ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘವು ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ. ಆಡಳಿತ ಮಂಡಳಿಯ ಎಲ್ಲಾ 13ಸ್ಥಾನಗಳಿಗೆ ಗ್ರಾಮದ ಎಲ್ಲಾ ಸಮುದಾಯದ ವರ್ಗದ ಜನರಿಂದ ಕೂಡಿದ ನಿರ್ದೇಶಕರನ್ನು ಯಜಮಾನರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಿರೋಧವಾಗಿ ಆಯ್ಕೆ ಮಾಡಿರುವುದು ಶ್ಲಾಘನೀಯ ಎಂದರು.
ಇದೇ ರೀತಿ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಸಂಘದ ನೌಕರರನ್ನು ಆಯ್ಕೆ ಮಾಡಿಕೊಂಡು ಸಂಘದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ರಾಜಕೀಯ ಬೆರೆಸದೇ ಪರಸ್ಪರ ಸಹಕಾರ ಹಾಗೂ ಸೇವಾ ಭಾವನೆಯಿಂದ ಸಂಘದ ಏಳಿಗೆಗೆ ಕೈಜೋಡಿಸಬೇಕು ಸಲಹೆ ನೀಡಿದರು.ತಾಪಂ ಮಾಜಿ ಸದಸ್ಯ ಎ.ಎಂ.ಸಂಜೀವಪ್ಪ ಮಾತನಾಡಿ, ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಗ್ರಾಮಕ್ಕೆ ಡೇರಿ ಅವಶ್ಯಕತೆ ಇರುವುದನ್ನು ಕಣ್ಣಾರೆ ಕಂಡು ಸಂಘ ಆರಂಭಕ್ಕೆ ನೆರವಾಗಿದ್ದಾರೆ. 13 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಡೇರಿಗೆ ಸಾಮಾನ್ಯ ಕ್ಷೇತ್ರದಿಂದ ನಿರ್ದೇಶಕರಾಗಿ ದಿವಾಕರ್.ಕೆ.ಮಾಸ್ತಿಗೌಡ, ಅಬ್ದುಲ್ ಫಜುಲು, ಮಂಜುನಾಥ್.ಎ.ಎಂ ಮಹಬೂಬ್‌ಖಾನ್(ಪಠಾಣ್‌ಬಾಬು), ಎನ್.ಕೃಷ್ಣೇಗೌಡ, ಚನ್ನಕೃಷ್ಣ, ಎಸ್.ಪ್ರಭಾಕರ್. ಮಹಿಳಾ ಮೀಸಲು ಕ್ಷೇತ್ರದಿಂದ ಯಶೋಧಮ್ಮಶಿವಣ್ಣೇಗೌಡ, ಭಾನಮತಿ ಜಯರಾಮೇಗೌಡ, ಬಿಸಿಎಂ.ಎ ಮೀಸಲು ಕ್ಷೇತ್ರದಿಂದ ಎಂ.ಮೋಹನ್, ಕೆ.ಕೃಷ್ಣೇಗೌಡ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಎ.ಎಸ್.ಸಂತೋಷ್ ಕುಮಾರ್, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಜಗದೀಶ್ ಅವರು ಅವಿರೋಧವಾಗಿ ಆಯ್ಕೆಗೊಂಡರು.ಈ ವೇಳೆ ವಿಎಸ್ ಎಸ್ ಎನ್ ಬ್ಯಾಂಕ್ ಮಾಜಿ ಅಧ್ಯಕ್ಷ ಸಿದ್ದಿಕ್ ಅಹಮದ್ , ಗ್ರಾಪಂ ಸದಸ್ಯ ಎ.ರಾಜು, ರವಿ, ಡಿ.ಮಹಾದೇವ್, ಪ್ರಮೋದ್‌ಕುಮಾರ್, ತಾಪಂ ಮಾಜಿ ಸದಸ್ಯೆ ಮುತ್ತಮ್ಮ ನಾಗರಾಜು, ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.