ಮಲ್ಲಿಕಾರ್ಜುನ ಖರ್ಗೆ ಚುಟ್‌ ಪುಟ್‌ ಹೇಳಿಕೆಯಿಂದ ಸೈನ್ಯಕ್ಕೆ ಅವಮಾನ

KannadaprabhaNewsNetwork |  
Published : May 23, 2025, 12:20 AM IST
4466 | Kannada Prabha

ಸಾರಾಂಶ

ದಶಕಗಳ ಕಾಲ ರಾಜಕೀಯ ಅನುಭವವಿರುವ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ವಿಷಯದಲ್ಲಿ ಈರೀತಿ ಮಾತನಾಡಿರುವುದು ಖಂಡನೀಯ. ಪ್ರಧಾನಿ ನರೇಂದ್ರ ಮೋದಿ ಕಳೆದೊಂದು ದಶಕದಿಂದ ಸೇನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸೇನೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಇದರ ಫಲಶ್ರುತಿಯಿಂದ ಆಪರೇಷನ್ ಸಿಂದೂರ ನಡೆದಾಗ ನಮ್ಮ ಸೇನಾ ಪಡೆಗಳು ಪಾಕಿಸ್ತಾನದ ವಾಯುನೆಲೆಗಳನ್ನು ಧ್ವಂಸ ಮಾಡುವಲ್ಲಿ ಯಶಸ್ವಿಯಾಗಿವೆ.

ಮುನಿರಾಬಾದ್:

ಪಾಕಿಸ್ತಾನದ ಮೇಲೆ ಚುಟ್‌ ಪುಟ್‌ ಯುದ್ಧವಾಗಿದೆ ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೇಶದ ಸೈನಿಕರನ್ನು ಅವಮಾನಿಸಿದ್ದಾರೆಂದು ವಿಪ ಸದಸ್ಯೆ ಹೇಮಲತಾ ನಾಯಕ್ ಆರೋಪಿಸಿದರು.

ಹುಲಿಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್‌ನಲ್ಲಿ ಪ್ರತೀಕಾರಕ್ಕೆ ಭಾರತದ ಸೇನೆ ಪಾಕಿಸ್ತಾನದ ಮೇಲೆ ನಡೆಸಿದ ಆಪರೇಷನ್‌ ಸಿಂದೂರ ಯುದ್ಧವನ್ನು ಚುಟ್ ಪುಟ ಎಂದು ಕರೆಯುವ ಮೂಲಕ ತಮ್ಮ ಮನಸ್ಥಿತಿ ತೋರಿಸಿದ್ದಾರೆ ಎಂದರು.

ದಶಕಗಳ ಕಾಲ ರಾಜಕೀಯ ಅನುಭವವಿರುವ ಅವರು ದೇಶದ ವಿಷಯದಲ್ಲಿ ಈರೀತಿ ಮಾತನಾಡಿರುವುದು ಖಂಡನೀಯ ಎಂದಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಕಳೆದೊಂದು ದಶಕದಿಂದ ಸೇನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸೇನೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಇದರ ಫಲಶ್ರುತಿಯಿಂದ ಆಪರೇಷನ್ ಸಿಂದೂರ ನಡೆದಾಗ ನಮ್ಮ ಸೇನಾ ಪಡೆಗಳು ಪಾಕಿಸ್ತಾನದ ವಾಯುನೆಲೆಗಳನ್ನು ಧ್ವಂಸ ಮಾಡುವಲ್ಲಿ ಯಶಸ್ವಿಯಾಗಿವೆ. ಪಾಕಿಸ್ತಾನದ ಡ್ರೋನ್ ಹಾಗೂ ಮಿಸೈಲ್‌ಗಳನ್ನು ಅವರದೆ ಗಡಿಯಲ್ಲಿ ಹೊಡೆದು ಹಾಕಿ ಆಸ್ತಿ ಹಾಗೂ ಜನರನ್ನು ರಕ್ಷಿಸಿದ್ದಾರೆ. ಇಂಥ ಅದ್ಭುತವಾದ ಕಾರ್ಯವನ್ನು ಮಾಡಿದ ಸೇನೆಗೆ ಖರ್ಗೆ ಅಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ