ಮಳೆ ಪರಿಹಾರದ ಮೊತ್ತ ಹೆಚ್ಚಳಕ್ಕೆ ಆಗ್ರಹ

KannadaprabhaNewsNetwork |  
Published : May 23, 2025, 12:19 AM IST
22ಕೆಪಿಡಿವಿಡಿ01:  | Kannada Prabha

ಸಾರಾಂಶ

ಸರ್ಕಾರ ಈ ತಕ್ಷಣವೇ ಸತ್ತವರ ಕುಟುಂಬದ ಸದಸ್ಯರಿಗೆ ಪರಿಹಾರ ಧನವಾಗಿ 20 ಲಕ್ಷ ರುಪಾಯಿಗಳನ್ನು ಹಾಗೂ ಗಾಯಗೊಂಡವರಿಗೆ 10 ಲಕ್ಷ ರುಪಾಯಿಗಳು ಮರಣ ಹೊಂದಿದ ಜಾನುವಾರುಗಳಿಗೆ 5 ಲಕ್ಷ ರುಪಾಯಿಗಳ ಪರಿಹಾರ ಹಣ ಬಿಡುಗಡೆಗೆ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದೇವದುರ್ಗಮಳೆಯಿಂದಾಗಿ ಪ್ರಾಣ ಹಾನಿಯಾದ ಕುಟುಂಬಸ್ಥರಿಗೆ ಹಾಗೂ ಗಾಯಗೊಂಡವರಿಗೆ ಸರ್ಕಾರದಿಂದ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಿಸುವುದು ಸೇರಿ ನಾನಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಎಂದು ವಿವಿಧ ಸಂಘಟನೆಗಳಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಮಿನಿ ವಿಧಾನಸೌಧಕ್ಕೆ ಆಗಮಿಸಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಘೋಷಣೆ ಕೂಗಿದರು. ನಂತರ ತಹಸೀಲ್ದಾರ್‌ ಕಚೇರಿ ಅಧಿಕಾರಿ ಮುಖಾಂತರ ಜಿಲ್ಲಾಡಳಿತ, ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದರು. ದೇವದುರ್ಗ ತಾಲೂಕು ಸೇರಿ ಜಿಲ್ಲೆಯಾದ್ಯಂತ ಅಕಾಲಿಕ ಮಳೆಯಿಂದ ಸಿಡಿಲಿನ ಹೊಡೆತಕ್ಕೆ ಜನಜಾನುವಾರುಗಳ ಸಾವು ನೋವುಗಳು ಉಂಟಾಗಿದ್ದು ಸತ್ತವರ ಕುಟುಂಬಕ್ಕೆ ಸರ್ಕಾರದಿಂದ ಜಿಲ್ಲಾಡಳಿತವು 5 ಲಕ್ಷ ರು. ಪರಿಹಾರ ಹಣ ನೀಡಿದೆ. ಇದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ.

ಸರ್ಕಾರ ಈ ತಕ್ಷಣವೇ ಸತ್ತವರ ಕುಟುಂಬದ ಸದಸ್ಯರಿಗೆ ಪರಿಹಾರ ಧನವಾಗಿ 20 ಲಕ್ಷ ರುಪಾಯಿಗಳನ್ನು ಹಾಗೂ ಗಾಯಗೊಂಡವರಿಗೆ 10 ಲಕ್ಷ ರುಪಾಯಿಗಳು ಮರಣ ಹೊಂದಿದ ಜಾನುವಾರುಗಳಿಗೆ 5 ಲಕ್ಷ ರುಪಾಯಿಗಳ ಪರಿಹಾರ ಹಣವನ್ನು ಈ ತಕ್ಷಣವೇ ಜಿಲ್ಲಾಡಳಿತ ಘೋಷಣೆ ಮಾಡಿ ಕುಟುಂಬ ಸದಸ್ಯರಿಗೆ ಶಾಶ್ವತ ಪರಿಹಾರವಾಗಿ ಸರ್ಕಾರಿ ನೌಕರಿಯನ್ನು ನೀಡಬೇಕು ಒತ್ತಾಯಿಸಿದರು.ಹವಮಾನ ಇಲಾಖೆಯಿಂದ ವಿಶೇಷ ತಜ್ಞರ ತಮಡ ರಚಿಸಿ, ಸಿಡಿಲು ಆಕರ್ಷಣೆಯ ಸ್ಥಳಗಳನ್ನು ಪತ್ತೆ ಹಚ್ಚಿ, ಸಿಡಿಲು ನಿರೋಧಕ ಉಪಕರಣಗಳನ್ನು ಅಳವಡಿಸಬೇಕು, ಇದರೊಟ್ಟಿಗೆ ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ಜಿಲ್ಲಾ, ತಾಲೂಕು, ಪಟ್ಟಣ ಹಾಗೂ ಗ್ರಾಮೀಣ ಭಾಗಕ್ಕೆ ತಿಳಿಸುವಂತಹ ಪ್ರಚಾರವನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾಡಬೇಕು, ಪ್ರವಾಹ, ಮಳೆ ಹಾನಿ ಸಮಯದಲ್ಲಿ ಕೈಗೊಳ್ಳಬೇಕಾದ ಅಗತ್ಯ ಜಾಗ್ರತೆಗಳನ್ನು ವಹಿಸಬೇಕು ಎಂದು ಅಗ್ರಹಿಸಿದರು.ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಹನುಮಂತಪ್ಪ ಮನ್ನಾಪುರ, ಮಲ್ಲಿಕಾರ್ಜನ ಪಾಟೀಲ್, ಹನುಮಗೌಡ ನಾಯಕ, ರಾಘವೇಂದ್ರ ನಾಯಕ ಅಂಜಳ, ಎಚ್.ಶಿವರಾಜ ಸೇರಿ ರೈತ, ಕನ್ನಡ ಪರ ಸಂಘಟನೆಗಳ ಸದಸ್ಯರು, ಗ್ರಾಮಸ್ಥರು ಇದ್ದರು.----- 22ಕೆಪಿಡಿವಿಡಿ01: ದೇವದುರ್ಗ ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

PREV

Recommended Stories

ಸರ್ಕಾರಿ ಯೋಜನೆ ತಲುಪಲು ‘ಅರಿವು’ ಕಾರ್ಯಕ್ರಮ ಸಹಕಾರಿ: ಯಶ್ಪಾಲ್‌ ಸುವರ್ಣ
ತಾಯಿ ಹೆಸರಿನಲ್ಲಿ ಒಂದು ಸಸಿ ಹಾಗೂ ಬೀಜದುಂಡೆ ಕಾರ್ಯಕ್ರಮಕ್ಕೆ ಚಾಲನೆ